ವಿಜಯಪುರ: ಚಡಚಣ ತಾಲ್ಲೂಕಿನ ಭೀಮಾ ನದಿ ತೀರದ ಗೋವಿಂದಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಶುಕ್ರವಾರ ಗುಂಪೊಂದು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದೆ.

ಚಡಚಣ ಪಟ್ಟಣದ ಒಂದೇ ಕುಟುಂಬಕ್ಕೆ ಸೇರಿದ ದುಂಡಪ್ಪ ರೇವಣ ಸಿದ್ದಪ್ಪ ನಿರಾಳೆ(65), ಶಿವಪುತ್ರ ರೇವಣ ಸಿದ್ದಪ್ಪ ನಿರಾಳೆ (58), ಚಂದ್ರಕಾಂತ ಅಲಿಯಾಸ್ ಚಂದು ರೇವಣಸಿದ್ದಪ್ಪ ನಿರಾಳೆ (55), ರಾಹುಲ್ ಶಿವಪುತ್ರ ನಿರಾಳೆ(25), ಸಮರ್ಥ ಶಿವಪುತ್ರ ನಿರಾಳೆ (23) ಮತ್ತು ಚಡಚಣದ ಶಬ್ಬೀರ್ ಬಾಬುಸಾಬ ಅತ್ತಾರ(45) ಕೊಲೆಯಾದವರು.

ದೂಸೂರ ಗ್ರಾಮದ ಅರವಿಂದ ಕಟಗಿ(72), ಕಾತ್ರಾಳ ಗ್ರಾಮದ ಜೆಸಿಬಿ ಚಾಲಕ ಸಂದೀಪ ಮಾನೆ (23) ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾಗಿರುವ ಶಶಿಕಾಂತ ತೇಲಿ ಕುಟುಂಬಕ್ಕೆ ಸೇರಿದ ಸುಮಾರು 25 ಎಕರೆ ಜಮೀನನ್ನು ನಿರಾಳೆ ಕುಟುಂಬದವರು ಖರೀದಿಸಿದ್ದರು ಎಂಬುದೇ ಈ ಕೃತ್ಯಕ್ಕೆ ಕಾರಣ’ ಎಂದು ತಿಳಿದು ಬಂದಿದೆ.

‘ಪ್ರಾಥಮಿಕ ಮಾಹಿತಿ ಪ್ರಕಾರ, ಗೋವಿಂದಪುರದ ಕಲ್ಲನಗೌಡ ಈಶ್ವರಗೌಡ ಪಾಟೀಲ ಕಡೆಯವರು ಕೊಲೆ ಮಾಡಿಸಿದ್ದಾರೆ ಎಂಬ ಮಾಹಿತಿಯಿದೆ. ಆರೋಪಿಗಳ ಪತ್ತೆಗೆ ಶೋಧ ನಡೆದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಘಟನೆ ವಿವರ:

ಚಡಚಣ ಪಟ್ಟಣದ ನಿರಾಳೆ ಕುಟುಂಬದವರು ಗೋವಿಂದಪುರ ಗ್ರಾಮದಲ್ಲಿ ಇರುವ ತೇಲಿ ಕುಟುಂಬಕ್ಕೆ ಸೇರಿದ್ದ 25 ಎಕರೆ ವಿವಾದಿತ ಜಮೀನನ್ನು ಆರು ತಿಂಗಳ ಹಿಂದೆ ಖರೀದಿಸಲು ಮುಂದಾಗಿದ್ದರು. ಆಗ ಮುಖ್ಯ ಆರೋಪಿ ಪಾಟೀಲ ಮತ್ತು ಆತನ ಕಡೆಯವರು, ವಿವಾದಿತ ಜಮೀನು ಖರೀದಿಸದಂತೆ ಎಚ್ಚರಿಕೆ ನೀಡಿದ್ದರು ಎಂದು ತಿಳಿದು ಬಂದಿದೆ.

