ವಿಜಯಪುರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪಮಾನ ಅಧಿಕವಾಗತೊಡಗಿದ್ದು, ಪ್ರಖರ ಬಿಸಿಲಿಗೆ ಜನ ಹೈರಾಣಾಗಿದ್ದಾರೆ.

ಜಿಲ್ಲೆಯ 14 ಕಡೆಗಳಲ್ಲಿ ಬುಧವಾರ ಬಿಸಿಲ ತಾಪಮಾನ ಗರಿಷ್ಠ 42 ಡಿಗ್ರಿ ಸೆಲ್ಸಿಯಸ್ಗಿಂತ ಅಧಿಕ ದಾಖಲಾಗಿದೆ. ಜೊತೆಗೆ ಬಿಸಿಗಾಳಿ ಬೀಸುತ್ತಿದ್ದು, ಜನ ಜೀವನದ ಮೇಲೆ ಪರಿಣಾಮ ಬೀರಿದೆ.

ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆ ವರೆಗೂ ಪ್ರಖರ ಬಿಸಿಲು ಜನರನ್ನು ಹೈರಣಾಗಿಸಿದೆ. ಮಧ್ಯಾಹ್ನದ ಅವಧಿಯಲ್ಲಿ ರಸ್ತೆಯಲ್ಲಿ ಜನ, ವಾಹನ ಸಂಚಾರ ವಿರಳವಾಗಿದೆ. ಮಕ್ಕಳು, ವೃದ್ಧರು ಸೇರಿದಂತೆ ಜನರ ಆರೋಗ್ಯ ಮೇಲೆ ಪರಿಣಾಮ ಬೀರಿದೆ.

ಬಿಸಿಲಿನಿಂದ ಪಾರಾಗಲು ಜನರು ತಂಪು ಪಾನೀಯ, ಐಸ್ಕ್ರೀಮ್ ಮೊರೆ ಹೋದರೂ ದಾಹ ತೀರದಂತಾಗಿದೆ. ಏರ್ ಕೂಲರ್, ಎಸಿ ಬಳಕೆಯೂ ಹೆಚ್ಚಿದೆ. ಹಗಲು ವೇಳೆ ಜನರು ಮರದ ನೆರಳು ಆಶ್ರಯಿಸುತ್ತಿದ್ದಾರೆ. ಹಗಲು ವೇಳೆ ವಾಹನ ಪ್ರಯಾಣ ಆಯಾಸ ಉಂಟು ಮಾಡುತ್ತಿದೆ. ಕೇವಲ ಹಗಲು ವೇಳೆ ಮಾತ್ರವಲ್ಲದೇ ರಾತ್ರಿಯಾದರೂ ಬಿಸಿ ಹವೆ ತಣ್ಣಗಾಗದೇ ಜನರಿಗೆ ಸುಖಃ ನಿದ್ರೆಗೂ ಅಡಚಣೆಯಾಗುತ್ತಿದೆ. ಬಿಸಿಲ ಪರಿಣಾಮ ಜಲಮೂಲಗಳು ಬತ್ತತೊಡಗಿವೆ.

ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯು ಕ್ಷೀಣವಾಗಿದ್ದು, ಪ್ರವಾಸಿ ತಾಣಗಳು ಬಣಗುಡುತ್ತಿವೆ.

ಬಸ್, ಕಾರು, ಬೈಕ್, ಸ್ಕೂಟಿಗಳಲ್ಲಿ ಪ್ರಯಾಣಿಸುವಾಗ ಮುಖ, ಮೈಗೆ ಬಿಸಿ ಗಾಳಿ ಸೋಕುವುದರಿಂದ ಆಯಾಸವಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಪರಿಣಾಮ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿದೆ.

ಸಂಘ–ಸಂಸ್ಥೆಗಳು ಜನರಿಗೆ ಹಾಗೂ ಪ್ರಾಣಿ–ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿರುವುದು ಅಲ್ಲಲ್ಲಿ ಕಂಡುಬರುತ್ತಿದೆ.

‘ಎಲ್ ನಿನೋ’ ಪರಿಣಾಮ: ನಾವು ಈಗ ಅನುಭವಿಸುತ್ತಿರುವುದು ಸಾಮಾನ್ಯ ಬಿಸಿಲು ಅಲ್ಲ. ಇದು ‘ಎಲ್ ನಿನೋ’ ಪರಿಣಾಮ. ಏಪ್ರಿಲ್ ಅಂತ್ಯದಿಂದ ಮೇನಲ್ಲಿ ಈ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣ ಕೇಂದ್ರ ತಿಳಿಸಿದೆ.

