ಆಲಮೇಲ: ತಾಲ್ಲೂಕಿನ ಮೋರಟಗಿ ಗ್ರಾಮದಲ್ಲಿ ಚಾವಣಿ ಕುಸಿತದಿಂದ ಒಂದೇ ಕುಟುಂಬದ ನಾಲ್ವರು ಮೃತಾರಾದ ಹಿನ್ನೆಲೆಯಲ್ಲಿ ವಿಜಯಪುರ ಲೋಕಾಯುಕ್ತ ಎಸ್ಪಿ ಮಲ್ಲೇಶ.ಟಿ ಹಾಗೂ ಸಿಪಿಐ ನಿಂಗಪ್ಪ ಪೂಜಾರಿ ಭೇಟಿ ನೀಡಿ ಮೃತ ಗುರುರಾಜ ಬಡಿಗೇರ್ ತಾಯಿಗೆ ಸಾಂತ್ವನ ಹೇಳಿದರು.

ಘಟನೆ ಕುರಿತು ಮಾತನಾಡಿದ ಅವರು ಪ್ರಕೃತಿ ವಿಕೋಪವೋ ಅಥವಾ ಪರಮಾತ್ಮನ ಆಟವೋ ಗೊತ್ತಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಪ್ರಥಮ ಬಾರಿ ಇಂತಹ ಘಟನೆ ಸಂಭವಿಸಿದೆ. ಹುಟ್ಟು ಹೀಗೆ ಆಗುತ್ತೆ ಸಾವು ಹೀಗೆ ಬರುತ್ತೆ ಅಂತ ಯಾರು ಬಲ್ಲವರಿಲ್ಲ. ಸಣ್ಣ ವಯಸ್ಸಿನ ದಂಪತಿ ಹಾಗೂ ಜಗತ್ತೇ ಕಾಣದ ಕಂದಮ್ಮಗಳ ಸಾವು ಮಾನಸಿಕ ಆಘಾತ ಉಂಟು ಮಾಡಿದೆ. ಸುದ್ದಿ ತಿಳಿದು ನಮಗೂ ಕೂಡ ಸಾಕಷ್ಟು ದುಃಖವಾಗಿದೆ. ಸರ್ಕಾರ ಈಗಾಗಲೇ ತುರ್ತು ಪರಿಹಾರವಾಗಿ ₹ 20 ಲಕ್ಷ ನೀಡುತ್ತಿದೆ ಬದುಕಿರುವ ಮಗನಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿ ಸರ್ಕಾರ ಹಾಗೂ ಅಧಿಕಾರಿಗಳು ಸದಾ ನಿಮ್ಮೊಂದಿಗೆ ಇರುತ್ತೇವೆ, ಮಗುವಿಗೆ ಇತರ ಪರಿಹಾರ ಬರುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಅಭಿವೃದ್ಧಿ ಅಧಿಕಾರಿಗೆ ತರಾಟೆ: ಮೃತ ಕುಟುಂಬದ ಮನೆಗೆ ಕಾಲ್ನಡಿಗೆ ಮೂಲಕ ತೆರಳುವ ಮಾರ್ಗದಲ್ಲಿ ಅಕ್ಕ ಪಕ್ಕದ ಚರಂಡಿ ಮತ್ತು ರಸ್ತೆ ಮೇಲೆ ಬಿದ್ದಿರುವ ಕಸ ಅದರ ದುರ್ವಾಸನೆ ಕಂಡು ಸ್ಥಳೀಯ ಅಭಿವೃದ್ಧಿ ಅಧಿಕಾರಿಯನ್ನು ಮಲ್ಲೇಶ ತರಾಟೆಗೆ ತೆಗೆದುಕೊಂಡರು.

‘ಏನ್ ಮಾಡ್ತಿದ್ದೀರಿ ಇದೇನು ಊರಾ? ಅಥವಾ ಕೆರೆನಾ? ರಸ್ತೆ ಮೇಲೆ ಗಡಸು ನೀರು, ಸ್ವಚ್ಛತೆ ಇಲ್ಲ, ಯಾಕೆ? ಸರ್ಕಾರ ಅನುದಾನ ನೀಡಿಲ್ವಾ? ಪ್ರತಿ ದಿನ ಪಂಚಾಯಿತಿಗೆ ಬರ್ತೀರಾ?. ಗ್ರಾಮದಲ್ಲಿ ಡಂಗುರು ಸಾರುವ ಮೂಲಕ ಜಾಗ್ರತಿ ಮೂಡಿಸಿ, ಪ್ರತಿ ವಾರ್ಡ್ನಲ್ಲಿ ಖುದ್ದಾಗಿ ಸಂಚರಿಸಿ ಸತ್ವ ಕಳೆದುಕೊಂಡ ಹಳೆಯ ಮಣ್ಣಿನ ಚಾವಣಿ ಹಾಗೂ ಸ್ಲಾಬ್ ಹಾಕಿರುವ ಮನೆ ಪರಿಶೀಲಿಸಿ ನೋಟಿಸ್ ಜಾರಿ ಮಾಡಿ ತೆರುವುಗೊಳಿಸುವ ಕಾರ್ಯವಾಗಬೇಕು ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಸಿಂದಗಿ ಪಿಎಸ್ಐ ಶ್ರೀಕಾಂತ ಕಾಂಬಳೆ, ಬಾಬು ರಾಠೋಡ, ಪಿಡಿಒ ಶೋಭಾ ಮದಗಲ್, ಗ್ರಾಮ ಲೆಕ್ಕಧಿಕಾರಿ ಮೌನೇಶ್ ಪೂಜಾರಿ, ಕಾರ್ಯದರ್ಶಿ ಸುಭಾಸ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-26-505763962

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.