ಚಿಂಚೋಳಿ: ಪ್ರವಾಸ ಮುಗಿಸಿಕೊಂಡು ಊರಿಗೆ ಬರುತ್ತಿದ್ದ ಕಾರೊಂದು ಅಪಘಾತಕ್ಕೀಡಾದ ಘಟನೆಯಲ್ಲಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ರೋಣಿಹಾಳ ಬಳಿ ಸಂಭವಿಸಿದೆ.

ಚಿಂಚೋಳಿ ಪಟ್ಟಣದ ಐದು ಜನ ಯುವಕರು ಕಾರಿನಲ್ಲಿ ತೆರಳಿ ಪ್ರವಾಸ ಮುಗಿಸಿಕೊಂಡು ವಾಪಸ್ಸಾಗುವ ವೇಳೆ ಸಂಭವಿಸಿದ ಅಪಘಾತದಲ್ಲಿ ಓರ್ವ ಯುವಕನ ಜೀವನದ ಪಯಣ ಅಂತ್ಯವಾಗಿದ್ದರೆ ನಾಲ್ವರು ಯುವಕರು ಗಾಯಗೊಂಡಿದ್ದಾರೆ.

ಪಟ್ಟಣದ ಸಿದ್ಧಸಿರಿ ಸೌಹಾರ್ದ ಸಹಕಾರಿಯಲ್ಲಿ ಪಿಗ್ಮಿ ಸಂಗ್ರಹಿಸುವುದರ ಜತೆಗೆ ಸಿದ್ಧಸಿರಿ ಅತಿಥಿಗೃಹ ಮೇಲ್ವಿಚಾರಣೆ ಮಾಡುತ್ತಿದ್ದ ಉದ್ಯೋಗಿ ಸುನೀಲ ಶಾಂತಕುಮಾರ ಮನ್ನಳ್ಳಿ (26) ಮಂಗಳವಾರ ನಸುಕಿನ ಜಾವ ಅಸುನೀಗಿದ್ದಾರೆ. ಘಟನೆಯಲ್ಲಿ ಚನ್ನಬಸವ ಹಲಚೇರಿ, ಪ್ರದೀಪ ಬೀರನಳ್ಳಿ, ಪವನ ಗುರಂಪಳ್ಳಿ, ಸಂಗಮೇಶ ಗಾಯಗೊಂಡಿದ್ದಾರೆ.

ನಸುಕಿನ ಜಾವ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ತಲೆ ಕೆಳಗಾಗಿ ಬಿದ್ದಿದೆ. ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುವ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಯುವಕ ಹೀಗೆ ದುರ್ಮರಣಕ್ಕಿಡಾಗಿದ್ದು, ಅವರ ಸ್ನೇಹಿತರಿಗೆ ಅರಗಿಸಿಕೊಳ್ಳಲು ಸಾಧ್ಯವಾಗದಂತಾಗಿದೆ.

ಬಾಳಿ ಬದುಕಬೇಕಿದ್ದ ಜೀವವೊಂದು ಅರಳುವ ಮೊದಲೇ ಕಮರಿದೆ. ಸಿದ್ಧಸಿರಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಂಸ್ಥೆಯ ಸಂಸ್ಥಾಪಕರು ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಮತ್ತು ಅವರ ಪುತ್ರ ರಾಮನಗೌಡರಿಗೂ ಆಪ್ತನಾಗಿದ್ದನು.

ಛತ್ರಪತಿ ಶಿವಾಜಿ ಜಯಂತಿ, ಬಸವೇಶ್ವರ ಜಯಂತಿ ಸೇರಿದಂತೆ ಜಾತ್ರೆ, ಜಯಂತ್ಯುತ್ಸವಗಳಲ್ಲಿ ಮಿಂಚಿನಂತೆ ಸಂಚರಿಸುತ್ತಿದ್ದ ಯುವಕ ಇಷ್ಟು ಬೇಗ ಕಣ್ಮರೆಯಾಗುತ್ತಾನೆ ಎಂದು ಯಾರು ಉಹಿಸಿರಲಿಲ್ಲ. ಮೃತನಿಗೆ ತಂದೆ–ತಾಯಿ ಹಾಗೂ ಒಬ್ಬ ಸಹೋದರ ಇದ್ದಾರೆ.

ಮೃತನ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಪಟ್ಟಣದ ವೀರಶೈವ ಲಿಂಗಾಯತ ಸಮಾಜದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-34-1845460140

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.