‘ಎಲ್ ನಿನೋ’ ಎಂದರೆ: ಪೆಸಿಫಿಕ್ ಮಹಾಸಾಗರದ ನೀರು ತುಂಬಾ ಬಿಸಿಯಾಗುತ್ತದೆ. ಇದರಿಂದ ವಿಶ್ವದಾದ್ಯಂತ ಗಾಳಿಯ ಹರಿವು ಬದಲಾಗುತ್ತದೆ. ಮೇ ತಿಂಗಳಲ್ಲಿ ನಮಗೆ ಮಳೆಯನ್ನೂ ತರುವ ದಕ್ಷಿಣ-ಪಶ್ಚಿಮ ಮಳೆಯು (ಮಾನ್ಸೂನ್) ಈ ಬಾರಿ ತಡವಾಗಬಹುದು ಅಥವಾ ಕಡಿಮೆಯಾಗಬಹುದು. ಇದರಿಂದ ಮಳೆ ಬೀಳಬೇಕಾದ ಸಮಯದಲ್ಲಿ ತೀವ್ರ ಬಿಸಿಲು ಮಾತ್ರ ಕಾಣಬಹುದು ಎಂದು ಕೆಎಸ್ಎನ್ಡಿಎಂಸಿ ತಿಳಿಸಿದೆ.

ಸಾರ್ವಜನಿಕರಿಗೆ ಸಲಹೆ

‘ಬೇಸಿಗೆಯ ಈ ದಿನಗಳಲ್ಲಿ ಬಾಯಾರಿಕೆಯಾಗುವವರೆಗೂ ಕಾಯಬಾರದು. ಪ್ರತಿ ಗಂಟೆಗೊಮ್ಮೆಯಾದರೂ ನೀರು ಕುಡಿಯಬೇಕು. ಮಕ್ಕಳು ಮತ್ತು ವೃದ್ಧರು ನೀರು ಕುಡಿಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಯಾವಾಗಲೂ ನಿಮ್ಮ ಜೊತೆ ನೀರಿನ ಬಾಟಲ್ ಇಟ್ಟುಕೊಳ್ಳಬೇಕು’ ಎಂದು ವಿಜಯಪುರ ವೈದ್ಯ ಡಾ.ಬಾಬು ರಾಜೇಂದ್ರ ನಾಯಿಕ ಸಲಹೆ ನೀಡಿದ್ದಾರೆ.

ಮುನ್ನೆಚ್ಚರಿಕೆಯ ಸಮಯ:

‘ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ಈ ಸಮಯದಲ್ಲಿ ಸೂರ್ಯನ ಕಿರಣಗಳು ನೇರವಾಗಿ ದೇಹಕ್ಕೆ ತಾಗುತ್ತವೆ. ಸಾಧ್ಯವಾದಷ್ಟು ಮನೆಯೊಳಗೆ ಇರುವುದು ಉತ್ತಮ. ಹೆಚ್ಚು ಬಿಸಿಯನ್ನು ಹೀರಿಕೊಳ್ಳುವ ಕಪ್ಪು ಬಟ್ಟೆಗಳನ್ನು ಧರಿಸುವ ಬದಲು ಬಿಳಿ ಅಥವಾ ಗುಲಾಬಿ ಬಣ್ಣದ ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಿ’ ಎಂದು ಅವರು ಸಲಹೆ ನೀಡಿದ್ದಾರೆ.

ಬಿಸಿಲಾಘಾತದ ಲಕ್ಷಣಗಳು:

‘ತೀವ್ರ ತಲೆನೋವು, ಮೂರ್ಚೆ, ವಾಂತಿ, ಬೆವರು ಇಲ್ಲದೆ ಒಣ ಚರ್ಮ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ನೆರಳಿನ ಸ್ಥಳಕ್ಕೆ ಕರೆದೊಯ್ಯಬೇಕು, ದೇಹದ ಮೇಲೆ ಒದ್ದೆಯಾದ ಬಟ್ಟೆ ಹಾಕಿ ತಂಪಾಗಿಸಬೇಕು ಮತ್ತು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.