ಇಂಡಿ: ತಾಲ್ಲೂಕಿನ ಲಚ್ಯಾಣ ಗ್ರಾಮದ ಸಿದ್ಧಲಿಂಗ ಮಹಾರಾಜರ ಭಕ್ತರು, ವ್ಯಾಪಾರಸ್ಥರು ಹಾಗೂ ನೌಕರರ ಬಹುದಿನಗಳ ಬೇಡಿಕೆಯಾದ ಈ ಕ್ಷೇತ್ರದ ಮೂಲಕ ನಿತ್ಯ ಸೋಲಾಪುರ ಸಂಪರ್ಕಿಸುವ ಸಾರಿಗೆ ಇಲಾಖೆಯ ನೂತನ ಬಸ್ ಸೌಲಭ್ಯಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಶುಕ್ರವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಸುಕ್ಷೇತ್ರ ಲಚ್ಯಾಣಕ್ಕೆ ನೆರೆಯ ಮಹಾರಾಷ್ಟ್ರದ ಸೋಲಾಪುರ ನಗರದಿಂದ ಬರುವ ಅಪಾರ ಸಂಖ್ಯೆಯ ಭಕ್ತರಿಗೆ, ಲಚ್ಯಾಣ ಹಾಗೂ ಸುತ್ತಲ ಗ್ರಾಮಗಳ ವ್ಯಾಪಾರಸ್ಥರಿಗೆ ಸೋಲಾಪುರದಿಂದ ತಮ್ಮೂರಿಗೆ ನೇರವಾಗಿ ಬರಲು ಸಂಜೆ ವೇಳೆ ರೈಲು ಸೌಲಭ್ಯ ಇಲ್ಲದ ಕಾರಣ ತೊಂದರೆ ಆಗುತ್ತಿತ್ತು. ಆದ್ದರಿಂದ ಈ ಸೌಲಭ್ಯ ಕಲ್ಪಿಸಲಾಗಿದೆ’ ಎಂದರು.

ಸಿಂದಗಿ ನಿಲ್ದಾಣದಿಂದ ಇಂಡಿ ತಲುಪುವ ಈ ಬಸ್, ಇಂಡಿ ಪಟ್ಟಣದ ನಿಲ್ದಾಣದಿಂದ ನಿತ್ಯ ಮಧ್ಯಾಹ್ನ 3.45ಕ್ಕೆ ಹೊರಟು ಸಂಜೆ 4.10ಕ್ಕೆ ಲಚ್ಯಾಣ ಕ್ಷೇತ್ರ ತಲುಪಲಿದೆ. ಬಳಿಕ ಅಹಿರಸಂಗ, ಭೈರುಣಗಿ, ಭತಗುಣಕಿ, ಹಲಸಂಗಿ, ಧೂಳಖೇಡ ಮಾರ್ಗದ ಮೂಲಕ ಸೋಲಾಪುರ ಕೇಂದ್ರ ಬಸ್ ನಿಲ್ದಾಣ ತಲುಪಲಿದೆ. ಸಂಜೆ 7 ಗಂಟೆಗೆ ಸೋಲಾಪುರ ನಿಲ್ದಾಣದಿಂದ ಹೊರಟು ಇದೇ ಮಾರ್ಗವಾಗಿ ಲಚ್ಯಾಣ ಕ್ಷೇತ್ರದ ಮೂಲಕ ಇಂಡಿ ತಲುಪಿ, ಅಲ್ಲಿಂದ ಸಿಂದಗಿ ನಿಲ್ದಾಣ ತಲುಪಲಿದೆ.

ಲಚ್ಯಾಣ ಗ್ರಾಮಸ್ಥರು ಬಸ್ ಅನ್ನು ಶುಕ್ರವಾರ ಮಠದ ಆವರಣದಲ್ಲಿ ಸ್ವಾಗತಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಚಾಲಕ– ನಿರ್ವಾಹಕರನ್ನು ಸನ್ಮಾನಿಸಿದರು.

ಇಂಡಿ ತಹಶೀಲ್ದಾರ್ ಬಿ.ಎಸ್. ಕಡಕಭಾವಿ, ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಕೃಷಿ ಇಲಾಖೆಯ ಎಇಒ ಮಹಾದೇವಪ್ಪ ಏವೂರ, ಧನರಾಜ ಮುಜಗೊಂಡ, ಇಂಡಿ ಸಾರಿಗೆ ಘಟಕದ ವ್ಯವಸ್ಥಾಪಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-26-1011066591

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.