ಹೊರ್ತಿ: ಏ.12ರ ನಂತರ ನಾಗಠಾಣ ಮತಕ್ಷೇತ್ರಕ್ಕೆ ನಾರಾಯಣಪುರ ಎಡದಂಡೆಯ 35 ರಿಂದ 46ನೇ ಕಾಲುವೆ ಮೂಲಕ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಭರವಸೆ ನೀಡಿದ ಹಿನ್ನೆಲೆ ರೈತರು ಧರಣಿ ಹಿಂಪಡೆದರು.

ಕೆಬಿಜೆಎನ್ಎಲ್ ಅಧೀಕ್ಷಕ ಎಂಜಿನಿಯರ್ ಮನೋಜ ಕುಮಾರ ಗಡಬಳ್ಳಿ ಮಾತನಾಡಿ, ‘ಎ.12ರ ನಂತರ ನಾರಾಯಣಪುರ ಎಡದಂಡೆಯ ವಿತರಣಾ ಕಾಲುವೆಯ 35ರಿಂದ 46 ರವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಕಾಲುವೆ ಹಿಂದೆ ಇರುವ ರೈತರು ತಮ್ಮ ಮೋಟಾರು ಪಂಪ್ ಅನ್ನು ಒಂದೆರಡು ದಿನ ಬಂದ್ ಮಾಡಿ, ಕೊನೆ ಭಾಗದ ಜನರಿಗೆ ನೀರು ತಲುಪುವವರೆಗೆ ಕಾಯಬೇಕು’ ಎಂದರು.

‘ಜಿಲ್ಲಾಧಿಕಾರಿಗಳ ಮತ್ತು ಕೆಬಿಜೆಎನ್ಎಲ್ ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಧರಣಿ ಹಿಂದಕ್ಕೆ ಪಡೆದಿದ್ದೇವೆ. ಒಂದು ವೇಳೆ ಎ.12ರ ನಂತರ ನಾಗಠಾಣ ಮತಕ್ಷೇತ್ರದ ಕಾಲುವೆಗೆ ನೀರು ಹರಿಸದಿದ್ದರೆ, ಮತ್ತೆ ರೈತರ ನಿರಂತರ ಧರಣಿ ಹೋರಾಟ ನಡೆಯಲಿದೆ’ ಎಂದು ರೈತ ಮುಖಂಡ ನಾಗನಾಥ ಗೌಡ ಬಿರಾದಾರ ಹೇಳಿದರು.

ಇಂಡಿ ತಹಶೀಲ್ದಾರ್ ವಿಜಯ ಕಡಕಬಾವಿ, ಚಡಚಣ ತಹಶೀಲ್ದಾರ್ ಸಂಜಯ ಇಂಗಳೆ, ಶ್ರೀಮಂತ ಅಂಗಡಿ, ರೈತ ಮುಖಂಡರಾದ ಗುರುನಾಥ ಬಗಲಿ, ವಸಂತ ಭೈರಮಡಿ, ನಾಗನಾಥಗೌಡ ಬಿರಾದದಾರ, ದಯಾನಂದ ಕುಮಸಳೆ, ಅಲೋಕ ಬೈರಾಮಡಿ, ಎಂ ಎಚ್.ಪೂಜಾರಿ, ಖಾಜೀಸಾಹೇಬ ಗುರುನಾಳ, ದಸ್ತಗೀರ ವಾಲಿಕಾರ, ಅಣ್ಣಾರಾಯ ಶಿರನಾಳ, ಸತೀಶ ತಳಕೇರಿ, ದಾನೇಶ ತಳಕೇರಿ, ಸಿದ್ದು ಕೊಟಲಗಿ, ಶಿವಾನಂದ ಬಿರಾದಾರ, ಸತೀಶ ತೊಳನೂರ, ಸಂದೀಪ್ ಬೆಳ್ಳಿ, ದಯಾನಂದ ಕೊಳಿ, ರೈತ ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-26-730914199

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.