ಇಂಡಿ: ಗುರುವಾರ ಸಂಜೆ 6 ಗಂಟೆಗೆ ತಾಲ್ಲೂಕಿನ ಸಾವಳಸಂಗ ಅರಣ್ಯ ಪ್ರದೇಶದಲ್ಲಿರುವ ಎರಡು ಸಾವಿರಕ್ಕೂ ಹೆಚ್ಚು ಗಿಡಗಳು ಸುಟ್ಟಿವೆ.

ಸಾವಳಸಂಗ ಗುಡ್ಡದ ಮೇಲೆ ಮೈತ್ರಾ ವಾಯು ಕೃಷ್ಣಾ ಲಿಮಿಟೆಡ್ ಖಾಸಗಿ ಕಂಪನಿಯವರು ಗಾಳಿಯಂತ್ರದಿಂದ ವಿದ್ಯುತ್ ತಯಾರಿಸುತ್ತಾರೆ. ವಿದ್ಯುತ್ ಯಂತ್ರದ ಕಂಬಗಳು ಮತ್ತು ವೈರ್ಗಳು ಅರಣ್ಯ ಪ್ರದೇಶದಲ್ಲಿ ಹಾಯ್ದು ಹೋಗುತ್ತದೆ. ಗಾಳಿ ಮಳೆಗೆ ವಿದ್ಯುತ್ ಸ್ಪರ್ಶ ಆಗಿ ಅಂದಾಜು 2000ಕ್ಕೂ ಹೆಚ್ಚು ಗಿಡಗಳು ಭಸ್ಮವಾಗಿವೆ.

ವಿದ್ಯುತ್ ತಯಾರಿಸುವಾಗ ವಿದ್ಯುತ್ ಅರಣ್ಯ ಪ್ರದೇಶದಿಂದ ಮುಖಾಂತರ ಬೇರೆ ಕಡೆಗೆ ಸಾಗಿಸುತ್ತಾರೆ. ಹಲವಾರು ಬಾರಿ ಅರಣ್ಯ ಪ್ರದೇಶದಿಂದ ವಿದ್ಯುತ್ ಹಾಯಿಸಬೇಡಿ ಎಂದು ಬರವಣಿಗೆ ಮೂಲಕ ಮನವಿ ಪತ್ರ ನೀಡಿದೆ ಮತ್ತು ಸಾಕಷ್ಟು ಬಾರಿ ಮೌಖಿಕವಾಗಿಯೂ ಹೇಳಲಾಗಿದೆ. ಆದರೂ ಏನೂ ಪ್ರಯೋಜನವಾಗಿಲ್ಲ ಎಂದು ವಲಯ ಅರಣ್ಯ ಅಧಿಕಾರಿ ಮಂಜುನಾಥ ಧುಳೆ ತಿಳಿಸಿದ್ದಾರೆ.

ಅನೇಕ ಪಕ್ಷಿಗಳು, ಪ್ರಾಣಿಗಳು, ಮೊಲ, ಮುಂಗಲಿ, ಹಂದಿ, ಬೆಕ್ಕು, ಹಾವುಗಳು ಸತ್ತಿವೆ. ಪಕ್ಷಿಗಳ ಮನೆಗಳು ಸುಟ್ಟಿವೆ. ಕಾಯ್ದೆ ಉಲ್ಲಂಘನೆ ವನ್ಯ ಜೀವಿ ರಕ್ಷಣೆ ಕಾಯ್ದೆ ಅಪರಾಧದ ಅಡಿ ದೂರು ದಾಖಲಿಸಲಾಗಿದೆ. ಇಂಡಿ ಅರಣ್ಯ ಇಲಾಖೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಶಿವರುದ್ರಪ್ಪ ಕಬಾಡಿಗ ಭೇಟಿ ನೀಡಿದ್ದಾರೆ.

ಇಂಡಿಯಿಂದ ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದವರು ಬಂದು ಬೆಂಕಿ ಆರಿಸುವಲ್ಲಿ ಸಹಕರಿಸಿದ್ದಾರೆ. ಇಲ್ಲದಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು ಎಂದು ಮಂಜುನಾಥ ಧುಳೆ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-26-1990085891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.