ವಿಜಯಪುರ: ಇಂಗಳೇಶ್ವರದಿಂದ ಬೊಮ್ಮನಹಳ್ಳಿ ಡೋಣೂರ ಹಾಗೂ ಬಿಸನಾಳಕ್ಕೆ ಹೋಗುವ ರಸ್ತೆ ದುರಸ್ತಿಗೊಳಿಸಿ ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮದ ರೈತರು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎಸ್. ಪೊಲೀಸ್ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ‘ಇಂಗಳೇಶ್ವರದಿಂದ ಬೊಮ್ಮನಹಳ್ಳಿವರೆಗೆ ಹೋಗುವ ಹಾಗೂ ಡೋಣೂರ– ಬಿಸನಾಳ ಸಂಪರ್ಕ ರಸ್ತೆ ಇದ್ದು, ಇದೇ ರಸ್ತೆಯನ್ನು ಅನುಸರಿಕೊಂಡು ನೂರಾರು ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗುತ್ತಾರೆ. ಅದರಂತೆ ಸ್ಪಷ್ಟವಾಗಿ 33 ಅಡಿ ಅಗಲವಾದ ರಸ್ತೆಯ ಗುರುತು ನಕ್ಷೆಯಲ್ಲಿದೆ. ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ರಸ್ತೆಯಲ್ಲಿ ಸಾಕಷ್ಟು ಮುಳ್ಳು ಕಂಟಿಗಳು ಬೆಳೆದಿದ್ದು ರಸ್ತೆ ಬಂದಾಗಿದ್ದರಿಂದ ರೈತರು ಜಮೀನುಗಳಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಮಳೆಗಾಲ ಬಂದರೆ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ಇದರಿಂದ ರೈತರು ಜಮೀನುಗಳಿಗೆ ಹೋಗಲು ಆಗದೆ ಕೃಷಿ ಚಟುವಟಿಕೆಗಳಿಗೆ ಕೂಡ ತೊಂದರೆಯಾಗಿದೆ. ಜಮೀನು ಬಿತ್ತನೆ ಮಾಡದೆ ಬೀಳು ಬಿದ್ದಿವೆ. ಹೀಗಾಗಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ರಸ್ತೆ ರಿಪೇರಿಗೊಳಿಸಿ ಡಾಂಬರೀಕರಣ ಮಾಡಿ ರೈತರಿಗೆ ದಾರಿಯ ಅನುಕೂಲ ಮಾಡಿಕೊಡಬೇಕೆಂದು’ ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಇಇ ಸಿ.ಎಸ್. ಪೊಲೀಸ್ ಪಾಟೀಲ, '15 ದಿನಗಳಲ್ಲಿ ದಾರಿಗುಂಟ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ, ರಸ್ತೆ ರಿಪೇರಿ ಮಾಡಿ ರೈತರಿಗೆ ತಮ್ಮ ಜಮೀನುಗಳಿಗೆ ಹೋಗಲು ಅನುಕೂಲ ಮಾಡಿಕೊಡಲಾಗುವುದು. ಅಲ್ಲದೇ, ಈ ವಾರದಲ್ಲಿ ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಸಿದ್ರಾಮಪ್ಪ ಎಮ್ಮಿ, ಸಿದ್ದಪ್ಪ ಜಕ್ಕೆನವರ, ಶ್ರೀಧರ ಮಠ, ಜಗದೀಶ ತಕ್ಕೋಡ, ಮುರಿಗೆಪ್ಪ ತಾಳಿಕೋಟಿ, ಶ್ರೀಶೈಲ ಅವಟಿ, ಶ್ರೀಶೈಲ ತಾಳಿಕೋಟಿ, ಶರಣಪ್ಪ ಹಂಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-26-1225750124

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.