ವಿಜಯಪುರ: ‘ಯಾವ ಸಮಾಜದ ರಾಜಕೀಯೇತರ ಸಂಘಟನೆಯ ಬೇರು ಗಟ್ಟಿಯಾಗಿರುತ್ತೊ, ಆ ಸಮುದಾಯ ರಾಜಕೀಯ ಅಧಿಕಾರವನ್ನು ಪಡೆದು ಆಳುವ ವರ್ಗವಾಗುತ್ತದೆ’ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಹೇಳಿದರು.

ನಗರದ ದಲಿತ ವಿದ್ಯಾರ್ಥಿ ಪರಿಷತ್ತಿನ ಕಛೇರಿಯಲ್ಲಿ ಆಯೋಜಿಸಿದ್ದ ದಾದಾಸಾಹೇಬ್ ಕಾನ್ಷಿರಾಮ್ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಶೋಷಿತ ಸಮುದಾಯಗಳ ಸಮಗ್ರ ಅಭಿವೃದ್ಧಿಯು ಅವರ ರಾಜಕೀಯ ಅಧಿಕಾರದಿಂದ ಮಾತ್ರ ಸಾಧ್ಯ ಎಂದು ಪ್ರಯೋಗಾರ್ಥವಾಗಿ ದೇಶದ ಬಹುದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ ಸಾಧಿಸಿ ತೋರಿಸಿದ್ದು ಮಾದರಿಯಾಗಿದೆ’ ಎಂದರು.

ಪರಿಷತ್ತಿನ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ ಮಾತನಾಡಿದರು. ಮುಖಂಡರಾದ ಮಹಾದೇವ ಚಲವಾದಿ, ಪ್ರೇಮಾ ಕೋಳಿ, ದಾವಲ್ ನಾಯ್ಕೋಡಿ, ಸಂದೇಶ್ ಕುಮಟಗಿ, ಹುಚ್ಚಪ್ಪ ಭಾವಿಮನಿ, ವಿರೇಶ ಪೂಜಾ, ಭಾಗ್ಯಶ್ರೀ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-26-1681921821

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.