ವಿಜಯಪುರ: ‘ತಾಯಿ ಪ್ರೀತಿ, ತ್ಯಾಗ, ತಾಳ್ಮೆ, ನಿಸ್ವಾರ್ಥತೆಯ ಪ್ರತಿರೂಪ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜ್ಯಪಾಲ ಚವ್ಹಾಣ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ವಿಶ್ವ ತಾಯಂದಿರ ದಿನ ಹಾಗೂ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಕಸಾಪ ಅತ್ಯಂತ ಕ್ರಿಯಾಶೀಲವಾಗಿ ಸಾಹಿತ್ಯದ ಚಟುವಟಿಕೆಗಳನ್ನು ನಡೆಸುವ ಮೂಲಕ ನಾಡು-ನುಡಿಯ ಗೌರವ ಹೆಚ್ಚಿಸುವ ಕಾರ್ಯ ಮಾಡುತ್ತಿರುವುದು ಇಡೀ ಜಿಲ್ಲೆಯ ಘನತೆ, ಗೌರವವನ್ನು ಹೆಚ್ಚಿಸಿದೆ’ ಎಂದರು.

ಚಡಚಣ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಎಂ.ಎಸ್. ಮಾಗಣಗೇರಿ ಮಾತನಾಡಿ, ‘ದತ್ತಿದಾನಿಗಳನ್ನು ಸ್ಮರಿಸುವುದು ನಮ್ಮೆಲ್ಲರ ಧ್ಯೇಯವಾಗಬೇಕು. ಅವರು ತಮ್ಮ ತ್ಯಾಗದ ಫಲವಾಗಿ ಇಟ್ಟ ದತ್ತಿಗೆ ಪ್ರತಿ ವಾರವೂ ಸಾಕ್ಷಿಯಾಗಿ ಜ್ಞಾನ ದಾಸೋಹ ಪಡೆದುಕೊಳ್ಳುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಅನುಪಮವಾದುದು’ ಎಂದು ಹೇಳಿದರು.

‘ವಿಶ್ವ ತಾಯಂದಿರ ದಿನ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅರ್ಜುಣಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸವಿತಾ ಝಳಕಿ ಮಾತನಾಡಿ, ‘ತಾಯಿಯನ್ನು ದೇವರೆಂದು ಆರಾಧಿಸಿ, ಪೂಜಿಸುವ ಸನಾತನ ಸಂಸ್ಕೃತಿ ನಮ್ಮದು. ನಮ್ಮೆಲ್ಲರ ಸಹನಾಮೂರ್ತಿಯೇ ತಾಯಿ’ ಎಂದರು.

‘ಜನಪದ ಸಾಹಿತ್ಯದಲ್ಲಿ ಗರತಿಯ ಜೀವನ’ ಎಂಬ ವಿಷಯದ ಕುರಿತು ಸಾಹಿತಿ ಶಿವಲೀಲಾ ಮುರಾಳ ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಸುನಂದಾ ಕೋರಿ, ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ, ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಶಶಿಕಲಾ ನಾಯ್ಕೋಡಿ, ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ, ಶೋಭಾ ಬಡಿಗೇರ,ವಿಕಾಸ ಖೇಡ, ಎಂ.ಡಿ.ಹೆಬ್ಬಿ, ಶಿವಕುಮಾರ ಬಾಗಿ, ಶಶಿಕಲಾ ಸ್ಥಾವರಮಠ, ಅರ್ಜುನ ಶಿರೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-26-996241194

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.