ವಿಜಯಪುರ: ನಗರದ ಪೇಜಾವರ ಮಠದ ಅಖಿಲ ಭಾರತ ಮಧ್ವ ಮಹಾಮಂಡಲ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ನಿರ್ಮಾಣಕ್ಕೆ ₹25 ಲಕ್ಷ ಅನುದಾನ ಮಂಜೂರಾದ ಹಿನ್ನಲೆಯಲ್ಲಿ ಕಟ್ಟಡ ಕಾಮಗಾರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಚೆಗೆ ಭೂಮಿಪೂಜೆ ನೆರವೇರಿಸಿದರು.

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರವರು ಹಿಂದೂ ಸನಾತನ ಧರ್ಮದ ಉಳಿವು ಮತ್ತು ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ದೇಶದಾದ್ಯಂತ ಪ್ರವಾಸ ಮಾಡಿ ಧರ್ಮಜಾಗೃತಿ ಮೂಡಿಸಿದ ಅವರ ಕಾರ್ಯ ಶ್ಲಾಘನೀಯ. ಪ್ರಸ್ತುತ ಪೀಠಾಧಿಪತಿ ವಿಶ್ವಪ್ರಸನ್ನತೀರ್ಥ ಶ್ರೀಗಳು ಕೂಡ ಅದೇ ದಾರಿಯಲ್ಲಿ ಸಾಗುತ್ತಿರುವುದು ಸಂತಸದ ವಿಚಾರ’ ಎಂದು ತಿಳಿಸಿದರು.

ಐದು ದಶಕಗಳ ಹಿಂದೆ ಹಿಂದುಳಿದ ವಿಜಯಪುರ ಜಿಲ್ಲೆಯಲ್ಲಿ ವಿದ್ಯಾರ್ಥಿ ನಿಲಯ ತೆರೆದು ಬಡವರ ವಿದ್ಯಾಭ್ಯಾಸಕ್ಕೆ ಅನಕೂಲ ಕಲ್ಪಿಸಿಕೊಟ್ಟ ಅವರ ಕಾಯಕ ನಿಜವಾಗಿಯೂ ಪ್ರಶಂಶನೀಯ. ನೂತನ ಕಟ್ಟಡ ನಿರ್ಮಾಣಕ್ಕೆ ಸಿದ್ಧಸಿರಿ ಸಂಸ್ಥೆಯಿಂದಲೂ ₹21 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು. ಜೊತೆಗೆ ಇತರ ದಾನಿಗಳಿಂದ ಸಹ ಸಹಾಯ ಒದಗಿಸುವುದಾಗಿ ಭರವಸೆ ನೀಡಿದರು.

ಶ್ರೀಮಠದ ಗೌರವಾಧ್ಯಕ್ಷ ಗೋಪಾಲ ನಾಯಕ ಮಾತನಾಡಿ, ‘ಬಸನಗೌಡರಿಗೂ ಪೇಜಾವರ ಮಠಕ್ಕೂ ದೀರ್ಘಕಾಲದ ಸಂಬಂಧವಿದ್ದು, ಮಠದ ಅಭಿವೃದ್ಧಿಗೆ ಅವರ ಕೊಡುಗೆ ಮಹತ್ವದ್ದಾಗಿದೆ’ ಎಂದು ಹೇಳಿದರು.

ಶ್ರೀಮಠದ ಪರವಾಗಿ ಶಾಸಕ ಬಸನಗೌಡರಿಗೆ ಫಲ ಪುಷ್ಪ ಮತ್ತು ಶ್ರೀಕೃಷ್ಣ ವಿಗ್ರಹ ನೀಡಿ ಗೌರವಿಸಲಾಯಿತು. ಇದೇ ಸಮಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿಜಯಪುರ ಪ್ರತಿನಿಧಿ ಸತೀಶಚಂದ್ರ ಕುಲಕರ್ಣಿ ಮತ್ತು ವಿಜಯಪುರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ ಮತ್ತು ವಿಜಯಪುರ ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಗಿರೀಶ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.

ಶ್ರೀಮಠದ ಸದಸ್ಯರಾದ ಮಂಗಲಗಿ, ಮಲಘಾಣ, ವಿ.ಸಿ. ಕುಲಕರ್ಣಿ, ಮೋಹನ ಕೌತಾಳ, ಅಶೋಕರಾವ್, ವಿಕಾಸ ಪದಕಿ, ವಿಜಯ್ ಜೋಶಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-26-917825172

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.