ವಿಜಯಪುರ: ಕಾಂಗ್ರೆಸ್ ಪಕ್ಷವೆಂಬುದು ಅನುಭವ ಮಂಟಪ. ಈ ಅನುಭವ ಮಂಟಪದಲ್ಲಿ ಎಲ್ಲ ಜಾತಿ-ಜನಾಂಗಗಳಿಗೆ ಸಮಸ್ಥಾನ ಇದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ನಗರದಲ್ಲಿರುವ ಸಚಿವರ ಗೃಹ ಕಚೇರಿಯಲ್ಲಿ ಗುರುವಾರ ತಿಕೋಟಾ ಪಟ್ಟಣದ ತಳವಾರ ಸಮುದಾಯದ ವಿವಿಧ ಮುಖಂಡರನ್ನು ಕಾಂಗ್ರೆಸ್ಸಿಗೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.

ಮತಕ್ಷೇತ್ರದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಯೋಜನೆಗಳು ಸಕಲ ಸಮುದಾಯಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ತಿಕೋಟಾ ತಳವಾರ ಸಮುದಾಯದ ಪ್ರಮುಖ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಬಬಲೇಶ್ವರ ಮತಕ್ಷೇತ್ರದಲ್ಲಿ ಇಂದು ರಾಜಕೀಯ ಚಿತ್ರಣವೇ ಬದಲಾಗಿದೆ. ನುಡಿದಂತೆ ನಡೆಯುವ ನಮ್ಮ ಗ್ಯಾರಂಟಿ ಸರ್ಕಾರದ ಜನಪರ ಆಡಳಿತಕ್ಕೆ ಮನಸೋತು, ಬಿಜೆಪಿಯ ಪ್ರಮುಖರು, ಕಾರ್ಯಕರ್ತರು ತಮ್ಮ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಗೆ ಜೈ ಎಂದಿದ್ದಾರೆ. ನಮ್ಮ ಅಭಿವೃದ್ಧಿಯ ಹಾದಿ ಮತ್ತು ಗಟ್ಟಿಯಾದ ಸಿದ್ಧಾಂತವನ್ನು ನಂಬಿ ಬಂದ ಈ ಎಲ್ಲಾ ನಾಯಕರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಅವರ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಡು ಬಲ ಬಂದಿದೆ. ಮುಂಬರುವ ದಿನಗಳಲ್ಲಿ ಅವರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು.

ಮುಖಂಡರಾದ ಸುರೇಶ ತೊರವಿ, ಎಚ್. ಎಲ್. ತಳವಾರ, ಪರಶುರಾಮ ಕೋಳಿ, ಗಣಪತಿ ತೋರವಿ, ಅಪ್ಪಸಾಹೇಬ ಡ್ಯಾಬೇರಿ, ದಯಾನಂದ ಶಿರಹಟ್ಟಿ ಪ್ರಕಾಶ ಹಾಲಳ್ಳಿ, ಭೀಮು ಹಾಲಳ್ಳಿ, ರಮೇಶ ಗುಡದಿನ್ನಿ, ವಿಲಾಸ ಮಾಳಿ, ನಾಗಪ್ಪ ಮಾಳಿ, ಶಾಂತಾಭಾಯಿ ತಳವಾರ, ಗೀತಾ ತೋರವ, ಪುಷ್ಪಾ ತೊರವಿ, ಮಂಗಲಾ ತಳವಾರ, ಮನಿಷಾ ತಳವಾರ, ಕವಿತಾ ಹಾಲಳ್ಳಿ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆಯಾದರು.

ಮುಖಂಡರಾದ ಬಿ.ಜಿ.ವಿಭೂತಿ, ಜೆ.ಎಂ.ಪಾಟೀಲ, ಮಮ್ಮು ಮುಜಾವರ, ಬಾಪು ಚೌಧರಿ, ರಾಜೂಗೌಡ ಪಾಟೀಲ, ಬಿ. ಎಲ್. ನಾಟೀಕಾರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-26-865053054

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.