ವಿಜಯಪುರ: ಬಿ.ಎಲ್.ಡಿ.ಇ ಆಸ್ಪತ್ರೆ ಆವರಣದಲ್ಲಿ ಅಗ್ನಿ ಶಾಮಕ ಇಲಾಖೆ, ಗೃಹ ರಕ್ಷದ ದಳ, ಬಿ.ಎಲ್.ಡಿ.ಇ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ತಂಡ ಮತ್ತು ಎನ್.ಎನ್.ಸಿ ಘಟಕಗಳಿಂದ (ಏರ್ ರೈಡ್) ಬಾಂಬ್ ಸ್ಫೋಟ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶುಕ್ರವಾರ ಅಣಕು ಕಾರ್ಯಾಚರಣೆ ನಡೆಸಿದರು.

ಬಾಂಬ್ ಸ್ಪೋಟ ಆದ ಸಮಯದಲ್ಲಿ ಕೈಗೊಳ್ಳಬೇಕಾದ ಪ್ರಾಥಮಿಕ ಉಪಚಾರಗಳ ಕುರಿತು ಅಣಕು ಪ್ರದರ್ಶನ ಮುಖಾಂತರ ಒಳಗೆ ಸಿಲುಕೊಂಡಿರುವ ಸಾರ್ವಜನಿಕರನ್ನು ತುರ್ತಾಗಿ ರಕ್ಷಿಸಲು ಕ್ರಮ ವಹಿಸುವುದು ಜೊತೆಗೆ ಕಪ್ಪು ಬಣ್ಣದ ಗುರುತು ಮರಣ ಹೊಂದಿದವರೆಂದು ಗುರುತಿಸಲಾಗುವುದು. ಕೆಂಪು ತೀವ್ರತರವಾಗಿ ಗಾಯಗೊಂಡಿವರೆಂದು, ಹಳದಿ ಬಣ್ಣ ಕಡಿಮೆ ಗಾಯಗೊಂಡವರೆಂದು ಹಾಗೂ ಹಸಿರು ಬಣ್ಣ ಅಪಾಯದಿಂದ ಪಾರಾದವರೆಂದು ಪರಿಗಣಿಸುವಂತೆ ಇಲ್ಲಿ ನಡೆದ ಅಣಕು ಪ್ರದರ್ಶನ ಯಶಸ್ವಿಯಾಗಿ ನಡೆಸಿಕೊಡಲಾಯಿತು.

ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಘಟನೆ ಸಂಭವಿಸಿದ ಸಂದರ್ಭದಲ್ಲಿ ಸಾರ್ವಜನಿಕರು ಕೂಡ ಮುನ್ನೆಚ್ಚರಿಕೆ ಕ್ರಮ ವಹಿಸಬಹುದಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಇಲಾಖೆ ಅಧಿಕಾರಿಗಳು, ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಅಣಕು ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.

ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಶಶಿಧರ ನೀಲಗರ, ಅಗ್ನಿ ಶಾಮಕ ಠಾಣಾಧಿಕಾರಿ ಉಮೇಶ ತಳಕೇರಿ, ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ಅಶೋಕ ಜಡ್ಡೆನ್ನವರ, ಅಶೋಕ ರಾಠೋಡ, ಗೃಹ ರಕ್ಷದ ಕಮಾಡೆಂಟ್ ಶಿವಾನಂದ ಶಿವೂರ, ಡೆಪ್ಯೂಟಿ ಕಮಾಡೆಂಟ್ ಮಹಾದೇವ ಪೂಜಾರ, ಬಿ.ಎಲ್.ಡಿ.ಇ ಡೀಮ್ಡ್ ಯುನಿವರ್ಸಿಟಿಯ ಡೀನ್ ಮತ್ತು ಪ್ರಾಚಾರ್ಯ ಡಾ. ತೇಜಸ್ವಿನಿ ವಲ್ಲಭ, ಉಪ ಪ್ರಾಚಾರ್ಯ ಡಾ.ವಿಜಯಕುಮಾರ ಟಿ.ಕೆ, ಡಾ. ಆನಂದ ಅಂಬಲಿ, ಡಾ.ಎನ್.ಎಸ್ ಬೆಂತೂರ, ಡಾ. ರವಿಕುಮಾರ ಬಿರಾದಾರ, ಡಾ. ಐ.ಎಸ್. ಧಾರವಾಡಕರ, ಡಾ.ಎಸ್.ಎಸ್ ಕಟ್ಟಿ, ಡಾ. ವಿನೋದ ಜಾಧವ, ಶಾಂತೇಶ ಸಲಗರೆ, ಶಶಿಕಲಾ ತೇರದಾಳ, ಮಂಗಲಾ ಕೋಳಿ, ಜಯಂತಿ ಆರ್, ಚೇತನ ಜೋರಾಪುರ, ಸುಧಾರಕರ ಸಮಗೊಂಡ, ಪ್ರಕಾಶ ಜಕ್ಕೊಂಡಿ, ಅಶ್ವತಾ ಕೆ, ಮಲ್ಲಿಕಾರ್ಜುನ ಮೇತ್ರಿ, ವಿಶ್ವನಾಥ ಬಿರಾದಾರ, ಆನಂದ ಪಾಟೀಲ, ಏಕನಾಥ ಜಾಧವ, ರಾಕೇಶ ಜೈನಾಪುರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-26-1112968396

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.