ಬಸವನಬಾಗೇವಾಡಿ : ಬಸವನಬಾಗೇವಾಡಿ, ವಿಜಯಪುರ ಹಾಗೂ ಇಂಡಿ ಮೂರೂ ತಾಲ್ಲೂಕುಗಳಲ್ಲಿ ₹1,300 ಕೋಟಿ ವೆಚ್ಚದಲ್ಲಿ 2050ರವರೆಗೂ ಅವಶ್ಯವಿರುಷ್ಟು ನಿರಂತರ 24X7 ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಕಾರ್ಯಕ್ಕೆ ಬರುವ ವರ್ಷದಲ್ಲೇ ಉದ್ಘಾಟನೆ ನೆರವೇರಿಸಲಿದ್ದೇವೆ ಎಂದು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಘೋಷಿಸಿದರು.

ತಾಲ್ಲೂಕಿನ ಡೋಣೂರು ಗ್ರಾಮದಲ್ಲಿ ಕಟ್ಟಿಮನಿ ಹಿರೇಮಠದ ಶ್ರೀಗುರು ಮರುಳಸಿದ್ದೇಶ್ವರ ಜಾತ್ರೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಹಾಗೂ ಅಭಿನಂದನಾ ಗೌರವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಡೋಣೂರು ಸರ್ವಾಂಗೀಣ ಅಭಿವೃದ್ಧಿ ಆಗಬೇಕೆಂಬುದು ನಮ್ಮೆಲ್ಲರ ಕನಸು. ಶಿಥಿಲಾವಸ್ಥೆಯಲ್ಲಿರುವ ಡೋಣೂರು ಸೇತುವೆ ನಿರ್ಮಿಸಲು ಸಚಿವ ಸಂಪುಟದಲ್ಲಿ ₹ 35 ಕೋಟಿ ಅನುದಾನಕ್ಕೆ ಅನುಮೋದನೆ ಸಿಕ್ಕಿದೆ. ನೇಗಿನಾಳ ಸೇತುವೆ ಸಹ ಕಟ್ಟುತ್ತಿದ್ದೇವೆ. ಪೂಜ್ಯ ಮರುಳಸಿದ್ದೇಶ್ವರ ಜಾತ್ರೆ ನಿಮಿತ್ತ ಸಿದ್ದಲಿಂಗ ಪೂಜ್ಯರು ಸಾಮೂಹಿಕ ವಿವಾಹ, ಸರ್ವಧರ್ಮ ಸಮ್ಮೇಳನದಂತಹ ಅನೇಕ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಊರಿನಲ್ಲಿ ಹೊಸತನ ಸೃಷ್ಟಿಸಿ ಮೆರುಗು ತಂದುಕೊಟ್ಟಿದ್ದಾರೆ.

ಜಾಲಹಳ್ಳಿ ಸಂಸ್ಥಾನಮಠದ ಜಯಶಾಂತಲಿಂಗ ಶಿವಾಚಾರ್ಯರು ಮಾತನಾಡಿದರು.

ಬಂಥನಾಳದ ವೃಷಭಲಿಂಗ ಶಿವಯೋಗಿಗಳು, ಬೆಂಗಳೂರು ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ಮಹಾಸ್ವಾಮಿಗಳು, ಶಿರಶ್ಯಾಡದ ಮುರುಘಂದ್ರ ಸ್ವಾಮೀಜಿಗಳು, ಮನಗೂಳಿ ಮತ್ತು ಬೆಂಗಳೂರಿನ ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯರು, ಕವಲಗಿಯ ಅಭಿನವ ಸಿದ್ದರಾಮೇಶ್ವರ ಪೂಜ್ಯರು ಸೇರಿದಂತೆ ಅನೇಕ ಪರಮಪೂಜ್ಯರು ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ ಜೈನಾಪೂರದ ರೇಣುಕ ಶಿವಾಚಾರ್ಯರು, ಚಿಮ್ಮಲಗಿಯ ಸಿದ್ದ ರೇಣುಕ ಶಿವಾಚಾರ್ಯರು, ತಡವಲಗಾದ ರಾಯಚೋಟೇಶ್ವರ ಶ್ರೀಗಳು, ಇಂಗಳೇಶ್ವರ ಬೃಂಗೀಶ್ವರಲಿಂಗ ಶಿವಾಚಾರ್ಯರು, ಕವಲಗಿಯ ಅಭಿನವ ಸಿದ್ದರಾಮೇಶ್ವರ ಶ್ರೀಗಳು ಸೇರಿದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹಾಗೂ ಅನೇಕ ಪೂಜ್ಯರು, ಪ್ರಮುಖರು ಭಾಗಿಯಾಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-26-707395533

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.