ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪರವಾನಗಿ ಭೂಮಾಪಕರು ಸೋಮವಾರ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಭೂದಾಖಲೆಗಳ ಉಪ ನಿರ್ದೇಶಕರ ಕಚೇರಿ ಎಂದು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಸುಮಾರು 4500ಕ್ಕೂ ಅಧಿಕ ಮಂದಿ ಪರವಾನಗಿ ಭೂಮಾಪಕರು ಭೂಮಾಪನ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ‘ಪರವಾನಗಿ ಭೂಮಾಪಕ’ ಎಂಬುದು ಹೆಸರಿಗೆ ಮಾತ್ರ ಹುದ್ದೆಯಾಗಿದ್ದು, ನಮ್ಮನ್ನು ಸಾಮಾನ್ಯ ಸವಲತ್ತುಗಳಿಂದಲೂ ವಂಚಿಸಲಾಗಿದೆ ಎಂದು ದೂರಿದರು.

ಇಲಾಖೆಯ ಕೆಲವು ಅವಾಸ್ತವಿಕ ನಿಯಮಗಳ ವಿರುದ್ಧ ರಾಜ್ಯದಾದ್ಯಂತ ಎಲ್ಲಾ ಭೂಮಾಪಕರು ಒಗ್ಗಟ್ಟಾಗಿ, ಶಾಂತಿಯುತವಾಗಿ ಮುಷ್ಕರ ಹೂಡಿದ್ದೇವೆ. ಇದು ನಮ್ಮ ಹಕ್ಕುಗಳ ರಕ್ಷಣೆಗಾಗಿ ನಡೆಸುತ್ತಿರುವ ಸಾಂವಿಧಾನಿಕ ಹೋರಾಟವಾಗಿದೆ ಎಂದರು.

ಮುಷ್ಕರದಲ್ಲಿ ನಿರತರಾಗಿರುವ ಸಂದರ್ಭದಲ್ಲಿಯೇ ಕರ್ತವ್ಯಕ್ಕೆ ಹಾಜರಾಗಬೇಕು, ಇಲ್ಲವಾದಲ್ಲಿ ಪರವಾನಗಿ ರದ್ದು ಪಡಿಸಲಾಗುವುದು ಎಂಬ ಬೆದರಿಕೆ ಸ್ವರೂಪದ ಕಾರಣ ಕೇಳುವ ನೋಟೀಸ್ ನೀಡಿರುವುದು ಖಂಡನೀಯ ಎಂದರು.

ನಾವು ಸಾರ್ವಜನಿಕರಿಗೆ ತೊಂದರೆ ನೀಡುವ ಉದ್ದೇಶ ಹೊಂದಿಲ್ಲ. ಆದರೆ, ನಮ್ಮ ಬೇಡಿಕೆಗಳಿಗೆ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸುವ ಬದಲು, ಈ ರೀತಿ ಏಕಪಕ್ಷೀಯವಾಗಿ ಪರವಾನಗಿ ರದ್ದುಪಡಿಸುವ ಬೆದರಿಕೆ ನೋಟೀಸ್ ನೀಡಿರುವುದು ನಮ್ಮನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ ಎಂದು ಹೇಳಿದರು.

ನಾವು ಮುಷ್ಕರದಲ್ಲಿರುವ ಕಾರಣ ನಮ್ಮ ಕೆಲಸದ ಲಾಗಿನ್ಗಳು ನಿಷ್ಕ್ರಿಯಗೊಂಡಿದ್ದು, ಯಾವುದೇ ಅರ್ಜಿಗಳ ಹಂಚಿಕೆ ಸಹ ಆಗಿಲ್ಲ. ಆದ್ದರಿಂದ ನಮ್ಮಿಂದ ರೈತರು, ಸಾರ್ವಜನಿಕರು ಹಾಗೂ ಸರ್ಕಾರಿ ಕೆಲಸಗಳಿಗೆ ತೊಂದರೆ ಉಂಟಾಗಿದೆ ಎಂಬ ನೋಟಿಸಿನಲ್ಲಿನ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದರು.

ಯಾವುದೇ ರೀತಿಯ ಅರ್ಜಿಯ ಕೆಲಸಕ್ಕಾಗಿ ನಮಗೆ ಅರ್ಜಿಗಳು ಹಂಚಿಕೆ ಆಗಿರುವುದಿಲ್ಲ. ಹೀಗಿರುವಾಗ, ನಾವು ಕೆಲಸದಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿಸಿ ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಅಡಚಣೆ ಉಂಟುಮಾಡಿದ್ದೇವೆ ಎಂಬ ನೋಟಿಸಿನಲ್ಲಿನ ಆರೋಪಗಳೂ ಸಹ ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದರು.

ನಮ್ಮಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ನೋಟಿಸಿನಲ್ಲಿ ಉಲ್ಲೇಖಿಸಿರುವುದು ಸಹ ಸತ್ಯಕ್ಕೆ ದೂರವಾಗಿದೆ. ರಾಜ್ಯದ ಪರವಾನಗಿ ಭೂಮಾಪಕರು ಯಾವುದೇ ರೀತಿಯ ಕಾಯಂ ನೌಕರರಾಗಿರುವುದಿಲ್ಲ. ನಾವು ಯಾವುದೇ ಸದೃಢ ಹಾಗೂ ವೈಜ್ಞಾನಿಕ ವ್ಯವಸ್ಥೆಯೊಳಗೆ ಕೆಲಸ ಮಾಡುವ ಉದ್ಯೋಗಿಗಳಾಗಿರುವುದಿಲ್ಲ. ನಮಗೆ ನಿಗದಿತ ಮಾಸಿಕ ವೇತನವಿಲ್ಲ; ಆರೋಗ್ಯ ವಿಮೆ, ಭವಿಷ್ಯ ನಿಧಿ ಮುಂತಾದ ಮೂಲ ಸೌಲಭ್ಯಗಳೂ ಇಲ್ಲ ಎಂದು ತಿಳಿಸಿದ್ದಾರೆ.

ಇಲಾಖೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ಹೊತ್ತು ವರ್ಷಾನುಗಟ್ಟಲೆ ನಿರಂತರವಾಗಿ ಸೇವೆ ಸಲ್ಲಿಸುವ ಕೆಲಸಗಾರರಿಗೆ ಇರಬೇಕಾದ ಸೇವಾ ಭದ್ರತೆಯೂ ನಮಗಿಲ್ಲ ಎಂದು ಹೇಳಿದ್ದಾರೆ.

ಪರವಾನಗಿ ಭೂಮಾಪಕರು ಕಡತಗಳಿಗೆ ಮೀಸಲಾದ ಸೇವಾಧನವನ್ನು ಮಾತ್ರ ಈವರೆಗೂ ಪಡೆಯುತ್ತಾಬಂದಿರುತ್ತಾರೆ. ಸರ್ಕಾರಿ ಭೂಮಾಪಕರಂತೆ ನಮ್ಮಿಂದ ಕಚೇರಿಯ ಎಲ್ಲಾ ಕೆಲಸಗಳನ್ನು ಮಾಡಿಸಿಕೊಂಡಿದ್ದರೂ ಅದಕ್ಕೆ ತಕ್ಕ ಸೇವಾ ಶುಲ್ಕವನ್ನು ನಿಗದಿ ಮಾಡಿರುವುದಿಲ್ಲ. ಮಾಡಿದ ಕೆಲಸಕ್ಕೆ ಹಣವನ್ನು ಸಹ ಸರಿಯಾದ ಸಮಯಕ್ಕೆ ಪಾವತಿಸಿರುವುದಿಲ್ಲ ಎಂದು ಆರೋಪಿಸಿದರು.

ಪರವಾನಗಿ ಭೂಮಾಪಕರು ವರ್ಷಾನುಗಟ್ಟಲೆ ನೋವನ್ನು ಅನುಭವಿಸಿದ್ದು, ಪ್ರಸ್ತುತ ರಾಜ್ಯದಾದ್ಯಂತ ನ್ಯಾಯಕಾಗಿ ಶಾಂತಿಯುತ ಮುಷ್ಕರದಲ್ಲಿ ನಿರತರಾಗಿರುವ ಸಂದರ್ಭದಲ್ಲಿ ನಮ್ಮ ಧ್ವನಿಯನ್ನು ಅಡಗಿಸುವ ಸಲುವಾಗಿ ಕೆಲಸಕ್ಕೆ ಹಾಜರಾಗುವಂತೆ ಹಾಗೂ ಅದೇ ಜೀತ ಪದ್ಧತಿಗೆ ಹಿಂದಿರುಗುವಂತೆ ಒತ್ತಡ ತರುವ ಉದ್ದೇಶದಿಂದ ಕಾಯ್ದೆ, ಕಾನೂನು ಹಾಗೂ ನಿಯಮಗಳನ್ನು ಮುಂದಿಟ್ಟು, ಉಲ್ಲಂಘನೆ ಎಂಬ ಹೆಸರಿನಲ್ಲಿ ಪರವಾನಗಿ ರದ್ದುಪಡಿಸಲಾಗುವುದು ಎಂಬ ನೋಟಿಸ್ಗಳನ್ನು ತಾಲ್ಲೂಕು ಮಟ್ಟದಲ್ಲಿ ಹಾಗೂ ವೈಯಕ್ತಿಕವಾಗಿ ನೀಡುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದರು.

ಇದಕ್ಕೂ ಮೀರಿ ಇದೇ ಪದ್ಧತಿಯಲ್ಲಿ ನಮ್ಮನ್ನು ಮುಂದುವರಿಸಲು ಒತ್ತಾಯಿಸಿದಲ್ಲಿ, ನಾವುಗಳು ಸಾಮೂಹಿಕ ರಾಜೀನಾಮೆಗೆ ಮುಂದಾಗಬೇಕಾಗುತ್ತದೆ ಹಾಗೂ ಬೇರೆ ಮಾರ್ಗವಿಲ್ಲದೆ ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಕಾನೂನುಬದ್ಧವಾಗಿ ಉಗ್ರ ಹೋರಾಟದ ರೂಪಕ್ಕೆ ಕೊಂಡುಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಲಾಲಸಾಬ ಮುಲ್ಲಾ, ಉಪಾಧ್ಯಕ್ಷ ನವೀನ ರೊಟ್ಟಿ, ಜಿಲ್ಲಾ ಗೌರವ ಅಧ್ಯಕ್ಷ ಪರಶುರಾಮ ಅಚ್ಛೇಗಾರ, ಬಾಬು ಬೆನ್ನೂರ, ಸಂಗೀತಾ ಮೆಟಗಾರ, ಸೌಮ್ಯ ಪವಾರ, ನೇತ್ರಾ ಅಳ್ಳೊಳ್ಳಿ, ಸಚಿನ್ ಶಿರಶ್ಯಾಡ, ಪ್ರವೀಣ್ ತೆನಿಹಳ್ಳಿ, ನಂದೀಶ್ ಕನ್ನೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-26-1529551779

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.