ವಿಜಯಪುರ: ‘ಇಂಡಿ ಉಪವಿಭಾಗ ವ್ಯಾಪ್ತಿಯಲ್ಲಿ ನಡೆದ ಒಟ್ಟು 20 ವಿವಿಧ ಪ್ರಕರಣಗಳಲ್ಲಿ 42 ಆರೋಪಿಗಳನ್ನು ಬಂಧಿಸಿ, ₹1,20,04,750 ಮೌಲ್ಯದ ಚಿನ್ನ, ಬೆಳ್ಳಿ ಆಭರಣ, ಜೆಸಿಬಿ, ಪಿಕಪ್, ಸ್ಕಾರ್ಪಿಯೋ, ಟ್ರ್ಯಾಕ್ಟರ್, ನೀರಿನ ಪಂಪ್ಸೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘2024ರಿಂದ 26ರ ವರೆಗೆ ದೇವಸ್ಥಾನ, ವಾಹನ, ಮನೆ, ಫೈನಾನ್ಸ್, ದನ, ಕುರಿ, ಪಂಪ್ಸೆಟ್ ಕಳ್ಳತನ ಮತ್ತು ಸುಲಿಗೆ, ದರೋಡೆ ಪ್ರಕರಣಗಳು ನಡೆದಿದ್ದವು’ ಎಂದು ಹೇಳಿದರು.

ಚಡಚಣ ಠಾಣೆ ವ್ಯಾಪ್ತಿಯ ಶಿರಾಡೋಣ ಗ್ರಾಮದಲ್ಲಿ ಬೀರಪ್ಪ ದೇವಸ್ಥಾನದ (ಪಲ್ಲಕ್ಕಿ ಮನೆ) ಬಾಗಿಲು ಕೀಲಿ ಮುರಿದು ಮೂರ್ತಿಯ ಮೇಲಿದ್ದ ಹಾಗೂ ಟ್ರೇಜರಿಯಲ್ಲಿದ್ದ ₹6.51 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣ ಕಳವು ಮಾಡಲಾಗಿತ್ತು.

‘ಮಹಾರಾಷ್ಟ್ರದ ಮಂಗಳವೇಡಾದ ನಾಗೇಶ ಭೋಸಲೆ ಎಂಬಾತನನ್ನು ಬಂಧಿಸಿ ₹ 6.42 ಲಕ್ಷ ಕಿಮ್ಮತ್ತಿನ ಬಂಗಾರ ಹಾಗೂ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ. ಟಾಕಳಿ ಗ್ರಾಮದಲ್ಲಿ ಪಿಕಪ್ ಗೂಡ್ಸ್ ವಾಹನ ಕಳವು ಮಾಡಿದ್ದ ತುಳಜಾಪುರದ ವಿಶಾಲ ಮೋಳೆ ಎಂಬಾತ ಬಂಧಿಸಿ, ವಾಹನ ಜಪ್ತಿ ಮಾಡಲಾಗಿದೆ’ ಎಂದರು.

ಸಿಂದಗಿ ಠಾಣೆ ವ್ಯಾಪ್ತಿಯ ಯರಗಲ್ ಬಿ.ಕೆ ಗ್ರಾಮದ ಲಕ್ಷ್ಮೀ ಶರಣಪ್ಪ ತಳವಾರ ಎಂಬುವರ ಮನೆಯಲ್ಲಿ ₹4.50 ಲಕ್ಷ ಮೌಲ್ಯದ ಬಂಗಾರ ಹಾಗೂ ಹಣ ಕಳವು ಪ್ರಕರಣದಲ್ಲಿ ಮೀರಜ್ನ ಶಂಕರ ಭೋಸ್ಲೆ ಎಂಬಾತನನ್ನು ಬಂಧಿಸಲಾಗಿದೆ. ಇದೇ ಆರೋಪಿಯು ಆಲಮೇಲ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲೂ ಭಾಗಿಯಾಗಿದ್ದು ಕಂಡು ಬಂದಿದ್ದು, ಈತನಿಂದ ₹6.80 ಲಕ್ಷ ಮೌಲ್ಯದ 162 ಗ್ರಾಂ ಬಂಗಾರ ಆಭರಣ ವಶಪಡಿಸಿಕೊಳ್ಳಲಾಗಿದೆ’ ಎಂದರು.

‘ಆಲಮೇಲ ಪಟ್ಟಣದಲ್ಲಿರುವ ದಾನೇಶ್ವರಿ ಫೈನಾನ್ಸ್ನಲ್ಲಿ ₹27.78 ಲಕ್ಷ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಫೈನಾನ್ಸ್ ಮ್ಯಾನೇಜರ್ ಸೋಮಣ್ಣ ಪೂಜಾರಿ ಮತ್ತು ಸಿಪಾಯಿ ಚಂದ್ರಶೇಖರ ಕುಪೇಂದ್ರ ಗೌಂಡಿ ಎಂಬುವರನ್ನು ಬಂಧಿಸಿ, ₹11 ಲಕ್ಷ ಜಪ್ತಿ ಮಾಡಲಾಗಿದೆ’ ಎಂದರು.

‘ಕಲಕೇರಿ ಠಾಣಾ ವ್ಯಾಪ್ತಿಯ ಗೊಲಗೇರಿ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಜೆಸಿಬಿ ಕಳವು ಪ್ರಕರಣದಲ್ಲಿ ಮಹಾರಾಷ್ಟ್ರದ ಹುಲಜಂತಿ ಗ್ರಾಮದ ಶಿವಾಜಿ ರೈತಮುರೆ ಮತ್ತು ಹೂವಣ್ಣ ಬಂಡಗಾರ ಎಂಬುವರನ್ನು ಬಂಧಿಸಿ, ಜೆಸಿಬಿ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಜಪ್ತಿ ಮಾಡಲಾಗಿದೆ’ ಎಂದರು.

ತಂಡದ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಇಂಡಿ ಉಪವಿಭಾಗದ ಡಿಎಸ್ಪಿ ಸದಾಶಿವ ಕಟ್ಟೀಮನಿ, ಇಂಡಿ ಉಪವಿಭಾಗದ ಸಿಪಿಐ, ವಿವಿಧ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಕೈಂ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-26-174270156

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.