ಬಸವನಬಾಗೇವಾಡಿ: ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ (ಎನ್ಟಿಪಿಸಿ) ಕೃತಕ ಹಾರು ಬೂದಿ ಕೆರೆಗಳಿಂದ ಆಗುತ್ತಿರುವ ಹಾನಿ, ಸಮಸ್ಯೆಗಳ ವಿರುದ್ಧ ರೈತ ಸಂಘ ಹಾಗೂ ಸ್ಥಳೀಯ ರೈತರು ಬಹುದಿನಗಳಿಂದ ಆಕ್ರೋಶ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಸೋಮವಾರ ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ರೈತರ ಅಹವಾಲು ಆಲಿಸಿದರು.

ರೈತ ಸಂಘದ ಮುಖಂಡರಾದ ಸೋಮು ಬಿರಾದಾರ, ರಮೇಶ ಬೀಳಗಿ ಮಾತನಾಡಿ, ‘ಕೂಡಗಿ ಎನ್ಟಿಪಿಸಿ ಹಾರು ಬೂದಿಗಾಗಿ ಮಸೂತಿ ಬಳಿ ನಿರ್ಮಿಸಿರುವ ಕೃತಕ ಕೆರೆಗಳಲ್ಲಿ ಮೊದಲು ಬೋಟ್ ಗಳಲ್ಲಿ ಬೂದಿ ತುಂಬಿ ಟ್ಯಾಂಕರ್ ಗಳ ಮೂಲಕ ಸ್ಥಳಾಂತರ ಮಾಡುತ್ತಿದ್ದರು. ಈಗ ಕೆರೆಯಲ್ಲಿ ನೀರು ಹರಿಸದೇ ಒಣ ಬೂದಿಯನ್ನು ಜೆಸಿಬಿ, ಹಿಟಾಚಿ ಯಂತ್ರಗಳ ಮೂಲಕ ತೆರೆದ ಟಿಪ್ಪರ್ ಹಾಗೂ ಲಾರಿಗಳ ಮೂಲಕ ಸ್ಥಳಾಂತರಿಸುತ್ತಿದ್ದಾರೆ. ಇದರಿಂದ ರಾಸಾಯನಿಕ ಮಿಶ್ರಿತ ಬೂದಿ ಹಾರಾಟ, ಧೂಳಿನಿಂದ ಸುತ್ತಲಿನ ಗ್ರಾಮಗಳ ಜನ ಜಾನುವಾರಗಳ ಕುಡಿಯುವ ನೀರು, ಆಹಾರದಲ್ಲಿ ಸೇರಿ ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸುವಂತಾಗಿದೆ’ ಎಂದು ದೂರಿದರು.

‘ರೈತರ ಫಲವತ್ತಾದ ಕೃಷಿ ಭೂಮಿ ಹಾಳಾಗಿ ಎಲ್ಲಾ ಬೆಳೆಗಳ ಮೇಲೆ ಬೂದಿ ದೂಳು ಆವರಿಸಿದೆ. 200-300 ಎಕರೆ ಪ್ರದೇಶದಲ್ಲಿರುವ ಕೃತಕ ಕೆರೆಗಳಿಗೆ ನೀರು ಹರಿಸಿ ಮೊದಲಿನಂತೆ ಬೋಟ್ ಗಳಲ್ಲಿ ಬೂದಿ ತುಂಬಿ ಟ್ಯಾಂಕರ್ಗಳ ಮೂಲಕವೇ ಬೂದಿ ಸಾಗಿಸಬೇಕು. ಕೆರೆಗಳ ಸುತ್ತ ಸಂಪೂರ್ಣ ತಂತಿ ಬೇಲಿ ನಿರ್ಮಿಸಬೇಕು. ಬೂದಿ ನೀರು ಹಾರು ಬೂದಿಯಿಂದ ಸುತ್ತಲಿನ ರೈತರಿಗೆ, ಜನಜಾನುವಾರುಗಳಿಗೆ ಯಾವುದೇ ಸಮಸ್ಯೆಗಳಾಗದಂತೆ ಕ್ರಮವಹಿಸಬೇಕು’ ಎಂದರು.

ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಅವರು ರೈತರು ಹಾಗೂ ಎನ್ಟಿಪಿಸಿ ಅಧಿಕಾರಿಗಳೊಂದಿಗೆ ಹಾರು ಬೂದಿ ಕೆರೆ ಪ್ರದೇಶಕ್ಕೆ ಹಾಗೂ ಸುತ್ತಲಿನ ರೈತ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ರೈತರ ಸಮಸ್ಯೆಗಳನ್ನು ಆಲಿಸಿದರು.

ಹಾರು ಬೂದಿಯಿಂದ ನಿಯಂತ್ರಣಕ್ಕಾಗಿ ರೂಪಿಸಿರುವ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಎನ್ಟಿಪಿಸಿ ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ, ರೈತ ಸಂಘ ಹಾಗೂ ಸಂತ್ರಸ್ತರ ಬೇಡಿಕೆಗ ಬಗ್ಗೆ ಎನ್ಟಿಪಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸುವುದಾಗಿ ಭರವಸೆ ನೀಡಿದರು.

ರೈತ ಮುಖಂಡರಾದ ಶಶಿಕಾಂತ ಬಿರಾದಾರ, ಸುನಿಲ ಹಿರೇಮಠ, ಯಮನೂರು ಬಿಸ್ಟಗೊಂಡ, ಶ್ರೀಶೈಲ ಬಾಡಗಿ, ಸಂಗಣ್ಣ ಗೋಲಗೊಂಡ, ಮಂಜುನಾಥ ಅರಕೇರಿ, ರಾಜುಗೌಡ ಪಾಟೀಲ್, ರಾಜು ತಳವಾರ, ಗ್ಯಾನು ಪಾಟೀಲ, ಎನ್ಟಿಪಿಸಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-26-1598406072

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.