ಮುದ್ದೇಬಿಹಾಳ: ತಾಲ್ಲೂಕಿನ ಹಿರೇಮುರಾಳ ಕ್ರಾಸ್ನಿಂದ ನೆರಬೆಂಚಿ, ಹುನಕುಂಟಿ ಕ್ರಾಸ್ ವರೆಗೆ ಸುಮಾರು ₹ 12 ಕೋಟಿ ವೆಚ್ಚದಲ್ಲಿ ನಡೆದ ರಸ್ತೆ ಕಾಮಗಾರಿ ಸ್ಥಗಿತಗೊಂಡು, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗಿದೆ.

‘ಆದಷ್ಟು ಶೀಘ್ರ ರಸ್ತೆ ನಿರ್ಮಾಣ ಮಾಡಿ, ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಮಾಡಬೇಕು’ ಎಂದು ಗ್ರಾಮಸ್ಥರಾದ ಪಿ.ಬಿ.ಗೌಡರ ಆಗ್ರಹಿಸಿದರು.

ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಅವರು 2025 ಜೂನ್ 22 ರಂದು ಈ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಆದರೆ, ಇದೀಗ ಕಾಮಗಾರಿ ವಿಳಂಬ ಆಗಿರುವುದಕ್ಕೆ ಗ್ರಾಮಸ್ಥರು ಹೈರಾಣಾಗಿದ್ದಾರೆ.

ಈಗಾಗಲೇ ಈ ರಸ್ತೆ ಕಾಮಗಾರಿ ನಡೆದು 10 ತಿಂಗಳು ಗತಿಸಿದ್ದು, ಜಲ್ಲಿ ಕಲ್ಲುಗಳನ್ನು ಹಾಕಿ ಸುಮಾರು ಆರು ತಿಂಗಳು ಗತಿಸಿದೆ. ಆದರೆ, ಇಲ್ಲಿಯವರೆಗೆ ಅದರ ಮೇಲೆ ಡಾಂಬರಿಕರಣ ಮಾಡದೆ ಇರುವುದು ನಮಗೆ ಸಂಚಾರಕ್ಕೆ ಬಹಳಷ್ಟು ತೊಂದರೆ ಆಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಮೊದಲು ಇದ್ದ ರಸ್ತೆ ಎಷ್ಟೋ ಚನ್ನಾಗಿತ್ತು, ಈಗ ಈ ರಸ್ತೆ ನಿರ್ಮಾಣಕ್ಕೆ ಹಾಕಿದ ಜಲ್ಲಿ ಕಲ್ಲು ಎದ್ದು 6 ತಿಂಗಳು ಆಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೂ ಭೇಟಿ ಮಾಡಿ ಶೀಘ್ರದಲ್ಲಿ ರಸ್ತೆ ನಿರ್ಮಾಣ ಮಾಡುವಂತೆ ಮನವಿ ಮಾಡಿಕೊಂಡರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರಾದ ಗಂಗನಗೌಡರ ರಕ್ಕಸಗಿ ಆರೋಪಿಸಿದರು.

ಈಗಾಗಲೇ ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ದ್ವಿಚಕ್ರ ವಾಹನ, ಕಾರು, ಬಸ್ಸು ಸೇರಿದಂತೆ ಸಂಚಾರ ಮಾಡುತ್ತವೆ. ಆದರೆ, ಒಂದು ದೊಡ್ಡ ವಾಹನ ಹಾದು ಹೋದರೆ ದ್ವಿಚಕ್ರ ವಾಹನ ಸವಾರರಿಗೆ ಅದರ ಧೂಳಿನಿಂದ ರಸ್ತೆಯೆ ಕಾಣುವುದಿಲ್ಲ. ಮೊದಲೇ ಜಲ್ಲಿಕಲ್ಲು ಎದ್ದಿರುವುದರಿಂದ ವಾಹನಗಳು ಆಯಾತಪ್ಪಿ ಬಿದ್ದು ಅನಾಹುತಗಳು ಸಂಭವಿಸುತ್ತಿವೆ. ಇತ್ತೀಚೆಗೆ ಮದುವೆ ದಿಬ್ಬಣದ ವಾಹನವೊಂದು ಇದೆ ರಸ್ತೆಯಲ್ಲಿ ಬಿದ್ದಿದೆ. ದೊಡ್ಡ ಮಟ್ಟದಲ್ಲಿ ಅನಾಹುತ ಆಗುವ ಮುಂಚೆ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ರಸ್ತೆ ಸುಧಾರಣೆ ಮಾಡಬೇಕು. ಇಲ್ಲವಾದರೆ ಸಂಬಂಧಿಸಿದ ಇಲಾಖೆ ಮುಂದೆ ಗ್ರಾಮಸ್ಥರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಚೂಪಾದ ಜಲ್ಲಿ ಕಲ್ಲುಗಳು ಎದ್ದಿರುವುದರಿಂದ ಅದಕ್ಕೆ ಜಲ್ಲಿಕಲ್ಲಿನ ಪುಡಿ ಹಾಕದೆ ಇರುವುದರಿಂದ ವಾಹನಗಳ ಟೈಯರ್ಗಳು ಹಾಳಾಗಿವೆ. ವಾಹನಗಳು ಸಂಚಾರಕ್ಕೆ ತೊಂದರೆ ಆಗಿ ಹೊಸ ಟೈಯರ್ಗಳನ್ನು ಹಾಕಿ ಸಾಕಾಗಿದೆ. ಬಡವರು ಪ್ರತಿಬಾರಿ ಟೈಯರ್ ಎಲ್ಲಿಂದ ಹಾಕಿಸೋಣ ಎಂದು ಗ್ರಾಮಸ್ಥರು ಆರೋಪಿಸಿದರು.

ಈಗಾಗಲೇ ಹಲವು ಬಾರಿ ಇಲಾಖೆಯ ಅಧಿಕಾರಿಗಳಿಗೆ ಹೋಗಿ ರಸ್ತೆ ಸ್ಥಗಿತಗೊಂಡ ಸಮಸ್ಯೆಯ ಬಗ್ಗೆ ಕೇಳಲು ಹೋದರೆ, ಎಲ್ಲರಿಗೂ ಒಂದೇ ಉತ್ತರ ಕೊಟ್ಟು ಕಳುಹಿಸುತ್ತಾರೆ ಅದು ನೀರು ಹೊಡೆಯಿಸಿ ರೂಲರ್ ಆಡಿಸಲಾಗುತ್ತದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-26-305242419

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.