ವಿಜಯಪುರ: ‘ವಿವಿಧ ದೇಶಗಳ ಆಂತರಿಕ ಕಲಹಗಳಿಂದ ಜೀವ ಸಂಕುಲ ನಷ್ಟಕ್ಕೀಡಾಗುತ್ತಿದೆ. ಇದರಿಂದ ಅನಾರೋಗ್ಯ, ಆಹಾರದ ಕೊರತೆ, ಮೂಲಸೌಲಭ್ಯಗಳ ಕೊರತೆ ಉಂಟಾಗಿ, ಮಾನವ ಹಕ್ಕಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ’ ಎಂದು ಬಿಎಲ್ಡಿಇ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ರಘುವೀರ ಕುಲಕರ್ಣಿ ವಿಷಾದಿಸಿದರು.

ನಗರದ ಬಿಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿಪಿ. ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿ ಮಾನವ ಹಕ್ಕುಗಳ ಕೋಶ ಮತ್ತು ರಾಜ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಜರುಗಿದ ‘ಯುದ್ಧದ ಪರಿಣಾಮ: ಮಾನವ ಹಕ್ಕುಗಳ ದೃಷ್ಟಿಕೋನ’ ಎಂಬ ವಿಷಯದ ಕುರಿತು ಉಪನ್ಯಾಸ ಮಂಡಿಸಿದ ಅವರು, ‘ಯುದ್ಧದಿಂದಾಗಿ ಪರಿಸರ ವಿನಾಶ, ಅಲ್ಲದೆ ಶೈಕ್ಷಣಿಕ ಚಟುಚವಟಕೆಗಳಿಗೆ ಧಕ್ಕೆಯಾಗಿ ಮಕ್ಕಳು ಮತ್ತೊಂದು ಚಟಕ್ಕೆ ದಾಸರಾಗಿ ಹೊರಹೊಮ್ಮುತ್ತಾರೆ. ಇಂತಹ ಸಂದಭದಲ್ಲಿ ಮಾನವ ಹಕ್ಕಗಳನ್ನು ಉಲ್ಲಂಘನೆಯಾಗುತ್ತದೆ ಎಂಬುದು ಗಮನಿಸಬಹುದಾಗಿದೆ’ ಎಂದು ವಿಶ್ಲೇಷಿಸಿದರು.

‘ಮೊದಲನೇ ಮತ್ತು ಎರಡನೇ ಜಾಗತಿಕ ಯುದ್ದಗಳು ಅಲ್ಲದೆ ವಾಸ್ತವದಲ್ಲಿ ಅಮೇರಿಕ, ಇಸ್ರೇಲ್ ಮತ್ತು ಇರಾನ್, ಲೆಬನಾನ್, ದೇಶಗಳ ನಡುವಿನ ಯುದ್ದದ ಪರಿಣಾಮದಿಂದಾಗಿ ಅಪಾರ ಹಾನಿಯನ್ನು ಇಲ್ಲಿ ಗಮನಿಸಬಹುದಾಗಿದೆ. ಇದರಲ್ಲಿ ಮಹಳೆಯರು ಮತ್ತು ಮಕ್ಕಳು ಬಲಿಯಾಗುತ್ತಿದ್ದಾರೆ’ ಎಂದು ತಿಳಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವುಗಳು ಮಾನವ ಹಕ್ಕುಗಳ ಅಡಿಯಲ್ಲಿ ಬದುಕುತ್ತಿದ್ದೇವೆ. ಅದರ ಅರಿವು ನಮಗಿರಬೇಕು. ಸದ್ಯ ಮಾನವ ಹಕ್ಕುಗಳನ್ನು ದಮನಿತ ಗೊಳಿಸಲಾಗತ್ತಿದೆ ಎಂಬುದು ಶೋಚನೀಯ ಸಂಗತಿಯಾಗಿದೆ’ ಎಂದರು.

ಪ್ರಾಚಾರ್ಯ ಅನಿಲ್ ಬಿ. ನಾಯಕ, ಪಿ. ಎಸ್. ಪಾಟೀಲ, ತರನ್ನುಮ್ ಜಬೀನ್ ಖಾನ್, ಪ್ರೊ.ರೂಪಾ ಮೋಟಗಿ, ಗಿರೀಶ ಹನಮರೆಡ್ಡಿ, ಆರ್.ಜಿ.ಕಮತರ, ಎಂ.ಬಿ.ಪಾಟೀಲ, ಭೀಮಶಿ ಮದರಕಂಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-26-461294289

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.