ಇಂಡಿ: ತಾಲ್ಲೂಕಿನಲ್ಲಿರುವ ರಸ್ತೆಗಳ ಸುಧಾರಣೆಗೆ ಕ್ರಮ ಜರುಗಿಸಲಾಗುತ್ತಿದ್ದು, ಮೂರಮೂಲಿ ತಾಂಡಾದಿಂದ ಸಾಲೋಟಗಿವರೆಗೆ ₹ 9.50 ಕೋಟಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಸಾಲೋಟಗಿ ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಸಾತಲಗಾಂವದಿಂದ ನಾದ ಕೆಡಿ ಗ್ರಾಮದವರೆಗೆ ₹ 9.90 ಕೋಟಿ, ಗೋಳಸಾರದಿಂದ ಮಿರಗಿವರೆಗೆ ₹ 5.60 ಕೋಟಿ ಮತ್ತು ರೂಗಿ ಕ್ರಾಸ್ನಿಂದ ತೆನೆಹಳ್ಳಿವರೆಗೆ ₹ 5.70 ಕೋಟಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಇದ್ದಾಗ ಜಲಧಾರೆ ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಿದೆ. ಬೇಸಿಗೆಯಲ್ಲಿ ಕೂಡಾ ತಾಲ್ಲೂಕಿನ ಕೆರೆಗಳು ತುಂಬಿವೆ ಎಂದರು. ಗುತ್ತಿಗೆದಾರರು ಗುಣಮಟ್ಟದ ರಸ್ತೆಗಳನ್ನು ಮಾಡಬೇಕು. 2026 ಮುಂದಿನ 3 ತಿಂಗಳಲ್ಲಿ ರಸ್ತೆಗಳು ಸುಧಾರಣೆ ಮಾಡುತ್ತೇನೆ ಎಂದರು.

ಡಾ.ಶಿವಯೋಗೇಪ್ಪ ಮಾಡ್ಯಾಳ ಸಾಲೋಟಗಿ, ಸಿದ್ದೇಶ್ವರ ಸ್ವಾಮೀಜಿ ಗುರುದೇವಾ ಶ್ರಮದ ಪೂಜ್ಯ ಸಂಗಮೇಶ್ವರ ಸ್ವಾಮೀಜಿ ಮಾತನಾಡಿದರು.

ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ಸಿಪಿಐ ಸುನೀಲ್ ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲ್ಯಾಂಡ್ ಆರ್ಮಿ ಎಇ ರಾಜೇಶ್ ಹೂಗಾರ, ಲೋಕೋಪಯೋಗಿ ಇಲಾಖೆಯ ದಯಾನಂದ ಮಠ, ಸಿಡಿಪಿಒ ಗೀತಾ ಗುತ್ತರಗಿಮಠ, ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಶಿವಯೋಗೆಪ್ಪ ಚನಗೊಂಡ, ಮಲ್ಲನಗೌಡ ಪಾಟೀಲ, ಅಜೀತ ಧನಶೆಟ್ಟಿ, ಜೀತಪ್ಪ ಕಲ್ಯಾಣಿ, ಅಯೂಬ ಬಾಗವಾನ, ಶ್ರೀಕಾಂತ ಕುಡಿಗನೂರ, ಜಾವೇದ ಮೂಮಿನ್, ಧರ್ಮಾವಾಲೀಕಾರ, ಎಂ ಆರ್ ಪಾಟೀಲ, ಪ್ರಶಾಂತ ಕಾಳೆ, ಸತೀಶ ಕುಂಬಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-26-762352059

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.