ವಿಜಯಪುರ: ನೋಡಲು ತನ್ನಂತಿಲ್ಲ ಎಂಬ ಕಾರಣಕ್ಕೆ ಸ್ವಂತ ಮಗನನ್ನೇ ತಂದೆ ನದಿಗೆ ತಳ್ಳಿಗೆ ಸಾಯಿಸಿರುವ ಅಮಾನವೀಯ ಘಟನೆ ತಾಲ್ಲೂಕಿನ ನಾಗಠಾಣ ಗ್ರಾಮದಲ್ಲಿ ನಡೆದಿದೆ.

ಸಿದ್ಧಾರ್ಥ ಅರಕೇರಿ (6) ಕೊಲೆಯಾದ ಬಾಲಕ. ಈ ಸಂಬಂಧ ಆರೋಪಿ ತಂದೆ ಮಲ್ಲಿಕಾರ್ಜುನ ಅರಕೇರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ:

‘ಮಗನನ್ನು ಶಾಲೆಗೆ ಸೇರಿಸುವುದಾಗಿ (ಕೋಚಿಂಗ್) ಹೇಳಿ ಮಾರ್ಚ್ 16ರಂದು ಮನೆಯಿಂದ ಕರೆದುಕೊಂಡು ಹೋಗಿದ್ದ ಆರೋಪಿ ಮಲ್ಲಿಕಾರ್ಜುನ ಅರಕೇರಿ, ಮಹಾರಾಷ್ಟ್ರ ರಾಜ್ಯದ ಕರಾಡ ಎಂಬಲ್ಲಿ ಕೃಷ್ಣಾ ನದಿಗೆ ತಳ್ಳಿ ಸಾಯಿಸಿದ್ದಾನೆ. ಬಳಿಕ ಮನೆಗೆ ಬಂದು ಯಾರಿಗೂ ಅನುಮಾನ ಬರದಂತೆ ನಡೆದುಕೊಂಡಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

‘ಏಪ್ರಿಲ್ 1ರಂದು ಬಾಲಕನ ಜನ್ಮದಿನವಾಗಿದ್ದ ಕಾರಣ ತಾಯಿ ಭಾಗ್ಯಶ್ರೀ, ಮಗನನ್ನು ನೋಡಬೇಕು, ಮನೆಗೆ ಕರೆದುಕೊಂಡು ಬರುವಂತೆ ಒತ್ತಾಯಿಸಿದ್ದಾಳೆ. ಆಗ ಮಗನನ್ನು ನೋಡಿಕೊಂಡು ಬರೋಣ ಎಂದು ಸುಳ್ಳು ಹೇಳಿ ಹೆಂಡತಿಯನ್ನು ಸಿಂದಗಿಗೆ ಕೆರೆದುಕೊಂಡು ಹೋಗಿ ಸುತ್ತಾಡಿಸಿ, ಮರಳಿ ಕರೆತಂದಿದ್ದಾನೆ’ ಎಂದರು.

‘ಮಗನನ್ನು ಕರೆದುಕೊಂಡು ಬರದಿದ್ದರೇ ಸಾಯುತ್ತೇನೆ ಎಂದು ಹೆಂಡತಿ ಹಟ ಹಿಡಿದಿದ್ದಾಳೆ. ಆಗ ಮಗನನ್ನು ಮರೆತುಬಿಡು ಎಂದು ಹೇಳಿದ್ದಾನೆ. ಅಲ್ಲದೇ, ಮನೆಯಿಂದ ಪರಾರಿಯಾಗಿದ್ದಾನೆ. ಇದರಿಂದ ಅನುಮಾನ ಬಂದ ಕುಟುಂಬದವರು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ತಂದೆ, ಮಗ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು’ ಎಂದರು.

‘ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನನ್ನ ಮಗ ನೋಡಲು ನನ್ನಂತೆ ಇರಲಿಲ್ಲ. ಆದ ಕಾರಣ ನದಿಗೆ ತಳ್ಳಿ ಸಾಯಿಸಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ’ ಎಂದು ತಿಳಿಸಿದರು.

‘ಆರೋಪಿ ನೀಡಿದ ಮಾಹಿತಿ ಮೇರೆಗೆ ಮಹಾರಾಷ್ಟ್ರದ ಕರಾಡ ಪೊಲೀಸರನ್ನು ಸಂಪರ್ಕಿಸಿದಾಗ ಬಾಲಕನ ಶವವೊಂದು ಕೃಷ್ಣಾ ನದಿಯಲ್ಲಿ ಸಿಕ್ಕಿರುವುದು ದೃಢಪಟ್ಟಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.