ದೇವರಹಿಪ್ಪರಗಿ: ತಾಲ್ಲೂಕಿನ ಕೊಂಡಗೂಳಿ ಗ್ರಾಮದ ರಸ್ತೆಗಳು ತ್ಯಾಜ್ಯ, ಕೆಸರು ನೀರಿನಿಂದ ತುಂಬಿ ಸಂಪೂರ್ಣ ಹಾಳಾಗಿವೆ. ಇದರಿಂದ ಸಾರ್ವಜನಿಕರಿಗೆ ನರಕಸದೃಶ ಪರಿಸ್ಥಿತಿ ನಿರ್ಮಾಣವಾಗಿದ್ದು,ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುವಂತಾಗಿದೆ.

ಕೊಂಡಗೂಳಿ ಗ್ರಾಮದ ಜನತೆ ಮೂಲ ಸೌಕರ್ಯಗಳ ಕೊರತೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರೂಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮೌನ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

‘ಹೊಸೂರು ಸಹಕಾರಿ ಸಂಘ ಕಚೇರಿ ಹತ್ತಿರ ರಸ್ತೆ ಸೇರಿದಂತೆ ಗ್ರಾಮದ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮಳೆ ಬಂದರೆ ರಸ್ತೆಗಳು ಕೆಸರುಮಯ ಆಗುತ್ತವೆ, ಬಿಸಿಲಾದರೆ ದೂಳು ಆವರಿಸುತ್ತದೆ. ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಹಾಗೂ ಸಾರ್ವಜನಿಕರು ಪ್ರತಿದಿನ ಜೀವಭಯದ ನಡುವೆ ಓಡಾಡುವ ಸ್ಥಿತಿ ಉಂಟಾಗಿದೆ. ಜನರ ಸಮಸ್ಯೆ ಕೇಳಬೇಕಾದ ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತು ಜನರ ಕಣ್ಣೀರಿಗೆ ಬೆಲೆ ಕೊಡದೆ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿರುವುದು ಖಂಡನೀಯ’ ಎಂದು ಗ್ರಾಮದ ನಿವಾಸಿ ಟಿ.ಎಸ್.ಹೆಬ್ಬಾಳ ಹೇಳಿದರು.

‘ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಸ್ಥಳ ಪರಿಶೀಲನೆ ನಡೆಸದೇ, ಸಮಸ್ಯೆ ಪರಿಹಾರಕ್ಕೆ ಮುಂದಾಗದೇ ಕಾಲಹರಣ ಮಾಡುತ್ತಿರುವುದು ಆಡಳಿತ ವೈಫಲ್ಯಕ್ಕೆ ಜೀವಂತ ಸಾಕ್ಷಿಯಾಗಿದೆ. ಅಧಿಕಾರಿಗಳು ತಮ್ಮ ಕರ್ತವ್ಯ ಮರೆತು ಕೇವಲ ಕಡತಗಳಲ್ಲಿ ಅಭಿವೃದ್ಧಿ ತೋರಿಸಿ, ನೆಲಮಟ್ಟದ ಸಮಸ್ಯೆಗಳ ಕಡೆ ಬೆನ್ನು ತಿರುಗಿಸಿರುವುದು ನಾಚಿಕೆಗೇಡಿನ ಸಂಗತಿ. ಆದಷ್ಟು ಬೇಗ ಗ್ರಾಮದ ರಸ್ತೆಗಳನ್ನು ದುರಸ್ತಿ ಮಾಡಬೇಕು. ಚರಂಡಿ ಹಾಗೂ ನೀರು ಹರಿವಿನ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು. ನಿಂತ ನೀರು ತೆರವುಗೊಳಿಸಿ ಸ್ವಚ್ಛತಾ ಕ್ರಮ ಕೈಗೊಳ್ಳಬೇಕು’ ಎಂದು ದೇವು ಯಂಕಂಚಿ, ಬಸವರಾಜ ಮದರಖಂಡಿ ಆಗ್ರಹಿಸಿದರು.

ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಗ್ರಾಮಕ್ಕೆ ಭೇಟಿ ನೀಡಿ ತುರ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆ, ಧರಣಿ, ರಸ್ತೆ ತಡೆ ಚಳವಳಿ ಹಾಗೂ ಕಾನೂನುಬದ್ಧ ಹೋರಾಟ ಆರಂಭಿಸಲಾಗುವುದು ಎಂದು ವೀರಗಂಟಯ್ಯ ಗದ್ದಿಗೆಮಠ, ಸಿದ್ದನಗೌಡ ಪಾಟೀಲ ಅವರು ಎಚ್ಚರಿಕೆ ನೀಡಿದರು.

ಮುಂದೆ ಯಾವುದೇ ಅನಾಹುತ, ರೋಗರುಜಿನ ಅಥವಾ ಸಾರ್ವಜನಿಕ ತೊಂದರೆ ಉಂಟಾದರೆ ಅದರ ಸಂಪೂರ್ಣ ಹೊಣೆಗಾರಿಕೆ ಸಂಬಂಧಿಸಿದ ಅಧಿಕಾರಿಗಳದ್ದೇ ಆಗಿರುತ್ತದೆ ಎಂದು ಗ್ರಾಮದ ಮಹಿಬೂಬ್ ಖಾಜಿ, ಮಲ್ಲು ಅಲ್ಲಾಪೂರ, ಗೌಡು ಎವೂರ, ಕುಮಾರ ಹೆಬ್ಬಾಳ ಎಂದು ಹೇಳಿದರು.

ಕೊಂಡಗೂಳಿ ಗ್ರಾಮದ ಸಮಸ್ಯೆ ಕುರಿತು ಮಾಹಿತಿ ಇದೆ. ಗ್ರಾಮಕ್ಕೆ ಶೀಘ್ರದಲ್ಲೇ ಭೇಟಿ ನೀಡಿ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸಲಾಗುವುದು.
ಭಾರತಿ ಚೆಲುವಯ್ಯ, ಇಒ, ತಾಲ್ಲೂಕು ಪಂಚಾಯಿತಿ, ದೇವರಹಿಪ್ಪರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.