ಹೊರ್ತಿ: ಕೆರೆ ಮತ್ತು ಹಳ್ಳ ಹೂಳೆತ್ತುವ ನರೇಗಾ ಕಾಮಗಾರಿಯಲ್ಲಿ ಹೆಚ್ಚು ಕೂಲಿಕಾರರು ಭಾಗವಹಿಸುವಂತೆ ತಿಳಿಸಬೇಕು ಎಂದು ಇಂಡಿ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಸಂಜಯ ಖಡಗೆಕರ ಹೇಳಿದರು.

ಸಮೀಪದ ಕೊಳುರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಳಸಂಗ ಗ್ರಾಮದ ವ್ಯಾಪ್ತಿಯ ಸಾವಳಸಂಗ ಕೆರೆಯಲ್ಲಿ ಹೂಳು ತೆಗೆಯುವ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿದರು.

ಬಳಿಕ ಕೂಲಿಕಾರರೊಂದಿಗೆ ಸಂವಾದ ನಡೆಸಿ, ಹೆಚ್ಚಿನ ಕೂಲಿಕಾರರನ್ನು ಕರೆತರುವಂತೆ ತಿಳಿಸಿದರು.

‘ಪ್ರತಿದಿನ ಕನಿಷ್ಠ 100 ಕೂಲಿಕಾರರಿಗೆ ಕೆಲಸ ನೀಡಬೇಕು’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವು ಪೂಜಾರಿ ಅವರಿಗೆ ತಿಳಿಸಿದರು.

ಎಸ್.ಡಿ.ಎ. ಅರುಣ ಅಂಕಲಗಿ, ಡಿಇಒ ಶರಣಗೌಡ ಪಾಟೀಲ ಹಾಗೂ ಗ್ರಾಮ ಕಾಯಕ ಮಿತ್ರ ಮತ್ತು ಪಂಚಾಯಿತಿ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-26-852845051

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.