ವಿಜಯಪುರ: ಗ್ರಾಮ ಪಂಚಾಯಿತಿ ಆಡಳಿತವನ್ನು ಪಾರದರ್ಶಕಗೊಳಿಸಲು ರೂಪುಗೊಂಡಿರುವ ‘ಇ-ಗ್ರಾಮ ಸ್ವರಾಜ್’ ತಂತ್ರಾಂಶದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗೊಂದಲಕಾರಿ ಮಾಹಿತಿ ನಮೂದಿಸುವ ಮೂಲಕ ಅನುದಾನ ದುರುಪಯೋಗ ಮಾಡಿರುವ ಆರೋಪ ವ್ಯಕ್ತವಾಗಿದೆ.

ವಿಜಯಪುರ ತಾಲ್ಲೂಕಿನ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿಗಳ ವೆಚ್ಚದ ವಿವರಗಳನ್ನು ಇ-ಗ್ರಾಮಸ್ವರಾಜ್ ಪೋರ್ಟಲ್ನಲ್ಲಿ ವಿಭಿನ್ನ ಮಾಹಿತಿ ನಮೂದಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.

ಶಿವಣಗಿ ಪಂಚಾಯಿತಿ ಅಧಿಕಾರಿಗಳು ಇ-ಗ್ರಾಮ್ ಸ್ವರಾಜ್ ಪೋರ್ಟಲ್ನಲ್ಲಿ ಕಾಮಗಾರಿಯ ಮಾಹಿತಿ ಅಪ್ಲೋಡ್ ಮಾಡುವಾಗ ಆಕ್ಟಿವಿಟಿ ಕೋಡ್ನಲ್ಲಿ ನೀರಿನ ಕಾಮಗಾರಿ ಮಾಡಿರುವ ಬಗ್ಗೆ ಮಾಹಿತಿ ಅಪ್ಲೋಡ್ ಮಾಡಿದ್ದು, ವಿವರಣೆ ಕಾಲಂನಲ್ಲಿ ಸಿಬ್ಬಂದಿ ವೇತನ ಖಾತೆಗೆ ವರ್ಗಾವಣೆ ಎಂದು ನಮೂದಿಸಲಾಗಿದೆ.

ಅಲ್ಲದೇ, ದಾಖಲೆ ಅಪ್ಲೋಡ್ ಮಾಡುವ ಕಾಲಂನಲ್ಲಿ ಶ್ರೀ ಸಿದ್ದೇಶ್ವರ ಎಂಜಿನಿಯರಿಂಗ್ ಕಂಪನಿಯ ಬಿಲ್ ಅಪ್ಲೋಡ್ ಮಾಡಲಾಗಿದೆ. ಇದೇ ವೇಳೆ ಪಾವತಿ ವಿವರದಲ್ಲಿ ಪಂಚಾಯಿತಿ ಸಿಬ್ಬಂದಿ ಸಂಬಳಕ್ಕೆ ₹2.55 ಲಕ್ಷ ಖರ್ಚು ಮಾಡಲಾಗಿದೆ ಎಂದು ತೋರಿಸಲಾಗಿದೆ.

ಒಂದೇ ಎಂಟ್ರಿಯಲ್ಲಿ ಒಂದೆಡೆ ಕಾಮಗಾರಿ, ಮತ್ತೊಂದೆಡೆ ವೇತನ ಎಂದು ನಮೂದಿಸಲಾಗಿದೆ. ಅಲ್ಲದೇ, ಇದಕ್ಕೆ ಸಂಬಂಧಿಸಿದ ದಾಖಲೆ ಅಪ್ ಲೋಡ್ ಮಾಡುವಲ್ಲಿ ಖಾಸಗಿ ಬಿಲ್ ಅಪ್ಲೋಡ್ ಮಾಡಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಹಡಗಲಿ ಪಂಚಾಯಿತಿಯಲ್ಲಿ ಯಾವುದೇ ವಿವರ ನೀಡದೇ ಪ್ರಶ್ನಾರ್ಥಕ ಚಿಹ್ನೆ ಹಾಕಿ ಎಂಟ್ರಿ ಮಾಡಲಾಗಿದೆ. ಕುಮಟಗಿ ಪಂಚಾಯಿತಿಯಲ್ಲಿ 15ನೇಹಣಕಾಸು ಯೋಜನೆಯಡಿ ಶೌಚಾಲಯ ನಿರ್ಮಾಣ ಹಾಗೂ ನಿರ್ವಹಣೆ ಕುರಿತುಮಾಹಿತಿ ನೀಡಿದರೂ ವಿವರಣೆ ಕಾಲಂನಲ್ಲಿ ಪ್ರಶ್ನಾರ್ಥಕ ಚಿಹ್ನೆ ಹಾಕಲಾಗಿದೆ. ಇನ್ನು ಇದಕ್ಕೆ ಸಂಬಂಧಿಸಿದ ದಾಖಲೆಅಪ್ಲೋಡ್ ಮಾಡಬೇಕಾದ ಕಾಲಂನಲ್ಲಿ ಬಿಳಿ ಹಾಳೆ ಅಪ್ಲೋಡ್ ಮಾಡಲಾಗಿದೆ.

