ವಿಜಯಪುರ: ‘ಬಸವನ ಬಾಗೇವಾಡಿ ಉಪ ವಿಭಾಗದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದ ತೋಟದ ಮನೆ, ದೇವಸ್ಥಾನದಲ್ಲಿ ಕಳವು, ಬಂಗಾರದ ತಾಳಿಸರ ಸುಲಿಗೆ, ಮೋಸ ಮಾಡಿ ಕಳವು, ರೈತರ ಜಮೀನಿನಲ್ಲಿರುವ ಕೊಳವೆಬಾವಿ ಪಂಪ್ಸೆಟ್ ಕಳವು ಸೇರಿದಂತೆ ಒಟ್ಟು 22 ವಿವಿಧ ಪ್ರಕರಣಗಳಲ್ಲಿ 36 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ₹1,27,38,800 ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು, 2 ಕಾರು ಮತ್ತು 17 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಮುದ್ದೇಬಿಹಾಳ ಬಸ್ತಿ ಓಣಿಯ ಮನೆಯಲ್ಲಿ ನಡೆದ ಕಳವು ಪ್ರಕರಣದಲ್ಲಿ 4 ಜನ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಪತ್ತೆ ಮಾಡಿ, ಅವರಿಂದ 9.5 ತೊಲಿ ಬಂಗಾರದ ಆಭರಣಗಳು ಮತ್ತು ₹1,75 ಲಕ್ಷ ನಗದು ಸೇರಿದಂತೆ ಒಟ್ಟು ₹ 12,75 ಲಕ್ಷ ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

‘ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿರಶ್ಯಾಳ ಗ್ರಾಮದ ನಿರ್ಮಲಾ ಪ್ರಭು ಗಬಸಾವಳಗಿ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಅವರ ಕೊರಳಲ್ಲಿದ್ದ 37 ಗ್ರಾಂ ತೂಕದ ತಾಳಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿ ರಮೇಶ ಚಿತ್ತರಗಿ (34) ಅವರನ್ನು ಬಂಧಿಸಿ, ₹1,95 ಲಕ್ಷ ಬೆಲೆಯ 37 ಗ್ರಾಂ ತೂಕದ ಬಂಗಾರದ ತಾಳಿಸರವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದರು.

‘ತಾಳಿಕೋಟೆ ಶಹರದ ಗಂಗಾ ಡಾಬಾದ ಮುಂದೆ ನಿಲ್ಲಸಿದ್ದ ಬಜಾಜ್ ಪಲ್ಸರ್ ಬೈಕ್ ಕಳವು ಮಾಡಿದ್ದ ಮುದ್ದೇಬಿಹಾಳ ತಾಲ್ಲೂಕಿನ ಜಮ್ಮಲದಿನ್ನಿದ ಆರೋಪಿ ಪ್ರಕಾಶ ತಳವಾರ (41) ಅವರನ್ನು ಬಂಧಿಸಿ, ಆರೋಪಿಯು ಕಳ್ಳತನ ಮಾಡಿದ್ದ 5 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ತಾಪ್ತಿಯಲ್ಲಿ ಮೋಸ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರಿಬಿದನೂರ ತಾಲ್ಲೂಕಿನ ನಗರಗೇರೆಯ ಆರೋಪಿ ಅನೀಲ (23), ಕಾರ್ತಿಕ್ (28) ಎಂಬುವವರನ್ನು ಬಂಧಿಸಿ 1 ತೊಲೆ ಬಂಗಾರದ ಬೋರಮಾಳ, 1 ತೊಲೆಯ ಬಂಗಾರದ ಮೆಲಗುಂಡ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ’ ಎಂದರು.

‘ಕೂಡಗಿ ಪೊಲೀಸ್ ಠಾಣೆ ವ್ಯಾಪ್ತಿಯ ಮಸೂತಿ ಗ್ರಾಮದ ದಾನಮ್ಮ ಪರಯ್ಯ ಗಣಾಚಾರಿ ಅವರ ಮನೆ ಬಾಗಿಲ ಕೀಲಿ ಒಡೆದು, 40 ಗ್ರಾಂ ಬಂಗಾರದ ಆಭರಣಗಳನ್ನು ಕಳವು ಮಾಡಿದ್ದ ಬಾಗಲಕೋಟೆ ಜಿಲ್ಲೆ ಕಲಾದಗಿ ಅಬ್ದುಲ್ ಚೀನಿ (30) ಮತ್ತು ಲೋಕಾಪುರದ ಹೀರಾ ಹುಣಸಿಮರದ (29) ಅವರನ್ನು ಪತ್ತೆ ಮಾಡಿ, ಆರೋಪಿಗಳು ಕೃತ್ಯಕ್ಕೆ ಬಳಸಿದ ಎರಡು ಬೈಕ್, ಕಳುವಾಗಿದ್ದ ₹4,50 ಲಕ್ಷ ಮೌಲ್ಯದ ಸುಮಾರು 40 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

