ಹೊರ್ತಿ: ‘ಜೇವೂರಿನ ಹಠಯೋಗಿ ರೇವಣಸಿದ್ಧೇಶ್ವರರು ಬೇಡಿದ್ದನ್ನು ಕರುಣಿಸುವ ಕೃಪಾಮಯಿ ಪವಾಡ ಪುರುಷರಾಗಿದ್ದರು’ ಎಂದು ತಡವಲಗಾ ಅಭಿನವ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಜೇವೂರ ಗ್ರಾಮದ ಹಠಯೋಗಿ ಪವಾಡ- ಪುರುಷ ರೇವಣಸಿದ್ಧೇಶ್ವರ ಸ್ವಾಮೀಜಿ ಅವರ 40ನೇ ಪುಣ್ಯರಾಧನೆ ಪ್ರಯುಕ್ತ ಬುಧವಾರ ಜರುಗಿದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಗದಗದ ಅಸುಂಡಿಯ ಮಾತೋಶ್ರೀ ಮೈತ್ರಾ ದೇವಿ ಮಾತನಾಡಿ, 'ಮಹಾನ್ ತ್ಯಾಗ ಯೋಗಿಗಳ ಪುಣ್ಯರಾಧನೆಯ ಜಾತ್ರೆ ಉತ್ಸವಗಳು ಭಕ್ತಿ ಭಾವದ ಸಂಕೇತವಾಗಿ, ಈ ದೇವಸ್ಥಾನ ಗಳಲ್ಲಿ ಸಂತ ಮಹಾಂತರ ಅನುಭವಿಗಳಿಂದ ನಡೆಯುವ ಪ್ರವಚನಗಳು ಮನುಷ್ಯನ ಭಾವನೆಗಳನ್ನು ಶುದ್ದಿಕರಣಗೊಳಿಸಿ, ಅವರನ್ನು ಸನ್ಮಾರ್ಗದ ದಾರಿಗೆ ಒಯ್ಯಲಿವೆ' ಎಂದರು.

ಚೀಟಗುಪ್ಪ- ಚಾಂಗಲೇರಾದ ಮರುಳಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಗುರುಲಿಂಗ ಶಿವಾಚಾರ್ಯಶ್ರೀ ಮತ್ತು ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯ ಶ್ರೀ, ಮುಗಳಖೋಡ ಕೋಳಿಗುಡ್ಡ ಶಾಖಾ ಮಠದ ಪ್ರಭುದೇವರು ಅವರು ಸಹ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಂತರ ಸಂಜೆ 5ಗಂಟೆಗೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ರಥೋತ್ಸವ ಜರುಗಿತು.

ಜೇವೂರ ಜಾತ್ರಾ ಕಮೀಟಿ ಎಲ್ಲ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರು ಹಾಗೂ ಸುತ್ತಲಿನ ಗ್ರಾಮಗಳ ಲಕ್ಷಾಂತರ ಭಕ್ತರು ಧರ್ಮಸಭೆ, ರಥೋತ್ಸವದಲ್ಲಿ ಇದ್ದರು. ಸಕಲರಿಗೂ ಮಹಾಪ್ರಸಾದ ಸಂತರ್ಪಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.