ವಿಜಯಪುರ: ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿದೆ, ಅಧಿಕಾರ ಕಚ್ಚಾಟದಲ್ಲಿಯೇ ಕಾಂಗ್ರೆಸ್ ತೊಡಗಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಮಹಾರಾಷ್ಟ್ರದ ಕೊಲ್ಹಾಪುರ ಕನೇರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಠದಲ್ಲಿ ನಡೆದ ವಿಜಯಪುರ ಜಿಲ್ಲಾ ಬಿಜೆಪಿ ಪ್ರಶಿಕ್ಷಣ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಕೇವಲ ಕುಟುಂಬ ಹಾಗೂ ವೋಟ್ ಬ್ಯಾಂಕ್ ಆಧಾರಿತ ರಾಜಕಾರಣವನ್ನು ಮೈಗೂಡಿಸಿ ಕೊಂಡಿದೆ. ಕೋಟ್ಯಂತರ ಕಾರ್ಯಕರ್ತ ರನ್ನು ಹೊಂದಿ ಸಿದ್ಧಾಂತದೊಂದಿಗೆ ಬದ್ಧವಾಗಿ ನಡೆಯುವ ಏಕೈಕ ರಾಜಕೀಯ ಪಕ್ಷ ಬಿಜೆಪಿ ಎಂದರು.

ಮುಂಬರುವ ಚುನಾವಣೆಗೆ ಬಿಜೆಪಿ ಕಾರ್ಯಕರ್ತರು ಸಿದ್ಧರಾಗಬೇಕು, ಹೀಗಾಗಿ ಬಿಜೆಪಿ ಬಗ್ಗೆ ಜನತೆಯಲ್ಲಿ ಒಲವಿದೆ, ಒಗ್ಗಟ್ಟು ಮಂತ್ರ ಜಪಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಕನೇರಿ ಕಾಡಸಿದ್ದೇಶ್ವರ ಮಠ ಅಧ್ಯಾತ್ಮಿಕತೆಯ ದಿವ್ಯತೆಯ ಪಾವನ ನೆಲ, ಈ ನೆಲದಲ್ಲಿ ಅದ್ಭುತ ಶಕ್ತಿ ಇದೆ, ಕಾರ್ಯಕರ್ತರು ಈ ಅದ್ಭುತ ಅಧ್ಯಾತ್ಮಿಕತೆಯ ದಿವ್ಯಾನುಭವದಲ್ಲಿ ಪಕ್ಷ ಸಂಘಟನೆಯ ವಿಷಯಗಳನ್ನು ತಿಳಿದುಕೊಳ್ಳಲಿ ಎಂಬ ಆಶಯದಿಂದ ಈ ಬಾರಿ ಈ ಪ್ರಶಿಕ್ಷಣ ಶಿಬಿರವನ್ನು ಮಠದಲ್ಲಿ ಆಯೋಜಿಸಲಾಗಿದೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ವಿಭಾಗ ಸಹ ಪ್ರಭಾರಿ ಬಸವರಾಜ ಯಂಕಂಚಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ವಿಜಯಪುರ ಮೇಯರ್ ಎಂ.ಎಸ್. ಕರಡಿ, ಕಾಸುಗೌಡ ಬಿರಾದಾರ, ಸಂಜೀವ ಐಹೊಳಿ, ಚಿದಾನಂದ ಚಲವಾದಿ, ಅನೀಲ್ ಜಮಾದಾರ, ಮಳುಗೌಡ ಪಾಟೀಲ, ವೆಂಕಟೇಶ ರಂಗಣ್ಣವರ, ಸಾಬು ಮಾಶ್ಯಾಳ, ಈರಣ್ಣ ರಾವೂರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-26-1477386296

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.