ಚಡಚಣ: ‘ಪಟ್ಟಣದಲ್ಲಿ ಮೇ 28ರಂದು ಬೆಳಗ್ಗೆ 10 ಗಂಟೆಗೆ ಸ್ಥಳಿಯ ಗುರುಕೃಪಾ ಮಂಗಲ ಕಾರ್ಯಾಲಯದಲ್ಲಿ ಸಿದ್ಧೇಶ್ವರ ಸ್ವಾಮೀಜಿ ಸವಿ ನೆನಪಿಗಾಗಿ ಗುರು ನಮನ ಹಾಗೂ ಜೋಡೆತ್ತು ಹೊಂದಿದ ಭಾಗದ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಮಹೇಂದ್ರಕುಮಾರ ನಾಯಕ್ ಫೌಂಡೇಶನ್ ಅಧ್ಯಕ್ಷ ಮಹೇಂದ್ರಕುಮಾರ ನಾಯಕ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ‘ಕನೇರಿ ಸಿದ್ಧಗಿರಿ ಮಠದ ಅದೃಷ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಆಧ್ಯಾತ್ಮಿಕ ಚಿಂತಕ ಜಂಭುನಾಥ ಮಳಿಮಠ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜೋಡೆತ್ತು ಹೊಂದಿದ 200 ರೈತರಿಗೆ ಸನ್ಮಾನ, ‘ಸಾವಯವ ಕೃಷಿ’ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಹಿತಿ ರಾಜಶೇಖರ ಮಠಪತಿ ಅವರು ಸಿದ್ಧೇಶ್ವರ ಶ್ರೀಗಳ ಕುರಿತು ರಚಿಸಿದ ‘ಯೋಗಸ್ಥ; ಸಂತೆಯಿಂದ ಸಂತನೆಡೆಗೆ’ ಪುಸ್ತಕ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.

ಸಾಧ್ವಿ ಯೋಗೇಶ್ವರಿ ಮಾತೆ ಅವರ ಸಾನ್ನಿಧ್ಯದಲ್ಲಿ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಬುರುಣಾಪೂರ ಆರೂಢ ಮಠದ ಯೋಗೇಶ್ವರಿ ಮಾತೆ, ಗುರುದೇವಾಶ್ರಮದಯೋಗಾನಂದ ಶ್ರೀಗಳು, ಸಾಹಿತಿ ಬಸವರಾಜ ಯಂಕಂಚಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಸ್ರೀ ಸಂಗಮೇಶ್ವರ ಸಂಸ್ಥೆಯ ಅಧ್ಯಕ್ಷ ಗಂಗಾಧರ ಪಾವಲೆ, ಮಹಾದೇವ ಯಂಕಂಚಿ ಅವರು ಕಾರ್ಯಕ್ರಮದ ರೂಪ ರೇಷೆಗಳ ಕುರಿತು ಮಾಹಿತಿ ನೀಡಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಚೇತನ ನಿರಾಳೆ, ರಾಜು ಕೋಳಿ, ಪ್ರಕಾಶಗೌಡ ಪಾಟೀಲ, ಮುಖಂಡರಾದ ಅಶೋಕ ಕುಲಕರ್ಣಿ, ಪ್ರಭಾಕರ ನಿರಾಳೆ, ಕೇದಾರಿ ಸಾಳುಂಕೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-26-81904043

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.