ಭಾನುವಾರ, ಜೂಲೈ 5, 2020
23 °C

ವಿಜಯಪುರದಲ್ಲಿ ಕೋವಿಡ್‌ಗೆ ಐದನೇ ಸಾವು; ಸೋಂಕಿತರ ಸಂಖ್ಯೆ 79ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ವಿಜಯಪುರ: ಕೋವಿಡ್ 19 ಸೋಂಕಿತ 82 ವರ್ಷ ವಯಸ್ಸಿನ ವೃದ್ಧ (ಪಿ2011) ಬುಧವಾರ ಸಾವಿಗೀಡಾಗಿದ್ದಾರೆ.

ತೀವ್ರ ಉಸಿರಾಟದ ತೊಂದರೆ, ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರು. ಪಿ1661 ರೋಗಿಯ ಸಂಪರ್ಕದಿಂದ ಸೋಂಕು ತಗುಲಿತ್ತು. ಇಲ್ಲಿನ ಕೋವಿಡ್ 19 ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಮತ್ತೆ ಮೂವರಿಗೆ ಸೋಂಕು

29 ಮತ್ತು 40 ವರ್ಷ ವಯಸ್ಸಿನ ಇಬ್ಬರು ಪುರುಷರು ಮತ್ತು 16 ವರ್ಷ ವಯಸ್ಸಿನ ಬಾಲಕಿಗೆ ಬುಧವಾರ ಕೋವಿಡ್‌ ಸೋಂಕು ತಗುಲಿದೆ. ಮೂವರಿಗೂ ಮಹಾರಾಷ್ಟ್ರ ಸಂಪರ್ಕದಿಂದ ಸೋಂಕು ತಗುಲಿರುವದು ಧೃಡಪಟ್ಟಿದೆ.

ನಾಲ್ವರು ಗುಣಮುಖ

18 ಮತ್ತು 30 ವಯಸ್ಸಿನ ಇಬ್ಬರು ಯುವಕರು ಹಾಗೂ 36 ಮತ್ತು 54 ವರ್ಷ ವಯಸ್ಸಿನ ಇಬ್ಬರು ಪುರುಷರು ಸೇರಿದಂತೆ ನಾಲ್ಕು ಜನ ಬುಧವಾರ ಕೋವಿಡ್‌ 19ರಿಂದ ಗುಣಮುಖರಾಗಿ ಮನೆಗೆ ತೆರಳಿದರು. 

ಜಿಲ್ಲೆಯಲ್ಲಿ ಈವರೆಗೆ 79 ಜನ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಈ ಪೈಕಿ 48 ಜನರು ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು