ಚಡಚಣ: ಪಟ್ಟಣದ ಮಧ್ಯ ಭಾಗದಿಂದ ಹರಿದು ಹೋಗುವ ತಾಲ್ಲೂಕಿನ ಹತ್ತಳ್ಳಿ ಗ್ರಾಮದ ಬೋರಿ ಹಳ್ಳ ಬತ್ತಿದ ಪರಿಣಾಮ ನೂರಾರು ಪಕ್ಷಿಗಳು ಮತ್ತು ಕೆಲ ಕಾಡು ಪ್ರಾಣಿಗಳು ಮೃತಪಟ್ಟಿವೆ.

‘ಹಳ್ಳದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಸರ್ಗ ಧಾಮಗಳಲ್ಲಿ ಕುಡಿಯಲು ಹನಿ ನೀರು ಇಲ್ಲ. ಈ ಭಾಗದಲ್ಲಿ ವಾಸವಿರುವ ನವಿಲುಗಳು, ಬಾತುಕೋಳಿಗಳು ಸೇರಿ ವಿವಿಧ ವಲಸೆ ಪಕ್ಷಿಗಳು ಹಾಗೂ ಕೆಲವು ಕಾಡು ಪ್ರಾಣಿಗಳು ಸತ್ತ ಸ್ಥಿತಿಯಲ್ಲಿ ಪತ್ತೆ ಆಗುತ್ತಿವೆ. ಹಳ್ಳದಲ್ಲಿ ನಿಂತ ನೀರು ಕಲುಷಿತಗೊಂಡಿದ್ದು, ಇದೇ ಸಾವಿಗೆ ಕಾರಣವಾಗಿರಬಹುದು’ ಎಂದು ಹತ್ತಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ.

‘ಚಡಚಣ ಪಟ್ಟಣದ ಒಳಚರಂಡಿ ನೀರನ್ನು ಶುದ್ಧಗೊಳಿಸದೇ ನೇರವಾಗಿ ಹಳ್ಳಕ್ಕೆ ಬಿಡಲಾಗುತ್ತಿದೆ. ನೀರಾವರಿ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಳ್ಳದ ನಿರ್ವಹಣೆ, ಶುದ್ಧೀಕರಣ ಮತ್ತು ನೀರಿನ ಸಂರಕ್ಷಣೆ ಕುರಿತು ಯಾವುದೇ ಕ್ರಮ ಕೈಗೊಳ್ಳದಿರುವುದು ಈ ದುರಂತಕ್ಕೆ ಕಾರಣ. ಕೀಟನಾಶಕ ಔಷಧಗಳು ಮತ್ತು ಕೈಗಾರಿಕಾ ಘಟಕಗಳ ಮಾಲಿನ್ಯವೂ ಕಾರಣವಾಗಿರಬಹುದು’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-26-1556458384

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.