ವಿಜಯಪುರ: ‘ಭವಿಷ್ಯದಲ್ಲಿ ದೇಶದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಜನಗಣತಿಯೇ ಆಧಾರ’ ಎಂದು ಜಿಲ್ಲಾ ಆರ್ಥಿಕ ಮತ್ತು ಸಾಂಖ್ಯಿಕ ಅಧಿಕಾರಿ ಜ್ಯೋತಿ ದೇಶಪಾಂಡೆ ಹೇಳಿದರು.

ನಗರದ ದರಬಾರ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ `ಜನಗಣತಿ ಸಮಾಜದ ಪ್ರಗತಿಗೆ ಆಧಾರ' ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರ ನಮ್ಮ ತಂದೆ ತಾಯಿ ಇದ್ದ ಹಾಗೆ, ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ಹೇಗೆ ಯೋಜನೆಗಳನ್ನು ರೂಪಿಸುತ್ತಾರೋ, ಹಾಗೆ ದೇಶದ ಅಭಿವೃದ್ಧಿ ಹಾಗೂ ದೇಶದ ಜನರಿಗಾಗಿ ಯೋಜನೆಗಳನ್ನು ರೂಪಿಸಲು ಸರ್ಕಾರ ಜನಗಣತಿಯನ್ನು ನಡೆಸುತ್ತದೆ’ ಎಂದರು.

ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕ ಎ.ಬಿ ಮಣಿಕಾರ ಮಾತನಾಡಿ, ‘ದೇಶದ ಅಭಿವೃದ್ಧಿಗೆ, ಯೋಜನೆಗಳಿಗೆ, ಸಂಪನ್ಮೂಲ ಹಂಚಿಕೆಗೆ ಮತ್ತು ನೀತಿ -ನಿರೂಪಣೆಗೆ ಅಗತ್ಯವಾದ ಅಧಿಕೃತ ದತ್ತಾಂಶವೇ ಜನಗಣತಿ’ ಎಂದರು.

ವಿ.ಬಿ. ದರಬಾರ ಪಿಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ನಾಗರಾಜ್ ಮಾತನಾಡಿ, ‘ಜನಗಣತಿ ಎಂದರೆ ಸರ್ಕಾರದ ನೀತಿ - ನಿಯಮಗಳನ್ನು ರೂಪಿಸಲು, ಯೋಜನೆಗಳನ್ನು ಕಲ್ಪಿಸಲು ಎಲ್ಲ ವರ್ಗದವರ ಮಾಹಿತಿಯನ್ನು ಕಲೆ ಹಾಕುವುದು ಇದರ ಪ್ರಮುಖ ಉದ್ದೇಶವಾಗಿದ್ದು, ಇಲ್ಲಿ ಅಂಕಿ- ಅಂಶಗಳು ನಿಖರವಾಗಿರಬೇಕು ಮತ್ತು ಯಾವುದೇ ದೋಷಗಳಿಲ್ಲದೆ ಯಶಸ್ವಿಯಾಗಿ ಜನಗಣತಿ ನಡೆಸಬೇಕೆಂದರೆ, ನಾವು ಮಾಹಿತಿ ಹಂಚಿಕೆಯನ್ನು ಸರಿಯಾಗಿ ನೀಡಬೇಕು ಮತ್ತು ಪ್ರತಿಯೊಬ್ಬರು ಜನಗಣತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ದೇಶದ ಅಭಿವೃದ್ಧಿಗೆ ನಾವೆಲ್ಲರೂ ಪಾಲುದಾರರಾಗಬೇಕು’ ಎಂದರು.

ಪ್ರಾಚಾರ್ಯ ಜಿ.ಎಚ್. ಮಣ್ಣೂರ, ಸಮಾಜಶಾಸ್ತ್ರದ ಉಪನ್ಯಾಸಕ ಕೆ.ಡಿ. ಚೌಹಾಣ್ ಮಾತನಾಡಿದರು.

ಸುಭಾಷ್ ಪಾಟೀಲ್, ಎಂ.ಕೆ.ಕುಂಬಾರ್, ಭೂಗೋಳಶಾಸ್ತ್ರ ವಿಭಾಗದ ಉಪನ್ಯಾಸಕ ಎಂ.ಎಚ್. ಕೋಟ್ಯಾಲ, ಸೀಮಾ ಪಾಟೀಲ್, ಸ್ಮೀತಾ ದೇಸಾಯಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-26-2008926710

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.