ವಿಜಯಪುರ: ನಮ್ಮ ಸರ್ಕಾರ ನೀರಾವರಿಯಷ್ಟೇ ವಿದ್ಯುತ್ತಿಗೂ ಪ್ರಾಮುಖ್ಯತೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಿಂದ ನಗರದಲ್ಲಿ ನಿರ್ಮಿಸಲಾದ ವಿಜಯಪುರದ ಕಾರ್ಯ ಮತ್ತು ಪಾಲನೆ ವಿಭಾಗೀಯ ಕಚೇರಿಯ ನೂತನ ಕಟ್ಟಡವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಟಿಸಿ ದುರಸ್ತಿ ಸಕಾಲದಲ್ಲಿ ಆಗಬೇಕು. ಅಚ್ಚುಕಟ್ಟಾಗಿ ಕಟ್ಟಿರುವ ಈ ಕಟ್ಟಡ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಟ್ಟಡವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಿವಿಲ್ ಆಸ್ಪತ್ರೆಯಲ್ಲಿ ವಿದ್ಯುತ್ ಉಪ ಕೇಂದ್ರವಾಗಬೇಕು. ಜಾಗ ಖರೀದಿಸಿ ಕೇಂದ್ರ ಆರಂಭಿಸಲಾಗುವುದು ಎಂದರು.

ವಿಜಯಪುರದ ವಿಮಾನ ನಿಲ್ದಾಣದ ಹತ್ತಿರದ ಐನಾಪುರದಲ್ಲಿ 110 ಕೆವಿ ಸ್ಟೇಶನ್ ನಿರ್ಮಾಣಕ್ಕಾಗಿ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಐನಾಪುರದಲ್ಲಿ ಈ ವಿದ್ಯುತ್ ಉಪ ಕೇಂದ್ರದಿಂದ ವಿಜಯಪುರ ಏರ್ ಫೋರ್ಟ್, ಮದಭಾವಿ ಹಾಗೂ ಸುತ್ತಲಿನ ಹಳ್ಳಿಗಳಿಗೆ ಅನುಕೂಲವಾಗುತ್ತದೆ ಎಂದರು.

ನಮ್ಮ ಸರ್ಕಾರ ಜಿಲ್ಲೆಯಲ್ಲಿ 110 ಕೆವಿ ಸ್ಟೇಶನ್ ಗಳನ್ನು ನಿರ್ಮಿಸುತ್ತಿದೆ. ಈ ಪೈಕಿ 8 ಕಾಮಗಾರಿಗಳು ಪ್ರಗತಿಯಲ್ಲಿವೆ. 24 ಕಾಮಗಾರಿಗಳು ಅನುಮೋದನೆಗೊಂಡು ವಿವಿಧ ಹಂತದಲ್ಲಿವೆ ಎಂದರು.

2016-2017ರಲ್ಲಿ ದೇವರಹಿಪ್ಪರಗಿಯಲ್ಲಿ 400 ಕೆವಿ ಸ್ಟೇಶನ್ ನಿರ್ಮಾಣಕ್ಕೆ ಈ ಮೊದಲು ಪ್ರಯತ್ನ ಮಾಡಿದ್ದೆವು. ಆದರೆ, ಸರ್ಕಾರಿ ಜಮೀನು ಭೂಸ್ವಾಧೀನ ವೆಚ್ಚ ಬಹಳಷ್ಟಾಗಿದ್ದರಿಂದ ಕಷ್ಟವಾಯಿತು. ಹಾಗಾಗಿ ಸರ್ಕಾರಿ ಜಮೀನು ಹಡಗಲಿಯಲ್ಲಿದ್ದುದನ್ನು ಗಮನಿಸಿ, ಅಲ್ಲಿ ₹ 800 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನಗರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ನೀರಾವರಿ, ಕೆರೆ ತುಂಬುವ, ವಿದ್ಯುತ್ ಸರಬರಾಜಿನ ಉನ್ನತೀಕರಣ, ಸರ್ಕಾರಿ ಕಟ್ಟಡ, ಸಿಟಿ ಅಂಡರ್ ಗ್ರೌಂಡ್ ಕೇಬಲ್ ಕಾರ್ಯಗಳು ನಡೆದಿವೆ ಎಂದರು.

ಇಂಧನ ಇಲಾಖೆ ನೇರವಾಗಿ ಜನರನ್ನು ಒಳಗೊಂಡ ಇಲಾಖೆ. ಹಾಗಾಗಿ ಇಲಾಖೆ ಅಧಿಕಾರಿಗಳು ಜನರಿಗೆ ವೃಥಾ ತೊಂದರೆ ನೀಡದೇ, ಅವರ ಅರ್ಜಿ ಹಾಗೂ ಕೆಲಸ ಕಾರ್ಯಗಳಿಗೆ ತಕ್ಷಣ ಸ್ಪಂದಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಸಿದ್ದಪ್ಪ ಬಿಂಜಗೇರಿ, 1964ರಲ್ಲಿ ಆಗಿನ ಮೈಸೂರು ರಾಜ್ಯ ಎಲೆಕ್ಟ್ರಿಸಿಟಿ ಮಂಡಳಿಯಿಂದ ನಿರ್ಮಾಣಗೊಂಡ ಈ ಕಟ್ಟಡವು ಸುದೀರ್ಘ 62 ವರ್ಷಗಳ ಬಳಿಕ ಶಿಥಿಲಾವಸ್ಥೆಗೊಂಡಿದ್ದರಿಂದ ಹೆಸ್ಕಾಂನಿಂದ ಹೊಸ ಕಟ್ಟಡವನ್ನು 2024ರಲ್ಲಿ ₹6.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು, ಲೋಕಾರ್ಪಣೆಗೊಡಿದೆ ಎಂದರು.

ಶಾಸಕ ವಿಠ್ಠಲ ಕಟಕದೊಂಡ, ಪಾಲಿಕೆ ಮೇಯರ್ ಎಂ.ಎಸ್. ಕರಡಿ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಪಂಚ ಗ್ಯಾರಂಟಿ ನಗರ ಘಟಕದ ಅಧ್ಯಕ್ಷ ಶಬ್ಬೀರ ಜಾಗೀರದಾರ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಸಿವಿಲ್ ಅಧಿಕ್ಷಕ ಎಂಜಿನಿಯರ್ ತಿಪ್ಪಣ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-26-1422073220

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.