ಜುಮನಾಳ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮೀಸಲಾದ ಅನುದಾನವನ್ನು ಹೆಸ್ಕಾಂ ಬಿಲ್ ಪಾವತಿಗೆ ಬಳಸಲಾಗಿದೆ ಎಂದುಆಕ್ಟಿವಿಟಿ ಕೋಡ್ನಲ್ಲಿ ನಮೂದಿಸಲಾಗಿದೆ. ವಿವರಣೆ ಕಾಲಂನಲ್ಲಿ ಯಾವುದೇ ಸ್ಪಷ್ಟತೆ ಇಲ್ಲದೆ ಪ್ರಶ್ನಾರ್ಥಕ ಚಿಹ್ನೆ ಹಾಕಲಾಗಿದೆ.

₹80,000 ಎಇಇ ಗ್ರಾಮೀಣ ಉಪವಿಭಾಗಕ್ಕೆ ಪಾವತಿಸಲಾಗಿದೆ ಎಂದು ತೋರಿಸಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ₹25,900 ಮೊತ್ತದ ‘ಹಿರಾ ಎಲೆಕ್ಟ್ರಿಕ್’ ಬಿಲ್ ಅಪ್ಲೋಡ್ ಮಾಡಲಾಗಿದೆ. ಈ ವ್ಯತ್ಯಾಸಗಳು ಹಣದ ಬಳಕೆ ಕುರಿತು ಗಂಭೀರ ಅನುಮಾನಗಳನ್ನು ಹುಟ್ಟುಹಾಕಿವೆ.

ಈ ನಾಲ್ಕು ಪಂಚಾಯಿತಿಗಳಲ್ಲಷ್ಟೇ ಅಲ್ಲ, ತಾಲ್ಲೂಕಿನ ಇತರ ಪಂಚಾಯಿತಿಗಳಲ್ಲಿಯೂ ಇದೇ ರೀತಿಯ ಗೊಂದಲಕಾರಿ ಎಂಟ್ರಿಗಳು ಕಂಡುಬಂದಿವೆ. ಕಾಮಗಾರಿ, ವೇತನ ಹಾಗೂ ಇತರ ವೆಚ್ಚಗಳ ಮಾಹಿತಿಯನ್ನು ಮಿಶ್ರಣ ಮಾಡಿ ದಾಖಲಿಸುವ ಮೂಲಕ ಸಾರ್ವಜನಿಕರಿಗೆ ನಿಜವಾದ ಮಾಹಿತಿ ಲಭ್ಯವಾಗದಂತೆ ಮಾಡುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇನ್ನು ಇಷ್ಟೆಲ್ಲ ಗೊಂದಲದ ಮಾಹಿತಿಗಳು ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲಾಗುತ್ತಿದ್ದರೂ ಇದನ್ನೆಲ್ಲ ಮೇಲ್ವಿಚಾರಣೆ ಮಾಡಬೇಕಾದ ತಾಲ್ಲೂಕು ಪಂಚಾಯಿತಿ ಇಒಗಳುಜಾಣ ಕುರುಡು ಪ್ರದರ್ಶಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಂತಾಗಿದೆ.

ಪಿಡಿಒ ಅವರಿಗೆ ಕೇಳಿ...

ಇ-ಗ್ರಾಮ್ ಸ್ವರಾಜ್ ಪೋರ್ಟಲ್ನಲ್ಲಿ ಮಾಹಿತಿ ನಮೂದಿಸುವಲ್ಲಿ ತಪ್ಪು ಮಾಹಿತಿ ಹಾಗೂ ಲೋಪವಾಗಿರುವ ಕುರಿತು ವಿಜಯಪುರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಬಾಬು ರಾಠೋಡ,‘ಪಿಡಿಒಗಳಿಗೆ ಮಾಹಿತಿ ಕೇಳಿಕೊಳ್ಳಿ’ ಎಂದು ಹಾರಿಕೆ ಉತ್ತರ ನೀಡಿ, ಕೈ ತೊಳೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.