ವಿಜಯಪುರ: ನೂತನ ಮುಖ್ಯಮಂತ್ರಿ ಶಿವಕುಮಾರ್ ಅವರ ಸಂಪುಟದಲ್ಲಿ ನಿರೀಕ್ಷೆಯಂತೆ ಎಂ.ಬಿ.ಪಾಟೀಲ ಅವರಿಗೆ ಸಚಿವ ಸ್ಥಾನ ಲಭಿಸಿದೆ. ಜೊತೆಗೆ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನದ ನಿರೀಕ್ಷೆ ಇದ್ದು, ಮುಂಬರುವ ಸಚಿವ ಸಂಪುಟ ವಿಸ್ತರಣೆ ವೇಳೆ ಅವಕಾಶ ಲಭಿಸುವ ಸಾಧ್ಯತೆ ದಟ್ಟವಾಗಿದೆ.

‘ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಸಿಗಲಿದೆ’ ಎಂದು ಸಚಿವ ಎಂ.ಬಿ.ಪಾಟೀಲ ಅವರು ಬೆಂಗಳೂರಿನಲ್ಲಿ ಹೇಳಿರುವುದು ಮತ್ತಷ್ಟು ಪುಷ್ಟಿ ನೀಡಿದೆ. ಆ ಇನ್ನೊಂದು ಸಚಿವ ಸ್ಥಾನಕ್ಕೆ ಜಿಲ್ಲೆಯಲ್ಲಿ ಯಾರಿಗೆ ಅವಕಾಶ ಲಭಿಸಲಿದೆ ಎಂಬುದು ಕುತೂಹಲ ಮೂಡಿದೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಶಿವಾನಂದ ಪಾಟೀಲರಿಗೆ ಇನ್ನುಳಿದ ಎರಡು ವರ್ಷಕ್ಕೆ ಅವಕಾಶ ಲಭಿಸಲಿದೆಯೋ ಅಥವಾ ಇಂಡಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯಶವಂತರಾಯ ಗೌಡರಿಗೋ ಅಥವಾ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡರಿಗೆ ಅವಕಾಶ ಲಭಿಸಲಿದೆಯೋ ಎಂಬುದು ಇತ್ಯರ್ಥ ವಾಗಬೇಕಿದೆ.

‘ಸಚಿವ ಸ್ಥಾನದ ಭರವಸೆ ಯಶವಂತರಾಯಗೌಡರಿಗೆ ಈ ಹಿಂದೆಯೇ ಲಭಿಸಿದ್ದು, ಅವರೇ ಸಚಿವರಾಗುವುದು ನಿಶ್ಚಿತ’ ಎಂಬ ಮಾತು ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಯಶವಂತರಾಯಗೌಡರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಒದಗಿ ಬಂದಾಗ ಅದನ್ನು ನಯವಾಗಿ ತಿರಸ್ಕರಿಸಿ, ತಮ್ಮ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಕೊಡಿಸಿದ್ದರು. ‘ನನಗೆ ಕೊಡುವುದಿದ್ದರೆ ಸಚಿವ ಸ್ಥಾನ ಕೊಡಿ, ಇಲ್ಲವಾದರೆ ಬೇಡ’ ಎಂದೇ ಹೈಕಮಾಂಡ್, ಸಿದ್ದರಾಮಯ್ಯಗೆ ಮನವಿ ಮಾಡಿದ್ದರು. ಸಿ.ಎಸ್. ನಾಡಗೌಡ ಅವರು ಈಗಾಗಲೇ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಅಧ್ಯಕ್ಷರಾಗಿರುವುದರಿಂದ ಅವರು ಅದೇ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದ್ದು, ಸಚಿವರಾಗುವುದು ನಿಶ್ಚಿತವಿಲ್ಲ ಎನ್ನಲಾಗುತ್ತಿದೆ. ಸ್ವಾತಂತ್ರ್ಯ ಬಂದಲ್ಲಿಂದ ಇಲ್ಲಿಯ ವರೆಗೂ ಇಂಡಿ ಕ್ಷೇತ್ರದಿಂದ ಯಾರೊಬ್ಬರೂ ಸಚಿವರಾಗಿಲ್ಲ. ಜಿಲ್ಲೆಯ ಇನ್ನುಳಿದ ಎಲ್ಲ ಕ್ಷೇತ್ರಗಳ ಶಾಸಕರೂ ಸಚಿವರಾಗಿದ್ದಾರೆ. ಈ ಹಿನ್ನೆಲೆಯಲ್ಲೂ ಇಂಡಿ ಶಾಸಕರಿಗೆ ಸಚಿವ ಸ್ಥಾನ ಲಭಿಸಲಿದೆ ಎಂಬ ಮಾತು ಕೇಳಿಬಂದಿದೆ. ಅಲ್ಲದೇ, ಮೂರು ಬಾರಿ ಶಾಸಕರಾಗಿ ಉತ್ತಮ ಕಾರ್ಯ ನಿರ್ವಹಿಸಿ, ಇಂಡಿಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಸಿರುವ ಕಾರಣಕ್ಕೆ ಯಶವಂತರಾಯರಿಗೆ ಅವಕಾಶ ನೀಡಬೇಕು ಎಂಬ ಕೂಗು ಕೇಳಿಬಂದಿದೆ. ‘ಜೂನ್ 19ರ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಆಗ ಯಶವಂತರಾಯಗೌಡ ಪಾಟೀಲರು ಸಚಿವರಾಗಲಿದ್ದಾರೆ’ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಶಿವಾನಂದಗೆ ಸಚಿವ ಸ್ಥಾನ ಕೈತಪ್ಪಿದ್ದೇಕೆ?

ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲರಿಗೆ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ಕೈತಪ್ಪಲು ಕಾರಣಗಳೇನು? ಎಂಬುದರ ಕುರಿತು ವಿಜಯಪುರ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಚರ್ಚೆ ನಡೆದಿದೆ.

‘ಶಿವಾನಂದ ಪಾಟೀಲರು ತಮಗೆ ವಹಿಸಿದ್ದ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿಲ್ಲ, ವಿಜಯಪುರ ಜಿಲ್ಲೆಗೂ ಅಪರೂಪದ ಅತಿಥಿಯಾಗಿದ್ದರು, ಕೇವಲ ತಮ್ಮ ಕ್ಷೇತ್ರ ಬಸವನ ಬಾಗೇವಾಡಿಗೆ ಸೀಮಿತವಾಗಿದ್ದರು, ವಿಜಯಪುರಕ್ಕೆ ಬಂದಾಗ ಕೇವಲ ತಮ್ಮ ಅಧ್ಯಕ್ಷತೆಯ ಡಿಸಿಸಿ ಬ್ಯಾಂಕಿಗೆ ಸೀಮಿತವಾಗಿದ್ದರು’ ಎಂಬ ಆರೋಪ ಕೇಳಿಬಂದಿದೆ.

‘ಕಾಂಗ್ರೆಸ್ ವರಿಷ್ಠರ ವಿರುದ್ಧದ ಬಿಜೆಪಿ ನಾಯಕರ ವಾಗ್ದಾಳಿಗೆ ಶಿವಾನಂದ ಪಾಟೀಲರು ಎಂದೂ ಪ್ರತಿಕ್ರಿಯೆ ನೀಡಲಿಲ್ಲ, ಬಿಜೆಪಿಯನ್ನು ಪ್ರಬಲವಾಗಿ ವಿರೋಧಿಸಲಿಲ್ಲ’ ಎಂಬ ವಿಶ್ಲೇಷಣೆ ನಡೆದಿದೆ.

‘ತಮ್ಮ ಖಾತೆಯಿಂದ ಜಿಲ್ಲೆಗೆ ಯಾವುದೇ ಕೊಡುಗೆ ನೀಡಲಿಲ್ಲ, ತಮ್ಮ ಬೆಂಬಲಿಗ ಮುಖಂಡರಿಗೆ ಅಧಿಕಾರ, ಸ್ಥಾನಮಾನ ಕೊಡಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ, ಸುದ್ದಿ ಮಾಧ್ಯಮಗಳಿಂದಲೂ ದೂರವಾಗಿದ್ದರು’ ಎಂಬ ಆರೋಪಗಳು ಕೇಳಿಬಂದಿವೆ. ಈ ಎಲ್ಲ ವೈಫಲ್ಯಗಳ ಆಧಾರದ ಮೇಲೆ ಶಿವಾನಂದ ಪಾಟೀಲರಿಗೆ ಸಚಿವ ಸ್ಥಾನ ಕೈತಪ್ಪಿದೆ ಎನ್ನಲಾಗುತ್ತಿದೆ. ಆದರೂ ಮುಂಬರುವ ಸಚಿವ ಸಂಪುಟ ವಿಸ್ತರಣೆ ವೇಳೆ ಅವಕಾಶ ಲಭಿಸುವುದೇ ಎಂದು ಕಾಡುನೋಡಬೇಕಿದೆ.

