ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಸಾರವಾಡದಲ್ಲಿ ಚಿಕ್ಕಯ್ಯಪ್ಪ ಎಂಬ ಮಹಾಪುರುಷರ ದೇವಾಲಯ ಉದ್ಘಾಟನೆ ಮೇ 5ರಂದು ಜರುಗಲಿದೆ.

ಅಂದು ಬೆಳಗಿನ ಜಾವ 4ಕ್ಕೆ ಪವಿತ್ರ ಗದ್ದುಗೆಗೆ ರುದ್ರಾಭಿಷೇಕ, 7ಕ್ಕೆ ಸಾರವಾಡ ಗ್ರಾಮದ ಈಶ್ವರ ದೇವಸ್ಥಾನದಿಂದ ವಿವಿಧ ವಾದ್ಯಮೇಳಗಳೊಂದಿಗೆ ಚಿಕ್ಕಯ್ಯಪ್ಪನವರ ದೇವಸ್ಥಾನದ ವರೆಗೆ ಸುಮಂಗಲೆಯರ ಕುಂಭಮೇಳದ ಮೆರವಣಿಗೆ ನಡೆಯುವುದು. 9 ಗಂಟೆಗೆ ಹೋಮ-ಹವನ, ನಂತರ ನಾಗಠಾಣದ ಪಟ್ಟಾಧ್ಯಕ್ಷರಿಂದ ಲಿಂಗಕ್ಕೆ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

ನಂತರ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ದೇವಸ್ಥಾನ ಉದ್ಘಾಟಿಸಲಿದ್ದಾರೆ. ಸಾರವಾಡದ ಸಾರಂಗಪ್ಪಯ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ನಾಗಠಾಣದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಬಬಲೇಶ್ವರದ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಕತಕನಹಳ್ಳಿಯ ಶಿವಯ್ಯ ಸ್ವಾಮೀಜಿ, ಕಾಖಂಡಕಿಯ ಶಿವಯೋಗೇಶ್ವರ ಸ್ವಾಮೀಜಿ, ಸಾರವಾಡದ ಶಿವಲಿಂಗಯ್ಯ ಕರವೀರಯ್ಯ ಹಿರೇಮಠ, ಗುರುಪಾದಯ್ಯ ಸದಾಶಿವ ಪೂಜಾರಿ ಹಾಗೂ ರಾಚಯ್ಯ ಗಂಗಯ್ಯ ಪೂಜಾರಿ ಸಾನ್ನಿಧ್ಯ ವಹಿಸಲಿದ್ದಾರೆ. ವಿಜಯಪುರ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಜ್ಯೋತಿ ಬೆಳಗಿಸುವರು. ಎಂದು ಸಾರವಾಡ- ಬಬಲೇಶ್ವರ-ಕಾಖಂಡಕಿ ಗ್ರಾಮಗಳ ಸದ್ಭಕ್ತ ಮಂಡಳಿ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-26-1680030567

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.