ವಿಜಯಪುರ: ಅಕ್ರಮವಾಗಿ ಜಿಗಜಿವಣಗಿ ಗ್ರಾಮದ ಕೆರೆಗೆ ಪೈಪ್ಲೈನ್ ಮಾಡಿಕೊಂಡು ಕೃಷಿಗೆ ನೀರು ಬಳಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಇಂಡಿ ತಾಲ್ಲೂಕಿನ ಜಿಗಜೇವಣಿ ಗ್ರಾಮದ ಕೆರೆಯಲ್ಲಿರುವ ನೀರನ್ನು ಮಹಾರಾಷ್ಟ್ರದ ಜನರು ಪೈಪ್ಲೈನ ಮಾಡಿಕೊಂಡು ಅವರ ಕೃಷಿ ಭೂಮಿಗಳಿಗೆ, ದಿನ ಬಳಕೆಗೆ ಉಪಯೋಗಿಸುತ್ತಿದ್ದು. ಈಗ ಕೆರೆಯಲ್ಲಿ ಶೇ 20 ನೀರುಮಾತ್ರ ಉಳಿದಿದೆ. ಇದರಿಂದ ಗ್ರಾಮದಲ್ಲಿರುವ ದನ ಕರುಗಳಿಗೆ ಹಾಗೂ ದಿನಬಳಕೆಗೆ ಉಪಯೋಗಿಸಲು ನೀರು ಇಲ್ಲದಂತಾಗಿದ್ದು ಕೂಡಲೇ ಅಕ್ರಮವಾಗಿ ಅಳವಡಿಸಿದ ಪೈಪ್ಲೈನ್ಗಳನ್ನು ವಶಪಡಿಸಿಕೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ನಗರ ಘಟಕದ ಅಧ್ಯಕ್ಷರಾದ ವಿಕ್ರಮ ವಾಘಮೋರೆ, ಶಿದ್ರಾಯ ಬಿರಾದಾರ, ಸೋಮನಿಂಗ ಬಿರಾದಾರ, ಸುಖದೇವ ಬಿರಾದಾರ, ಶ್ರೀಶೈಲ ಬಿರಾದಾರ, ದತ್ತು ಬಡಿಗೇರ, ಅಮಸಿದ್ದ ಬಿರಾದಾರ, ಮಾಸಿದ್ದ ಜುಟ್ಟಗೊಂಡ, ರೇವಣಸಿದ್ದ ಜಲ್ಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-26-1640412841

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.