ಎಂ.ಬಿ.ಪಾಟೀಲಗೆ ಯಾವ ಖಾತೆ?

ಸಚಿವ ಎಂ.ಬಿ.ಪಾಟೀಲ ಅವರು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ ಯಶಸ್ವಿಯಾಗಿದ್ದಾರೆ. ಇದೀಗ ಅದೇ ಖಾತೆಯಲ್ಲೇ ಮುಂದುವರಿಯುವರೇ ಅಥವಾ ಅವರ ಕನಸಿನ ಜಲ ಸಂಪನ್ಮೂಲ ಖಾತೆ ಲಭಿಸುವುದೇ ಎಂಬುದು ಕುತೂಹಲ ಮೂಡಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಬೇಕಾದ ಹಾಗೂ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಬೇಕಾದ ಸವಾಲು ರಾಜ್ಯ ಸರ್ಕಾರದ ಮುಂದೆ ಇರುವುದರಿಂದ ಜಲ ಸಂಪನ್ಮೂಲ ಖಾತೆಯ ಜವಾಬ್ದಾರಿಯನ್ನು ಎಂ.ಬಿ.ಪಾಟೀಲರಿಗೆ ವಹಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಯಾವ ಖಾತೆ ಕೊಟ್ಟರೂ ನಿಬಾಯಿಸುವೆ: ‘ಈ ಹಿಂದೆ ಜಲಸಂಪನ್ಮೂಲ ಸಚಿವನಾಗಿ, ಗೃಹ ಸಚಿವನಾಗಿ ಮತ್ತು ಕೈಗಾರಿಕಾ ಸಚಿವನಾಗಿ ಮಾಡಿದ ಕಾರ್ಯ ನನಗೆ ತೃಪ್ತಿ ತಂದಿದೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆಶೀರ್ವಾದದಿಂದ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದೇನೆ. ಜಿಲ್ಲೆಯ ಜನತೆಯ ಆಶೀರ್ವಾದದಿಂದ ಇದೀಗ ಮತ್ತೆ ಸಚಿವನಾಗಿದ್ದೇನೆ. ಖಾತೆ ಯಾವುದೂ ಸಣ್ಣದಲ್ಲ, ದೊಡ್ಡದಲ್ಲ. ಗ್ರಂಥಾಲಯ ಸಚಿವನಾದರೂ ಪ್ರತಿ ಹಳ್ಳಿಗಳಲ್ಲಿ ಗ್ರಂಥಾಲಯ ತೆರೆದು ಜ್ಞಾನದ ಪ್ರಸಾರ ಮಾಡಿ, ಆ ಇಲಾಖೆಯ ಘನತೆ ಹೆಚ್ಚಿಸಬಹುದು’ ಎಂದು ಎಂ.ಬಿ.ಪಾಟೀಲ ಹೇಳುವ ಮೂಲಕ ಯಾವ ಖಾತೆ ನೀಡಿದರೂ ಸಮರ್ಥವಾಗಿ ನಿಬಾಯಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ನಿಂದ 6 ಜನ ಶಾಸಕರಿದ್ದೇವೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಇನ್ನೊಂದು ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಗೆ ವೈಯಕ್ತಿಕವಾಗಿ ವಿನಂತಿಸಿದ್ದೇನೆ. ಮುಂದಿನ ಸಚಿವ ಸಂಪುಟದಲ್ಲಿ ಅದು ಈಡೇರಲಿದೆ
-ಎಂ.ಬಿ.ಪಾಟೀಲ,ಸಚಿವ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-26-2046083459

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.