ಆಲಮಟ್ಟಿ: ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆಯಡಿ ಬರುವ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲ್ಲೂಕಿನ 36 ಕೆರೆಗಳನ್ನು ಪೂರ್ಣಪ್ರಮಾಣದಲ್ಲಿ ಭರ್ತಿ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಮಂಗಳವಾರ ಇಡೀ ದಿನ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಪ್ರತಿಭಟಿಸಿದರು.

ಈಗಾಗಲೇ ಏಪ್ರಿಲ್ನಲ್ಲಿ ಕೆರೆಗಳ ಭರ್ತಿಗಾಗಿ ನೀರು ಹರಿಸಲಾಗಿದೆ. ಆದರೆ ಈ 36 ಕೆರೆಗಳ ಭರ್ತಿಗೆ ಒಂದು ಹನಿ ನೀರೂ ಕಾಲುವೆಗೆ ಹರಿದಿಲ್ಲ. ಅಲ್ಲಿನ ಬ್ಯಾಲ್ಯಾಳ ಗ್ರಾಮದ ಬಳಿ ವಿದ್ಯುತ್ ಪ್ರಸರಣದ ಟವರ್ ಬಿದ್ದು ವಿದ್ಯುತ್ ಸಮಸ್ಯೆಯ ನೆಪವನ್ನು ಕೆಬಿಜೆಎನ್ಎಲ್ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಕಂಬ ಬಿದ್ದು ಒಂದು ತಿಂಗಳು ಕಳೆದರೂ ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ ಎಂದು ರೈತರು ಆರೋಪಿಸಿದರು.

ಕಾಲುವೆಯಲ್ಲಿ ಏ.7 ರವರೆಗೆ ನೀರು ಹರಿಯಬೇಕಿತ್ತು. ಕೊನೆಯ ನಾಲ್ಕು ದಿನ ನಮ್ಮ ಭಾಗದ ಕಾಲುವೆಗಳಿಗೆ ನೀರು ಹರಿದಿಲ್ಲ, ಇನ್ನೂ ಕೆರೆಗಳ ಭರ್ತಿಯಂತೂ ದೂರದ ಮಾತು ಎಂದು ಆರೋಪಿಸಿದರು.

ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲ್ಲೂಕಿನ ಕೆರೆಗಳಾದ ಹುಲಗಬಾಳ, ಜಕ್ಕದಾಳ, ಹಗರಗೊಂಡ, ತಾರನಾಳ, ತಮದಡ್ಡಿ, ಹಡಲಗೇರಿ, ಗುಂಡಕರ್ಜಗಿ , ಪಡೇಕನೂರ, ಆಲಕೊಪ್ಪರ ಮತ್ತೀತರ 36 ಕೆರೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ಭಾಗದ ರೈತ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಬೇಕು. ಬಿಸಲಿನ ಪ್ರಖರತೆ ಹೆಚ್ಚಿದ್ದು ಅಂತರ್ಜಲ ಮಟ್ಟ ಕುಸಿದಿದೆ. ಕೆರೆಗಳ ಭರ್ತಿಯಾಗಿದೆ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಸದ್ಯ ಜಲಾಶಯದ ನೀರು ನಿರ್ವಹಣೆಯ ಉಸ್ತುವಾರಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಅಧೀನದಲ್ಲಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅಮರೇಗೌಡ ಮನವಿ ಮಾಡಿದರೂ ಹೋರಾಟಗಾರರು ಕೇಳಲಿಲ್ಲ. ಸ್ಪಷ್ಟ ಭರವಸೆ ನೀಡದ ಹೊರತು ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ರೈತ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಶಾಂತಗೌಡ ಪಾಟೀಲ (ನಡಹಳ್ಳಿ), ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ, ಮತ್ತಿತರರು ಪಟ್ಟು ಹಿಡಿದರು.

ಪ್ರತಿಭಟನೆಯಲ್ಲಿ ಮಹಾಂತಗೌಡ ಬಿರಾದಾರ, ಸೀತಪ್ಪ ಗಣಿ, ರವಿ ಕೋತಿನ, ರಾಜು ವಾಲಿಕಾರ, ಅಪ್ಪುಗೌಡ ಪಾಟೀಲ, ಬಸವರಾಜ ಪಾಟೀಲ, ಶ್ರೀಕಾಂತ ಬಿರಾದಾರ, ಸಂಗಪ್ಪ ಟಕ್ಕೇರಿ, ಮಹಾದೇವ ಬನಸೋಡೆ, ಸತ್ಯಪ್ಪ ಕಾಳೆ, ಅಮೋಘಸಿದ್ಧ ಡೋಣೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-26-833130041

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.