ಬಸವನಬಾಗೇವಾಡಿ: ತಾಲ್ಲೂಕಿನ ಇವಣಗಿ ಗ್ರಾಮದ ವರದಾನಿ ಶ್ರೀ ಲಕ್ಕಮ್ಮದೇವಿ ಜಾತ್ರಾ ಮಹೋತ್ಸವವು ಮೇ 14 ರಿಂದ 18 ರವರೆಗೆ ವೈಭವದಿಂದ ಜರುಗಲಿದ್ದು, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಉತ್ಸವ ತಿಳಿಸಿದೆ.

ಮೇ 14ರಂದು ಬೆಳಿಗ್ಗೆ 10ಕ್ಕೆ ಸಕಲ ವಾದ್ಯವೈಭವಗಳೊಂದಿಗೆ ಪಟ್ಟಣದ ಏಳು ಪಾಂಡವರ ಗಿಡಕ್ಕೆ ತೆರಳಿ ಲಕ್ಕಮ್ಮದೇವಿಯನ್ನು ಬರಮಾಡಿಕೊಳ್ಳುವುದು. ವಿವಿಧ ಗ್ರಾಮಗಳಿಂದ ಆಗಮಿಸುವ 9 ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವುದು, ರಾತ್ರಿ 9ಕ್ಕೆ ಯಂಕಂಚಿಯ ಬೀರಲಿಂಗೇಶ್ವರ ಸಂಘದಿಂದ ಮಾಯಮ್ಮನ ಹಬ್ಬ ಕಾರ್ಯಕ್ರಮ ಜರುಗಲಿದೆ.

ಮೇ 15ರಂದು ಬೆಳಿಗ್ಗೆ 8ಕ್ಕೆ ಶ್ರೀದೇವಿಯ ಗಂಗಾ ಸ್ಥಳ ಪೂಜೆ ಜರುಗಲಿದೆ. ಬಳಿಕ ಸಕಲ ವಾದ್ಯವೈಭವಗಳು, 11 ಪಲ್ಲಕ್ಕಿ ಉತ್ಸವಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಹಾಯ್ದು ಮೆರವಣಿಗೆ ಮೂಲಕ ದೇವಿಯನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು. ಗ್ರಾಮ ದೇವತೆಗೆ ಉಡಿ ತುಂಬುವುದು, ದೇವಿಯ ನುಡಿಮುತ್ತು ಹಾಗೂ ಸಿದ್ಧ ಪುರುಷರ ಶಿವವಾಣಿ, ರಾತ್ರಿ 9 ಗಂಟೆಗೆ ಡೊಳ್ಳಿನ ಪದಗಳು ಜರುಗುವವು.

ಮೇ 16 ರಂದು ಬೆಳಿಗ್ಗೆ 9ಕ್ಕೆ ಭಾರ ಎತ್ತುವ ಸ್ಪರ್ಧೆ, ಗುಂಡು ಸಂಗ್ರಾಣಿ ಕಲ್ಲು, ಚೀಲ ಎತ್ತುವ ಕಾರ್ಯಕ್ರಮ, ಮಧ್ಯಾಹ್ನ 3ಗಂಟೆಗೆ ಪ್ರಸಿದ್ಧ ಜಂಗೀ ಕುಸ್ತಿಗಳು ಜರುಗುವವು, ರಾತ್ರಿ 10 ಗಂಟೆಗೆ ಗ್ರಾಮದವರಿಂದ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ, ಮೇ 17ರಂದು ಬೆಳಿಗ್ಗೆ 9ಕ್ಕೆ ತೇರ ಬಂಡಿ ಸ್ಪರ್ಧೆ, ರಾತ್ರಿ 8ಕ್ಕೆ ಪ್ರತಿಭಾ ಪುರಸ್ಕಾರ ಹಾಗೂ ಜಾನಪದ ಉತ್ಸವ ಜರುಗಲಿವೆ. ಮೇ 18ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ಗೀಗೀ ಪದಗಳು ಜರುಗುವವು, ರಾತ್ರಿ 8 ಗಂಟೆಗೆ ಪುರಾಣ ಮಂಗಲ, ರಾತ್ರಿ 9ಕ್ಕೆ ಸಾಮಾಜಿಕ ನಾಟಕ ಪ್ರದರ್ಶನ ಜರಗಲಿದೆ ಎಂದು ಉತ್ಸವ ಸಮಿತಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-26-1262722916

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.