ಕೊಲ್ಹಾರ: ‘ಮುಳವಾಡ ಏತ ನೀರಾವರಿ ಸ್ಕೀಮ್ 1 ಮತ್ತು 2ನ್ನು ಪ್ರಾರಂಭಿಸಿ ಕೂಡಲೇ ಕಾಲುವೆಗಳಿಗೆ ನೀರು ಹರಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ತಾಲ್ಲೂಕಿನ ಮಟ್ಟಿಹಾಳ ಕ್ರಾಸ್ ಹತ್ತಿರದ ಕೃಷ್ಣ ಭಾಗ್ಯ ಜಲನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಕೊಲ್ಹಾರ ತಾಲ್ಲೂಕು ಅಧ್ಯಕ್ಷ ಸೋಮು ಬಿರಾದರ್ ಮಾತನಾಡಿ, ‘ರೈತರ ಜಮೀನುಗಳಿಗೆ ನೀರಿನ ಅಭಾವವಿದ್ದು, ಜನ– ಜಾನುವಾರುಗಳಿಗೆ ನೀರಿನ ಸಮಸ್ಯೆ ಆಗುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಬಸವನಬಾಗೇವಾಡಿ, ಬಬಲೇಶ್ವರ, ಕೊಲ್ಹಾರ ತಾಲ್ಲೂಕಿನಲ್ಲಿ ಸಮಸ್ಯೆ ಆಗುತ್ತಿದೆ’ ಎಂದರು.

‘ಆಲಮಟ್ಟಿ ಅಣೆಕಟ್ಟೆಯಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದು, ಅದರ ಸಮರ್ಪಕ ಬಳಕೆಗಾಗಿ ಮುಳವಾಡ ಏತ ನೀರಾವರಿಯ ಹಂತ 1 ಮತ್ತು 2ಕ್ಕೆ ನೀರು ಹರಿಸಿ ಕೆರೆ, ಹಳ್ಳಕೊಳ್ಳಗಳನ್ನು ತುಂಬಿಸಬೇಕು’ ಎಂದು ಹೇಳಿದರು.

ಕೆಬಿಜೆಎನ್ಎಲ್ ಅಧಿಕಾರಿ ಗೋವಿಂದ ರಾಠೋಡ, ತಹಶೀಲ್ದಾರ್ ಸಂತೋಷ್ ಮ್ಯಾಗೇರಿ, ಪಿಎಸ್ಐ ಅಶೋಕ್ ನಾಯಕ್, ರೈತ ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-26-1686045946

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.