ಹೊರ್ತಿ: ಇಂಡಿ ತಾಲ್ಲೂಕಿನ ಬಳ್ಳೊಳ್ಳಿ ನಾಡಕಚೇರಿಯಲ್ಲಿ ಬಂದ್ ಆಗಿದ್ದ ಆಧಾರ್ ಸೇವಾ ಕೇಂದ್ರ ಪುನಃ ಪ್ರಾರಂಭಿಸಬೇಕು ಎಂದು ಬಳ್ಕೊಳ್ಳಿ ನಾಡಕಚೇರಿ ಉಪತಹಶೀಲ್ದಾರ್ ಆನಂದ ಪಮ್ಮಾರ ಅವರಿಗೆ ಝಳಕಿ, ಬಳ್ಳೊಳ್ಳಿ ಗ್ರಾಮಸ್ಥರು ಶುಕ್ರವಾರ ಮನವಿ ಸಲ್ಲಿಸಿದರು.

ಸ್ಥಳೀಯರಾದ ರಾಘವೇಂದ್ರ ಕಾಪಸೆ, ಈರಣ್ಣಗೌಡ ಪಾಟೀಲ ಮಾತನಾಡಿ, ಆಧಾರ್ ಕಾರ್ಡ್ ಸೇವಾ ಕೇಂದ್ರ ಬಂದ್ ಆಗಿರುವುದರಿಂದ ಜನರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇದನ್ನು ಮೇಲ್ಮಟ್ಟದ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಮನವಿಯನ್ನು ಜಿಲ್ಲಾಧಿಕಾರಿಯವರಿಗೆ ತಿಳಿಸಿ, ತ್ವರಿತ ಕ್ರಮಕೈಗೊಳ್ಳಲಾಗುವುದು. ಆಧಾರ್ ಸೇವಾಕೇಂದ್ರ ಪುನಃ ಪ್ರಾರಂಭಿಸಲಾಗುವುದು ಎಂದು ಉಪ ತಹಶೀಲ್ದಾರ್ ಆನಂದ ಪಮ್ಮಾರ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.