ಇಂಡಿ: ‘ವಿಶ್ವದಲ್ಲಿಯೇ ಶ್ರೇಷ್ಠವಾದ ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ನಮ್ಮಲ್ಲಿಯ ಮಠ ಮಾನ್ಯಗಳು ಬೆಳೆಯಬೇಕು’ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಅವರ ಧರ್ಮಪತ್ನಿ ನಾಗರತ್ನಮ್ಮ ಮನಗೂಳಿ ಅಭಿಪ್ರಾಯಪಟ್ಟರು.

ಅವರು ಇಂಡಿ ನಗರದ ಸದಾಶಿವ ನಗರದಲ್ಲಿರುವ ಶಿರಶ್ಯಾಡ ಸಂಸ್ಥಾನ ಮಠದಲ್ಲಿ ಶನಿವಾರ ಆಯೋಜಿಸಿದ್ದ 3ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸ್ವಾತಂತ್ರ್ಯ ಪೂರ್ವದಿಂದಲೂ ಭಾರತೀಯ ಮಠಗಳು ದಾಸೋಹ, ವಸತಿ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಇಂದು ವಿಶ್ವದ ಎಲ್ಲಾ ದೇಶಗಳ ಸರ್ಕಾರಿ ಆಡಳಿತದಲ್ಲಿ ಭಾರತೀಯರು ಉನ್ನತ ಹುದ್ದೆಯಲ್ಲಿದ್ದು ಮಹತ್ವದ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ತುಮಕೂರಿನ ಸಿದ್ಧಗಂಗಾ ಮಠ, ಧಾರವಾಡದ ಮುರುಘಾಮಠ, ಸುತ್ತುರೂ ದೇಶಿಕೇಂದ್ರ ಶಿವಯೋಗಿಗಳ ಮಠ ಇಂತಹ ನೂರಾರು ಮಠಗಳು ಕರ್ನಾಟಕದಲ್ಲಿಯೇ ಕಾಣುತ್ತೇವೆ. ಇವಲ್ಲದೇ ದೇಶದ ಇನ್ನಿತರ ಕಡೆಗಳಲ್ಲಿಯೂ ಇಂತಹ ಮಠಗಳ ಸೇವೆಯಿಂದ ಲಕ್ಷಾಂತರ ಬಡ ವಿದ್ಯಾರ್ಥಿಗಳು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಕಾರಣ ಸಾರ್ವಜನಿಕರು ಮಠಗಳಿಗೆ ತಮ್ಮ ಕೈಲಾದಷ್ಟು ಸಹಾಯ ನೀಡಿ ಅವುಗಳ ಬೆಳವಣಿಗೆಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡ ಮಂಜುನಾಥ ವಂದಾನ ಮಾತನಾಡಿ, ‘ಶಿರಶ್ಯಾಡ ಸಂಸ್ಥಾನ ಮಠ ಸರ್ವಧರ್ಮಗಳ ಬಡ ವಿದ್ಯಾರ್ಥಿಗಳಿಗಾಗಿ ಉಚಿತ ವಸತಿ ನಿಲಯ ಕಟ್ಟುತ್ತಿದೆ. ಅದಕ್ಕೆ ಸಹಾಯ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಆಲಮೇಲ ಪಟ್ಟಣದ ಲಲಿತ ಸಹಸ್ರನಾಮ ಮಾತೃ ಬಳಗದ ಸದಸ್ಯೆ ಕಮಲಾ ಈರಣ್ಣ ಕಡಣಿ ಮತ್ತು ಅವರ ತಂಡ ಸಹಸ್ರನಾಮ ಜಪ ಮಾಡಿದರು. ನಿವೃತ್ತ ಸೈನಿಕ ದಂಪತಿಗಳಿಗೆ ಹಾಗೂ 60 ವರ್ಷ ದಾಂಪತ್ಯ ಜೀವನ ನಡೆಸಿದ ಹಿರಿಯ ನಾಗರಿಕ ದಂಪತಿಗಳಿಗೆ ಸನ್ಮಾನಿಸಲಾಯಿತು. ಮುರುಘೇಂದ್ರ ಶ್ರೀ ಆಶಿರ್ವಚನ ನೀಡಿದರು.

ಉದ್ದಿಮೆದಾರ ಶ್ರೀಪತಿಗೌಡ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸೈನಿಕ ಸಂಘ ಇಂಡಿ ಅಧ್ಯಕ್ಷ ಬಸವರಾಜ ಬಂಕೂರ ಪುಸ್ಪಾರ್ಚನೆ ಮಾಡಿದರು. ಹಿರಿಯ ನಾಗರಿಕ ಜಿ.ವೈ.ಗೊರನಾಳ ಸಸಿಗೆ ನೀರುಣಿಸಿದರು. ವಿಜಯಪುರ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ರಾಮಪ್ಪ ಎಲ್.ಕೆ. ಉಪಾಧ್ಯಕ್ಷ ಎಸ್.ಎಂ.ಬಿರಾದಾರ, ಅನಂತ ಜೈನ್, ಅನಿಲಪ್ರಸಾದ ಏಳಗಿ, ಶಿಕ್ಷಕ ಮಲ್ಲಿಕಾರ್ಜುನ ಬುರುಕುಲೆ, ಸಂಗಣ್ಣ ಹೂಗಾರ ಇದ್ದರು.

ಮಲ್ಲಿಕಾರ್ಜುನ ಬುರುಕುಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಣ್ಣ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-26-1378954202

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.