ಆಲಮಟ್ಟಿ: ‘ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇವಜೀರ ಸಮಾಜದ ವತಿಯಿಂದ ರಾಜ್ಯ ಮಟ್ಟದ ಹಂಡೇಹನಮಪ್ಪ ಜಯಂತಿ ನಿಡಗುಂದಿ ಪಟ್ಟಣದ ಮುದ್ದೇಶ್ವರ ಮಂಗಲ ಕಾರ್ಯಾಲಯದಲ್ಲಿ ಏ.9 ರಂದು ಜರುಗಲಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಸ್.ಪಾಟೀಲ ತಿಳಿಸಿದರು.

ಸೋಮವಾರ ಇಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹಂಡೇವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಆಶ್ರಯದಲ್ಲಿ ಈ ಜಯಂತಿ ಜರುಗಲಿದ್ದು, ರಾಜ್ಯದ ನಾನಾ ಕಡೆಯಿಂದ ಸಮಾಜದವರು ಪಾಲ್ಗೊಳ್ಳಲಿದ್ದಾರೆ’ ಎಂದರು.

‘ರಾಜಾ ಹಂಡೇಹನುಮಪ್ಪ ನಾಯಕ ಅವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮುತ್ತಗಿಯಲ್ಲಿ ಜನಿಸಿ ಮೂರು ರಾಜ್ಯಗಳ ಸಾಮಂತ ಅರಸರಾಗಿ ಅಳ್ವಿಕೆ ಮಾಡಿದ್ದಾರೆ. ಮೂರು ರಾಜ್ಯಗಳಿಗೂ ಪ್ರತ್ಯೇಕ ಗುರುಗಳಿದ್ದು, ಸಂಬಂಧಿಸಿದ ಮಠ ಮಾನ್ಯಗಳ ಅಭಿವೃದ್ಧಿಗೆ ಅಪಾರ ಸಹಕಾರ ನೀಡಿದ್ದಾರೆ. ಸಂಬಂಧಿಸಿದ ಗ್ರಾಮ ಹೋಬಳಿಗಳನ್ನು ಆಳುತ್ತಿದ್ದರು. ಸ್ವಾತಂತ್ರ್ಯ ನಂತರ ಉಳುವವನೇ ಭೂ ಒಡೆಯ ಕಾನೂನು ಬಂದ ಮೇಲೆ ಸಾಕಷ್ಟು ಜಮೀನು ಅನ್ಯರ ಪಾಲಾಗಿದ್ದು, ನಮ್ಮ ಸಮುದಾಯವು ವಿಜಯಪುರ, ಬಾಗಲಕೋಟೆ, ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ಕೆಲವೇ ಜಿಲ್ಲೆಗಳಲ್ಲಿದೆ’ ಎಂದು ವಿವರಿಸಿದರು.

‘ರಾಜಾಹನುಮಪ್ಪ ನಾಯಕ ಅವರ ಜನ್ಮಸ್ಥಳ ಮುತ್ತಗಿ ಗ್ರಾಮವಾಗಿದ್ದು, ಅಲ್ಲಿ ರಾಜಾ ಹನುಮಪ್ಪ ನಾಯಕ ಅವರ ಪುತ್ಥಳಿ ನಿರ್ಮಾಣ ಮಾಡಲು ಸರ್ಕಾರಕ್ಕೆ ಒತ್ತಾಯಿಸಲಾಗಿದೆ’ ಎಂದು ಹೇಳಿದರು.

‘ರಾಜ್ಯ ಮಟ್ಟದ ಜಯಂತಿಯನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಲಿದ್ದು, ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ, ಶಾಸಕ ರಾಜುಗೌಡ ಪಾಟೀಲ, ಜಿ.ಎನ್. ಪಾಟೀಲ, ಎ.ಎಸ್.ಪಾಟೀಲ ನಡಹಳ್ಳಿ ಪಾಲ್ಗೊಳ್ಳಲಿದ್ದು, ವಿವಿಧ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ, ಬಸವರಾಜ ವಂದಾಲ, ಶಂಕರಗೌಡ ಶಿವಣಗಿ, ಸಿದ್ಧನಗೌಡ ಪಾಟೀಲ, ಅವ್ವಣ್ಣ ಗ್ವಾತಗಿ, ಶಂಕರಗೌಡ ಬಿರಾದಾರ, ಪ್ರಭು ಬೆಳ್ಳಿ, ವಿಜಯ ಕಿರಸೂರ, ಸಂತೋಷ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-26-1850034233

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.