ವಿಜಯಪುರ: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ವಿಚಾರದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಆಗ್ರಹಿಸಿ, ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯು ಮಂಗಳವಾರ ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರಿಗೆ ಮನವಿ ಸಲ್ಲಿಸಿದೆ.

ಹೋರಾಟ ಸಮಿತಿಯ ಸದಸ್ಯ ಬಿ. ಭಗವಾನ್ ರೆಡ್ಡಿ ಮಾತನಾಡಿ, ’ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಡಿಪಿಆರ್ ತಯಾರಿಸಿ ವರದಿ ಸಲ್ಲಿಸಬೇಕು, ಆದರೆ ಇಲ್ಲಿಯವರೆಗೆ ಡಿಪಿಆರ್ ರಚನೆ ಆಗಿದೆಯೋ ಅಥವಾ ಆಗಿಲ್ಲವೋ ಎಂಬುವುದರ ಬಗ್ಗೆ ಯಾವುದು ಮಾಹಿತಿ ಇಲ್ಲ, ಡಿಪಿಆರ ಸಿದ್ಧಪಡಿಸಿದ್ದರೆ, ಸರ್ಕಾರಕ್ಕೆ ಅದನ್ನು ಸಲ್ಲಿಸಿದ್ದರೆ ಹೋರಾಟ ಸಮಿತಿಗೆ ಅದರ ಪ್ರತಿ ಪ್ರತಿ ಕೊಡಬೇಕೆಂದು ಮನವಿ ಮಾಡಿದರು.

ಸಮಿತಿಯ ಸದಸ್ಯ ಅರವಿಂದ್ ಕುಲಕರ್ಣಿ ಮಾತನಾಡಿ, 116 ದಿನದ ಹೋರಾಟದ ನಂತರ ಮುಖ್ಯಮಂತ್ರಿಗಳು ಪಿಪಿಪಿ ರದ್ದು ಮಾಡಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದರು. ಬಜೆಟ್ ನಲ್ಲಿ ಘೋಷಣೆ ಮಾಡಿದರೂ ಸಹ ಸರ್ಕಾರದ ಹಂತದಲ್ಲಿ ಏನು ಪತ್ರ ವ್ಯವಹಾರ ನಡೆದಿದೆ ಎಂಬುದು ಅರ್ಥ ಆಗುತ್ತಿಲ್ಲ. ಡಿಪಿಆರ್ ತಯಾರಿ ಮಾಡಿ ಕಳುಹಿಸಲಾಗಿದೆ ಎಂಬ ಮಾಹಿತಿ ಇದೆ ಆದರೆ ಇದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದ ಕಾರಣ ವಿಳಂಭ ಮಾಡದೆ ಶೀಘ್ರವಾಗಿ ಡಿಪಿಆರ ತಯಾರಿಸಿ ಅದಕ್ಕೆ ಸೂಕ್ತ ಅನುದಾನವನ್ನು ಬಿಡುಗಡೆ ಮಾಡಿ ಶೀಘ್ರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭ ಮಾಡಬೇಕು ಎಂದು ಹೇಳಿದರು.

ವೈದ್ಯಕೀಯ ಹೋರಾಟ ಸಮಿತಿಯ ಸದಸ್ಯರಾದ ಅನಿಲ್ ಹೊಸಮನಿ, ಚಂದ್ರಶೇಖರ್ ಲೆಂಡಿ, ಅಕ್ರಮ ಮಾಶಾಳ್ಕರ್, ಸುರೇಶ್ ಜೀಬಿ, ಮಲ್ಲಿಕಾರ್ಜುನ್ ಹಂದ್ರಾಳ, ಲಲಿತಾ ಬಿಜ್ಜರಗಿ, ಬಾಬುರಾವ್ ಬೀರಕಬ್ಬಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್. ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-26-1146401540

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.