ವಿಜಯಪುರ: 2025 -26ನೇ ಸಾಲಿನ ಮುಂಗಾರು ಹಂಗಾಮಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ತೊಗರಿ ಬೆಳೆಯ ಮಧ್ಯಂತರ ಬೆಳೆ ವಿಮೆ ಪರಿಹಾರವನ್ನು ಅವೈಜ್ಞಾನಿಕವಾಗಿ ಬಿಡುಗಡೆ ಮಾಡಿರುವುದನ್ನು ಮರು ಪರಿಶೀಲಿಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ವಿಮೆ ಕಂಪನಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹಾಗೂ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ರೈತರು ಮನವಿ ಸಲ್ಲಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, 2025–26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸರ್ಕಾರ ಗುರುತು ಪಡಿಸಿದ ಬೆಳೆ ವಿಮಾ ಕಂಪನಿಯಾದ ಓರಿಯೆಂಟಲ್ ಇನ್ಶ್ಯೂರೆನ್ಸ್ ಕಂಪನಿಗೆ ಜಿಲ್ಲೆಯ ರೈತರು ಬೆಳೆವಿಮೆ ಕಂತನ್ನು ಬರೆಸಿದ್ದು, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಅತಿವೃಷ್ಠಿಯಿಂದಾಗಿ ಬಿತ್ತಿದ ಬೆಳೆ ಎಲ್ಲವೂ ನೀರು ಪಾಲಾಗಿ ರೈತರಿಗೆ ಭರಿಸಲಾರದ ನಷ್ಟ ಸಂಭವಿಸಿದೆ. ಆದರೆ, ವಿಮಾ ಕಂಪನಿಯು ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಮಧ್ಯಂತರ ಬೆಳೆ ವಿಮೆ ಪರಿಹಾರದ ಮೊತ್ತವನ್ನು ಭರಿಸಿರುತ್ತದೆ ಎಂದು ಆರೋಪಿಸಿದರು.

ತೊಗರಿ ಬೆಳೆಗೆ ಶೇ 100 ರಷ್ಟು ಪ್ರತಿಶತ ನಷ್ಟವಾದರೆ ಸರ್ಕಾರದ ಮಾನದಂಡದ ಪ್ರಕಾರ ಪ್ರತಿ ಎಕರೆಗೆ ₹20 ಸಾವಿರದಿಂದ ₹21 ಸಾವಿರ ವರೆಗೆ ಪರಿಹಾರ ಒದಗಿಸಬೇಕು. ಮಧ್ಯಂತರ ಪರಿಹಾರ ಜಿಲ್ಲಾಡಳಿತದ ಘೋಷಣೆ ಪ್ರಕಾರ ಶೇ 25 ಪ್ರತಿಶತ ಮೊತ್ತ ಅಂದರೆ ₹4800 ದಿಂದ ₹ 5 ಸಾವಿರ ವರೆಗೆ ಭರಿಸಬೇಕು. ವಿಮಾ ಕಂಪನಿ ಈಗ ಬಿಡುಗಡೆಗೊಳಿಸಿದ್ದು, ಪ್ರತಿ ಎಕರೆಗೆ ₹1 ಸಾವಿರದಿಂದ ₹2800 ಮಾತ್ರ ಎಂದರು.

ವಿಮಾ ಕಂಪನಿಯು ವೈಯಕ್ತಿಕ ಸಮೀಕ್ಷೆಯನ್ನು ಪರಿಗಣಿಸದೇ ಜಿಲ್ಲಾಡಳಿತದ ಆದೇಶದ ಪ್ರಕಾರ ಜಂಟಿ ಸರ್ವೆ ಕೈಗೊಂಡಿದ್ದು, ಘೋಷಣೆಯ ಪ್ರಕಾರ ಎಲ್ಲ ರೈತರಿಗೂ ಶೇ25 ರಷ್ಟು ಪ್ರತಿಶತ ನಷ್ಟದ ಪರಿಹಾರವನ್ನು ಬಿಡುಗಡೆ ಗೊಳಿಸಬೇಕು. ಅಂದರೆ, ಪ್ರತಿ ರೈತನ ಪ್ರತಿ ಎಕರೆಗೆ ಕನಿಷ್ಠ ₹5 ಸಾವಿರ ಮಧ್ಯಂತರ ಬೆಳೆ ವಿಮೆ ಪರಿಹಾರದ ಹಣವನ್ನು ಬಿಡುಗಡೆಗೊಳಿಸಬೇಕು ಎಂದರು. ವಿಮಾ ಕಂಪನಿಯ ಈ ಅವೈಜ್ಞಾನಿಕ ನಿರ್ಧಾರ ಹಾಗೂ ಈ ಪ್ರಕ್ರಿಯೆಯನ್ನು ಗಮನಿಸಬೇಕಾದ ಜಿಲ್ಲಾಡಳಿತದಿಂದ ಜಿಲ್ಲೆಯ ಎಲ್ಲ ರೈತರನ್ನು ಇನ್ನಷ್ಟು ಕುಗ್ಗುವಂತೆ ಮಾಡಿದೆ ಎಂದು ಆರೋಪಿಸಿದರು.

ಓರಿಯಂಟಲ್ ಇನ್ಶ್ಯೂರನ್ಸ್ ಕಂಪನಿಯ ಜಿಲ್ಲಾ ಉಸ್ತುವಾರಿ ಸಂಪತಕುಮಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಜೂನ್ 15ರ ಒಳಗಾಗಿ ಬಾಕಿ ಉಳಿದ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ರೈತ ಮುಖಂಡರಾದ ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ವಿಠ್ಠಲ ಬಿರಾದಾರ, ಮಡಿವಾಳಪ್ಪ ಕಲಬುರ್ಕಿ, ಬಸನಗೌಡ ಪಾಟೀಲ, ಬಸವಪ್ರಭ ಪಾಟೀಲ, ಸಂಗಣ್ಣ ಉಪ್ಪಲದಿನ್ನಿ, ಮಾಳಪ್ಪ ವಾಲಿಕಾರ, ಪ್ರವೀಣ ಉಪ್ಪಲದಿನ್ನಿ, ಅಶೋಕ ಉಪ್ಪಲದಿನ್ನಿ, ಗೋಪಾಲ ನಾಯ್ಕೋಡಿ, ಅಪ್ಪಾಸಾಹೇಬ ಕೋಳೂರ, ಸೋಮನಗೌಡ ಬಿರಾದಾರ, ರಾಮನಗೌಡ ಬಿರಾದಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-26-1388619564

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.