ಹೊರ್ತಿ: ‘ಈ ಹಿಂದೆ ಪ್ರಾಣಿ, ಪಕ್ಷಿಗಳ ಸಂತಾನ ಹೆಚ್ಚಾಗಿ ಮನೆ ಹಾಗೂ ಮನೆ ಸುತ್ತಲೂ ಮತ್ತು ಗಿಡ ಪೊದೆಗಳಲ್ಲಿ ಕಾಣುತ್ತಿದ್ದೆವು, ಆದರೆ ಈ ಆಧುನಿಕ ಜಗತ್ತಿನಲ್ಲಿ ಮೊಬೈಲ್, ಸೆಟಲೈಟ್, ವಾಹನಗಳ ಮಾಲಿನ್ಯಕ್ಕೆ ಪಕ್ಷಿಗಳ ಸಂತಾನ ಕ್ಷೀಣಿಸುತ್ತಿದೆ. ಮನುಜರು ಮನಸ್ಸು ಮಾಡಿದರೆ ಪಕ್ಷಿಗಳ ಸಂತಾನ ಉಳಿಸಲು ಸಾಧ್ಯ’ ಎಂದು ಝಳಕಿ ಗ್ರಾಮದ ಮತ್ತು ವಿಜಯಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಘವೇಂದ್ರ ಕಾಪಸೆ ಹೇ ಳಿದರು.

ಸಮೀಪದ ಝಳಕಿ ಗ್ರಾಮದ ಬಸ್ ಸ್ಟ್ಯಾಂಡ್ ಹಾಗೂ ಗ್ರಾಮ ಪಂಚಾಯಿತಿ ಮತ್ತು ಸೂರ್ಯ ಹೋಟೆಲ್ ಮತ್ತಿತರೆಡೆ ಗಿಡಗಳಲ್ಲಿ ಭಾನುವಾರ ಪರಣಿಯಲ್ಲಿ ನೇತು ಹಾಕಿ ಹಾಗೂ ಕಾಂಪೌಂಡ್, ಗೋಡೆಗಳ ಮೇಲೆ ಪ್ಲಾಸ್ಟಿಕ್ ಡಬ್ಬಿಯಲ್ಲಿ ಪಕ್ಷಿಗಳಿಗೆ ನೀರು ಹಾಕಿಟ್ಟು ಮಾತನಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಇಂಡಿ ತಾಲ್ಲೂಕು ಉಪಾಧ್ಯಕ್ಷ ಪ್ರಕಾಶ ಬಿರಾದಾರ, ಝಳಕಿ ವಲಯ ಅಧ್ಯಕ್ಷ ರವಿಕುಮಾರ ಹೂಗಾರ, ಶಶಿಧರ ಪಾಟೀಲ, ಪಿಂಟುದಾದಾ ಹಾಡ್ಸಗೆ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶ್ರೀಶೈಲ ಬನಸೋಡೆ, ವಿಠಲ ಕಾಗರ, ದಯಾನಂದ ಶಿವಣಗಿ, ಬಾಲಕೃಷ್ಣ ಭೋಸಲೆ ಹಾಗೂ ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-26-1056947909

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.