ಬುಧವಾರ, ಆಗಸ್ಟ್ 10, 2022
24 °C

ವಿಜಯಪುರ | ಉರುಳಿಬಿದ್ದ ಟ್ಯಾಂಕರ್‌; ಡೀಸೆಲ್‌ ತುಂಬಿಕೊಳ್ಳಲು ಮುಗಿಬಿದ್ದ ಜನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ಯಾಂಕರ್‌ ಉರುಳಿ ಬಿದ್ದಿರುವುದು

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಟ್ಯಾಂಕರ್‌ನಿಂದ ಸೋರಿಕೆಯಾದ ಡಿಸೇಲ್‌ ತುಂಬಿಕೊಳ್ಳಲು ಜನ ಮುಗಿ ಬಿದ್ದಿರುವ ಘಟನೆ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹೈಪರ್ ಮಾರ್ಟ್ ಬಳಿ ಡಿಸೇಲ್‌ ಟ್ಯಾಂಕರ್ ಉರುಳಿ‌ ಬಿದ್ದಿದೆ. ಸ್ಥಳಕ್ಕೆ ಭೇಟಿ ನೀಡಿದ ಸುತ್ತಮುತ್ತಲಿನ ಜನರು ತಮ್ಮ ಬಳಿ ಇದ್ದ ಬಾಟಲ್‌, ಬಕೆಟ್‌, ಸಿಕ್ಕಿ ಸಿಕ್ಕ ವಸ್ತುಗಳಲ್ಲಿ  ಡೀಸೆಲ್‌ ತುಂಬಿಕೊಂಡು‌ ಹೋದರು.

ಟ್ಯಾಂಕರ್‌ನಿಂದ ಅಪಾರ ಪ್ರಮಾಣದ ಡೀಸೆಲ್‌ ಸೋರಿಕೆಯಾಗಿದ್ದು, ರಸ್ತೆ ಪಕ್ಕದ ಗುಂಡಿಯಲ್ಲಿ ಶೇಖರವಾಗಿದೆ. ಅಲ್ಲಿಯೂ ಜನರು ಮುಗಿಬಿದ್ದು ಡೀಸೆಲ್‌ ತುಂಬಿಕೊಂಡು ಹೋದರು.

ಸ್ಥಳಕ್ಕೆ ಗೋಳಗುಮ್ಮಟ ಪೊಲೀಸರು ಭೇಟಿ ನೀಡಿ, ಜನರನ್ನು ದೂರ ಚದುರಿಸಿದರು. ಅಗ್ನಿಶಾಮಕ  ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಅನಾಹುತವಾಗದಂತೆ ಎಚ್ಚರಿಕೆ ವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು