ವಿಜಯಪುರ: ಸೈಕಲ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ 9 ವರ್ಷದ ಬಾಲಕನಿಗೆ ಇಲ್ಲಿನ ಆರ್.ಕೆ.ಎಂ ಆಸ್ಪತ್ರೆಯ ವೈದ್ಯಕೀಯ ತಂಡವು ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ ಸಾವಿನ ದವಡೆಯಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸೈಕಲ್ ಅಪಘಾತದಿಂದಾಗಿ ಬಾಲಕನ ದೇಹದ ಹಲವು ಅಂಗಾಂಗಗಳಿಗೆ ತೀವ್ರ ಪೆಟ್ಟಾಗಿದ್ದು, ವೈದ್ಯರ ಸಮಯೋಚಿತ ಮತ್ತು ನಿಖರ ಚಿಕಿತ್ಸೆಯಿಂದಾಗಿ ಬಾಲಕ ಈಗ ಚೇತರಿಸಿಕೊಳ್ಳುತ್ತಿದ್ದಾನೆ.

ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದಾಗ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಹೊಟ್ಟೆಯೊಳಗೆ ಅತಿಯಾದ ರಕ್ತಸ್ರಾವ, ಯಕೃತ್ತಿನ ನಾಲ್ಕನೇ ಹಂತದ ಗಂಭೀರ ಗಾಯಗಳು ಹಾಗೂ ಪಿತ್ತರಸ ಸೋರಿಕೆ ಮತ್ತು ಶ್ವಾಸಕೋಶದ ಭಾಗದಲ್ಲಿ ರಕ್ತ ಸಂಗ್ರಹವಾಗುವಂತಹ ಪ್ರಾಣಾಪಾಯದ ಲಕ್ಷಣಗಳು ಕಂಡುಬಂದಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.

ಈ ಅತ್ಯಂತ ಸವಾಲಿನ ತುರ್ತು ಶಸ್ತ್ರಚಿಕಿತ್ಸೆಯ ನೇತೃತ್ವವನ್ನು ಮಕ್ಕಳ ಶಸ್ತ್ರಚಿಕಿತ್ಸಕ ಡಾ. ಸುರೇಂದ್ರ ಅಗರ್ವಾಲ್ ಅವರು ವಹಿಸಿದ್ದರು. ಅವರ ಶೀಘ್ರ ನಿರ್ಧಾರ ಮತ್ತು ತಾಂತ್ರಿಕ ಕೌಶಲದಿಂದಾಗಿ ರಕ್ತಸ್ರಾವವನ್ನು ನಿಯಂತ್ರಿಸಿ, ಯಕೃತ್ತಿನ ಸಂಕೀರ್ಣ ಗಾಯಗಳನ್ನು ಯಶಸ್ವಿಯಾಗಿ ಸರಿಪಡಿಸಲಾಯಿತು. ಅರಿವಳಿಕೆ ತಜ್ಞರಾದ ಡಾ. ಮೀನಲ್ ಅಗರ್ವಾಲ್ ಅವರ ಪಾತ್ರ ನಿರ್ಣಾಯಕವಾಗಿತ್ತು. ಇವರೊಂದಿಗೆ ಮಕ್ಕಳ ತಜ್ಞರಾದ ಡಾ. ಆದರ್ಶ ಬಗಲಿ, ಡಾ. ಲೋಕೇಶ ಅಹಿರಸಂಗ ಮತ್ತು ಡಾ. ಸಾಗರ್ ಅವರನ್ನೊಳಗೊಂಡ ತಂಡವು ಸಮನ್ವಯತೆಯಿಂದ ಕೆಲಸ ಮಾಡಿ ಬಾಲಕನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಆರ್.ಕೆ.ಎಂ ಆಸ್ಪತ್ರೆಯ ಅಧ್ಯಕ್ಷ ಶಂಭು ಕರ್ಪೂರಮಠ ಅವರು ವೈದ್ಯಕೀಯ ತಂಡದ ಅಸಾಧಾರಣ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-26-629208031

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.