ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಕೋವಿಡ್-19‌ ಸೋಂಕಿತರ ಸಂಖ್ಯೆ ಶತಕದತ್ತ

Last Updated 30 ಮೇ 2020, 13:20 IST
ಅಕ್ಷರ ಗಾತ್ರ

ವಿಜಯಪುರ: ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿರುವ 11 ಜನ ಕೂಲಿಕಾರ್ಮಿಕರಲ್ಲಿ ಶನಿವಾರ ಕೋವಿಡ್‌-19 ಸೋಂಕು ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 96ಕ್ಕೆ ಏರಿಕೆಯಾಗಿದೆ.

ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದ 14 ವರ್ಷದ ಬಾಲಕಿ ಸೇರಿದಂತೆ ನಾಲ್ವರು ಮಹಿಳೆಯರಿಗೆ ಹಾಗೂ 15 ವರ್ಷದ ಬಾಲಕ ಸೇರಿದಂತೆ ಏಳು ಜನ ಪುರುಷರಿಗೆ ಸೋಂಕು ದೃಢವಾಗಿದೆ.

ಸೋಂಕಿತರ ಸಂಖ್ಯೆ ಶತಕದ ಗಡಿ ಸಮೀಪಿಸಿದ್ದು, ಈಗಾಗಲೇ ಸೋಂಕಿತ ಐವರು ಸಾವಿಗೀಡಾಗಿದ್ದಾರೆ. 54 ಜನ ಗುಣಮುಖರಾಗಿದ್ದಾರೆ. 37 ಜನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT