ಇಂಡಿ: ತಾಲ್ಲೂಕಿನ ಚಿಕ್ಕಬೇವನೂರ ಗ್ರಾಮ ಪಂಚಾಯಿತಿಯ ಈ ಹಿಂದಿನ ಅಭಿವೃಧ್ಧಿ ಅಧಿಕಾರಿಯಾಗಿದ್ದ, ಸದ್ಯ ಆಲಮೇಲ ತಾಲ್ಲೂಕಿನ ರಾಮನಹಳ್ಳಿ ಗ್ರಾ.ಪಂ. ಅಭಿವೃಧ್ಧಿ ಅಧಿಕಾರಿ ಪ್ರಭಾವತಿ ಕುಂಬಾರ ಅವರು ಖಾಸಗಿ ಜಮೀನಿನಲ್ಲಿ ಚಿತಾಗಾರ ನಿರ್ಮಿಸಿ ಸರ್ಕಾರದ ಅನುದಾನ ದುರ್ಬಳಕೆ ಮಾಡಿದ್ದರಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್ ಅಮಾನತು ಮಾಡಿದ್ದಾರೆ.

2019-20ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ₹71,712 ದುರ್ಬಳಕೆ ಮಾಡಿದ್ದರು. ಈ ಅವಧಿಯಲ್ಲಿ ಪ್ರಭಾವತಿ ಕುಂಬಾರ ಅವರು ಚಿಕ್ಕಬೇವನೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು, ನಿಯಮ ಬಾಹಿರವಾಗಿ ಚಿತಾಗಾರ ಕಟ್ಟಿದ್ದು ಕಂಡು ಬಂದಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ.

ರಾಜಶೇಖರ ಕಟ್ಟೀಮನಿ ಎಂಬ ರೈತರ ಜಮೀನಿನಲ್ಲಿ ಈ ಚಿತಾಗಾರ ನಿರ್ಮಾಣ ಮಾಡಲಾಗಿದೆ. ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ರಾಜಶೇಖರ ಅವರು ‘ಇದು ನನ್ನ ಜಮೀನಿದೆ,ಇಲ್ಲಿ ಕಟ್ಟಬೇಡಿ’ ಎಂದು ಮನವಿ ಮಾಡಿದರೂ ‘ಇದು ಸ್ಮಶಾನ ಭೂಮಿ ಇದೆ. ಇಲ್ಲಿ ಕಟ್ಟಲು ತೊಂದರೆ ಮಾಡಿದರೆ ಪೊಲೀಸರನ್ನು ಕರೆಸಬೇಕಾಗುತ್ತದೆ’ ಎಂದು ಹೆದರಿಸಿ, ಕೊನೆಗೆ ಪೊಲೀಸರಿಗೂ ಮಾಹಿತಿ ನೀಡಿ ಕರೆಯಿಸಿ ದರ್ಪದಿಂದ ಚಿತಾಗಾರ ನಿರ್ಮಿಸಿದ್ದರು ಎಂದು ಕಟ್ಟೀಮನಿ ಅವರು ತಾಲ್ಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದರು.

‘ಚಿಕ್ಕಬೇವನೂರ ಗ್ರಾ.ಪಂ.ವ್ಯಾಪ್ತಿಯಲ್ಲಿ ಖಾಸಗಿ ಜಮೀನಿನಲ್ಲಿ ಚಿತಾಗಾರ ನಿರ್ಮಾಣ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಭಂಧಿಸಿದಂತೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆ ಸಂದರ್ಭದಲ್ಲಿ ‘ಖಾಸಗಿ ಜಮೀನಿನಲ್ಲಿ ಚಿತಾಗಾರ ನಿರ್ಮಿಸಿ ಸರ್ಕಾರದ ಹಣ ದುರ್ಬಳಕೆ ಮಾಡಿದ್ದೀರಿ ಎಂದು ಕಾನೂನಿನ ಪ್ರಕಾರ ಅಂದಿನ ಪಿಡಿಒ ಪ್ರಭಾವತಿ ಕುಂಬಾರ್ ಅವರನ್ನು ಈಗ ಅಮಾನತ್ತಿಲ್ಲಿಟ್ಟು ಆದೇಶ ಮಾಡಿದ್ದಾರೆ’ ಎಂದು ತಾಲ್ಲೂಕು ಪಂಚಾಯತಿ ಇಒ ಭೀಮಾಶಂಕರ ಕನ್ನೂರ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-26-2025274159

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.