ವಿರೋಧದ ನಡುವೆಯೂ ನಿರಾಳೆ ಕುಟುಂಬದವರು ಜಮೀನು ಖರೀದಿಸಿದ್ದರು. 15 ವರ್ಷಗಳಿಂದ ಉಳುಮೆ ಮಾಡದೇ ಪಾಳು ಬಿದ್ದಿದ್ದ ಜಮೀನನ್ನು ಖರೀದಿಸಿದ ನಿರಾಳೆ ಕುಟುಂಬದವರು ಶುಕ್ರವಾರ ಟ್ರ್ಯಾಕ್ಟರ್, ಜೆಸಿಬಿ ಮೂಲಕ ಹೊಲವನ್ನು ಸ್ವಚ್ಛಗೊಳಿಸಿ, ಕೃಷಿಗೆ ಸಜ್ಜುಗೊಳಿಸುತ್ತಿದ್ದರು. ಆಗ ಆರೋಪಿ ಪಾಟೀಲನ ಕಡೆಯ 15 ರಿಂದ 20 ಜನರು ಒಳಗೊಂಡ ದುರ್ಷರ್ಮಿಗಳು ಏಕಾಏಕಿ ದಾಳಿ ನಡೆಸಿದರು. ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಕೊಚ್ಚಿ ಹಾಕಿದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕೃತ್ಯಕ್ಕೆ ಮುನ್ನ ಆರೋಪಿಗಳು ಗುಂಡು ಹಾರಿಸಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಈ ಬಗ್ಗೆ ವೈದ್ಯಕೀಯ ವರದಿ ಬಂದ ಬಳಿಕ ಖಚಿತವಾಗಿ ತಿಳಿಯಲಿದೆ’ ಎಂದು ಹೇಳಿದರು.

ಕೊಲೆಯಾದ ನಿರಾಳೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಗಾಯಾಳುಗಳು ಮತ್ತು ವಿಜಯಪುರ ಬಿಎಲ್ ಡಿಇ ಆಸ್ಪತ್ರೆಗೆ, ಶವಗಳನ್ನು ಶವಾಗಾರಕ್ಕೆ ರವಾನಿಸಲಾಗಿದೆ.

ತೇಲಿ ಪಾಟೀಲ ನಡುವಿನ ಹಳೆ ವೈಷಮ್ಯ: ನಿರಾಳೆ ಕುಟುಂಬ ಆಹುತಿ!

‘ಚಡಚಣ ತಾಲ್ಲೂಕಿನ ಗೋವಿಂದಪುರದ ತಳವಾರ ಸಮುದಾಯಕ್ಕೆ ಸೇರಿದ್ದ ಕಲ್ಲನಗೌಡ ಪಾಟೀಲ ಅವರ ಪುತ್ರ ಶಿವಾನಂದ ಎಂಬುವರು ಅದೇ ಊರಿನ ಗಾಣಿಗ ಸಮುದಾಯಕ್ಕೆ ಸೇರಿದ ಶಶಿಕಾಂತ ತೇಲಿ ಅವರ ಪುತ್ರಿಯನ್ನು ಈ ಹಿಂದೆ ಅಪಹರಿಸಿಕೊಂಡು ಹೋಗಿದ್ದರು. ಇದರಿಂದ ಸಿಟ್ಟಿಗೆದ್ದು ತೇಲಿ ಕುಟುಂಬದ ಕಡೆಯವರು ಶಿವಾನಂದ (28) ಅವರನ್ನು ಕೊಲೆ ಮಾಡಿ ಶಿಕ್ಷೆಗೆ ಒಳಗಾಗಿದ್ದರು. ಈ ಪ್ರಕರಣದ ಬಳಿಕ ಆರೋಪಿಗಳು ಗೋವಿಂದಪುರದಲ್ಲಿ ಇದ್ದ ತಮ್ಮ ಜಮೀನನ್ನು ಬಿಟ್ಟು ಬೇರೆ ಊರಿಗೆ ಹೊರಟು ಹೋಗಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ‘ಅಂದಿನಿಂದ ಇಂದಿನವರೆಗೆ ಅವರ ಜಮೀನು ಉಳಿಮೆ ಇಲ್ಲದೇ ಹಾಗೇ ಉಳಿದಿತ್ತು. ಅಲ್ಲದೇ ಈವರೆಗೆ ಅದನ್ನು ಯಾರೂ ಖರೀದಿಸಿರಲಿಲ್ಲ. ಆದರೆ ಚಡಚಣದ ನಿರಾಳೆ ಕುಟುಂಬದವರು ವಿರೋಧದ ನಡುವೆಯೂ ಜಮೀನು ಖರೀದಿಸಿದ್ದರು. ಈ ಕಾರಣಕ್ಕೆ ಆರು ಜನರ ಕೊಲೆಯಾಗಿದೆ ಎಂಬುದು ಪ್ರಾಥಮಿಕ ಹಂತದ ತನಿಖೆಯಿಂದ ಗೊತ್ತಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಬಿಗಿ ಭದ್ರತೆ:

ಕೊಲೆ ಹಿನ್ನೆಲೆಯಲ್ಲಿ ಗೋವಿಂದಪುರ ಮತ್ತು ಚಡಚಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಡಿ ಡಿಎಸ್ಪಿ, ಚಡಚಣ ಸಿಪಿಐ ಜೊತೆಗೆ ಮೂರು ಡಿಎಆರ್, ನಾಲ್ಕು ಕೆಎಸ್ಆರ್ಪಿ ತಂಡವನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.