ವಿಜಯಪುರ: ತಾಲ್ಲೂಕಿನ ಕಗ್ಗೋಡ ಗ್ರಾಮದಲ್ಲಿರುವ ಶ್ರೀ ಸಿದ್ದೇಶ್ವರ ಸಂಸ್ಥೆಯ ರಾಮನಗೌಡ ಬಾ. ಪಾಟೀಲ (ಯತ್ನಾಳ್) ಗೋರಕ್ಷಾ ಕೇಂದ್ರದ ಆಶ್ರಯದಲ್ಲಿ ಮೇ 11 ರಂದು ಬೆಳಿಗ್ಗೆ 9.30 ರಿಂದ ಸಂಜೆ 5 ರವರೆಗೆ ಗೋ ಶಾಲೆ ಆವರಣದಲ್ಲಿ ಗೋ ಆಧಾರಿತ ಕೃಷಿಕರ ಚಿಂತನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಕೃಷಿ ಕ್ಷೇತ್ರದಲ್ಲಿ ಗೋ ಆಧಾರಿತ ಆರ್ಥಿಕತೆ ಅಭಿವೃದ್ದಿ ಪಡಿಸಲು ಹಾಗೂ ಕೃಷಿಕರು ಗೋ ಆಧಾರಿತ ಕೃಷಿ ಹಾಗೂ ಸಾವಯವ ಕೃಷಿ ಅಳವಡಿಸಿಕೊಂಡು ಆರ್ಥಿಕ ಸಬಲತೆ ಪಡೆಯವ ದೃಷ್ಟಿಯಿಂದ ಹಮ್ಮಿಕೊಳ್ಳಲಾದ ಗೋ ಆಧಾರಿತ ಈ ಸಮಾವೇಶವನ್ನು ಬೀದರ್ನ ಕರ್ನಾಟಕ ಪಶು ವೈದ್ಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋದನಾ ನಿರ್ದೇಶಕ ಡಾ.ಶಿವಪ್ರಕಾಶ ಬಿ.ವಿ ಉದ್ಘಾಟಿಸಲಿದ್ದಾರೆ.

ಶ್ರೀ ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರಾಹುಲಕುಮಾರ್ ಭಾವಿದೊಡ್ಡಿ, ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ.ಆರ್.ಎಸ್.ಪದರಾ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಗಂಗಾಧರ ದೇಸಾಯಿ ಉಪಸ್ಥಿತವಿರುವರು.

‘ಗೋ ಆಧಾರಿತ ಕೃಷಿ ಮತ್ತು ಆರ್ಥಿಕತೆ’ ಕುರಿತು ಗೋ ಆಧಾರಿತ ಕೃಷಿ ಚಿಂತಕರು ಹಾಗೂ ಸಲಹೆಗಾರರಾದ ಡಾ.ಪ್ರಾಣೇಶ ಜಹಾಗೀರದಾರ, ಗೋ ಉತ್ಪನ್ನಗಳ ತಯಾರಿಕೆ ಕುರಿತು ತಜ್ಞರಾದ ಡಾ.ಸುಧೀಂದ್ರ ದೇಶಪಾಂಡೆ ಹಾಗೂ ಸಾವಯವ ಕೃಷಿ ಕುರಿತು ಡಾ.ರವಿಂದ್ರ ಬೆಳ್ಳಿಯವರು ಗೋಷ್ಠಿಗಳನ್ನು ನಡೆಸಿಕೊಡುವರು.

ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ಎಲ್ಲ ಸಾವಯವ ಕೃಷಿ ಅವಲಂಬಿತ ರೈತರಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.