₹5135 ಲಕ್ಷ ಮೌಲ್ಯದ ವಸ್ತು ವಶ

‘ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ನಾಳ ಸೀಮೆಯ ಜಯರಾಮ ನಾಯಕ ಅವರ ತೋಟದ ಮನೆಯ ಬಾಗಿಲು ಮುರಿದು ಬಂಗಾರ ಬೆಳ್ಳಿ ಆಭರಣ ಮತ್ತು ನಗದು ಹಣವನ್ನು ಕಳೆದ ಜನವರಿ 21 ರಂದು ಕಳ್ಳತನ ಮಾಡಿದ್ದ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು. ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರಿನ ಗುರುರಾಜ (32) ಗುರುಕುಮಾರ (28) ಸೈಯದ್ ಅಸ್ಲಮ್ (32) ಎಂಬುವವರನ್ನು ಬಂಧಿಸಿ ಆರೋಪಿಗಳಿಂದ ಸುಮಾರು 26 ತೋಲೆ ಬಂಗಾರ 3.5 ಕೆ.ಜಿ ಬೆಳ್ಳಿ ₹430 ಲಕ್ಷ ನಗದು ಮತ್ತು ಕೃತ್ಯಕ್ಕೆ ಬಳಿಸಿದ ಇನೋವಾ ಕಾರ್ ಸೇರಿ ಒಟ್ಟು ₹5135 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದರು.

ಬನಶಂಕರಿ ಹುಂಡಿ ಕದ್ದವರ ಬಂಧನ

‘ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯ ವಂದಾಲ ಗ್ರಾಮದ ಬನಶಂಕರಿ ಗುಡಿಯ ಮೇನ್ ಗೇಟ್ ಚಾವಿ ಮುರಿದು ಗರ್ಭಗುಡಿಯ ಬಾಗಿಲಿಗೆ ಹಾಕಿದ ಚೀಲಕವನ್ನು ಮುರಿದು ಒಳಗೆ ಹೋಗಿ ದೇವಿಯ ಮೈಮೇಲಿನ ಒಟ್ಟು ₹95 ಸಾವಿರ ಕಿಮ್ಮತ್ತಿನ ಬಂಗಾರದ ಆಭರಣ ಹಾಗೂ ಸುಮಾರು ₹ 40 ಸಾವಿರ ಇದ್ದ ಕಾಣಿಕೆ ಹುಂಡಿಯನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಎಸ್ಪಿ ನಿಂಬರಗಿ ತಿಳಿಸಿದರು. ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಡಗುಂದಿಯ ಸೋಮನಾಥ ಕೂಚಿ (21) ಮತ್ತು ನೆರೆಯ ಮಹರಾಷ್ಟ್ರದ ಸೋಲಾಪುರ ಜಿಲ್ಲೆಯ ಲವಂಗಿಯ ಪ್ರಕಾಶ ಬಗಲಿ(33) ಬಂಧಿಸಿ ಆರೋಪಿಗಳ ಬಳಿಯಿಂದ ಕೃತ್ಯಕ್ಕೆ ಬಳಸಿದ್ದ ಬೈಕ್ 5 ಗ್ರಾಂ ತೂಕದ ಬಂಗಾರದ ಬೋರಮಾಳ 5 ಗ್ರಾಂ ತೂಕದ ಬಂಗಾರದ ಮೇಲಗುಂಡ ಮತ್ತು 4 ಗ್ರಾಂ ತೂಕ ಬಂಗಾರದ ತಾಳಿ ಸರವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

ಕವಡಿಮಟ್ಟಿ ಕಳವು ಪ್ರಕರಣ ಪತ್ತೆ

‘ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಕವಡಿಮಟ್ಟಿ ಗ್ರಾಮದ ಮನೆಯೊಂದರ ಕೀಲಿ ಒಡೆದು ದೇವರ ಕೋಣೆಯಲ್ಲಿದ್ದ ಒಟ್ಟು 87 ಗ್ರಾಂ ಬಂಗಾರದ ಆಭರಣ 60 ಗ್ರಾಂ ಬೆಳ್ಳಿಯ ಆಭರಣ ಹಾಗೂ ₹50 ಸಾವಿರ ನಗದು ಸೇರಿದಂತೆ ₹749 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಲಕ್ಷ್ಮಣ ನಿಂಬರಗಿ ತಿಳಿಸಿದರು. ‘ಕವಡಿಮಟ್ಟಿಯ ಬಸವರಾಜ ಹೋಕ್ರಾಣಿ(34) ಎಂಬಾತನನ್ನು ಬಂಧಿಸಿ ಆರೋಪಿಯಿಂದ 89 ಗ್ರಾಂ ಬಂಗಾರದ ಆಭರಣಗಳು 110 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ₹37932 ಸೇರಿದಂತೆ ಒಟ್ಟು ₹755432 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.