ವಿಜಯಪುರ: ‘ಮೇ ಸಾಹಿತ್ಯ ಬಳಗದಿಂದ ಸಂಘಟಿಸಲಾಗಿದ್ದ ಪುಸ್ತಕ ಮೇಳ ಯಶಸ್ವಿಯಾಗಿದ್ದು, ₹5 ಲಕ್ಷಕ್ಕೂ ಹೆಚ್ಚಿನ ವಹಿವಾಟು ನಡೆದಿದೆ’ ಎಂದು ಮೇ ಸಾಹಿತ್ಯ ಬಳಗದ ಅನೀಲ ಹೊಸಮನಿ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬುದ್ಧ, ಬಸವ ಹಾಗೂ ಬಾಬಾಸಾಹೇಬರ ತತ್ವ ಚಿಂತನೆ, ಆಶಯಗಳ ಆಧರಿಸಿ ಸಮಾಜ ಇನ್ನೂ ನಿರ್ಮಾಣವಾಗಿಲ್ಲ. ಈ ಮಹನೀಯರ ಸಮ ಸಮಾಜದ ಕನಸು ನನಸಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕಿದೆ. ಈ ಪ್ರಯತ್ನದ ಭಾಗವಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿರುವ ಯುವಜನರಿಗೆ ಹೊತ್ತಿಗೆಯ ಒಲವು ಮೂಡಿಸುವ ನಿಟ್ಟಿನಲ್ಲಿ ಈ ಪುಸ್ತಕ ಮೇಳವನ್ನು ಆಯೋಜಿಸಲಾಗಿತ್ತು, ನಮ್ಮ ಕರೆಗೆ ಓಗೊಟ್ಟು 35ಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳು ಆಗಮಿಸಿದ್ದವು’ ಎಂದರು.

‘ವಿಜಯಪುರದಲ್ಲಿ ಪುಸ್ತಕ ಖರೀದಿ ಆಗುವುದಿಲ್ಲ ಎಂಬ ಮನೋಭಾವ ಹೊಂದಿದ್ದರು, ಆದರೆ ಇಲ್ಲಿ ಬಂದ ಮೇಲೆ ಅವರ ಅಭಿಪ್ರಾಯ ಹಾಗೂ ಮನೋಭಾವ ಬದಲಾಗಿದ್ದು, ಅನೇಕರು ಆಸಕ್ತಿಯಿಂದ ಪುಸ್ತಕ ಖರೀದಿ ಮಾಡಿರುವುದು ಪ್ರಕಾಶಕರಿಗೆ ಸಂತಸ ಮೂಡಿಸಿದೆ. ₹5 ಲಕ್ಷಕ್ಕೂ ಹೆಚ್ಚಿನ ಪುಸ್ತಕದ ವ್ಯಾಪಾರ, ವಹಿವಾಟು ನಡೆದಿರುವುದು ಜನತೆ ಪುಸ್ತಕದ ಬಗ್ಗೆ ಹೊಂದಿರುವ ಒಲವಿಗೆ ಸಾಕ್ಷಿ’ ಎಂದರು.

‘ಸಾಮಾನ್ಯ ಬಡ ಕುಟುಂಬದಿಂದ ಬಂದವರೇ ಸಂಘಟಿಸಿದ ಈ ಪುಸ್ತಕ ಮೇಳಕ್ಕೆ ಅನೇಕರು ಉದಾರವಾದ ಸಹಾಯ ಹಸ್ತ ಚಾಚಿದ್ದಾರೆ, ಅವರಿಗೆ ಮೇಳ ಚಿರ ಋಣಿಯಾಗಿದೆ. ಅನೇಕ ಸ್ವಯಂ ಪ್ರೇರಿತವಾಗಿ ಶ್ರಮಿಸಿದ ದೊಡ್ಡ ಪಡೆಯೇ ಇದೆ’ ಎಂದರು.

ಮೇ ಸಾಹಿತ್ಯ ಬಳಗದ ಪ್ರಮುಖರಾದ ಚೆನ್ನು ಕಟ್ಟಿಮನಿ, ಲಾಯಪ್ಪ ಇಂಗಳೆ, ವೈ.ಎಸ್. ಗುಣಕಿ, ಸಾಯಬಣ್ಣ ಹಳ್ಳಿ, ಸೋಮಲಿಂಗ ರಣದೇವಿ, ಲಿಂಗರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-26-883406014

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.